ಬೆಂಗಳೂರು: ಪಾರ್ಟ್‌ಟೈಂ ಕೆಲಸದ ಸೋಗಲ್ಲಿ 1.07 ಲಕ್ಷ ವಂಚನೆ, ಕಂಗಾಲಾದ ಯುವತಿ

By Kannadaprabha News  |  First Published Feb 16, 2024, 1:17 PM IST

ಅಕ್ಕಿಪೇಟೆ ಮುಖ್ಯರಸ್ತೆಯ ಭುವ ನೇಶ್ವರಿ ಎಂಬುವವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿ ಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.


ಬೆಂಗಳೂರು(ಫೆ.16):  ಪಾರ್ಟ್ ಟೈಂ ಕೆಲಸದ ಸೋಗಿನಲ್ಲಿ ಸೈಬರ್ ವಂಚಕರು ಯುವತಿಯಿಂದ ₹1.07 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಕಿಪೇಟೆ ಮುಖ್ಯರಸ್ತೆಯ ಭುವ ನೇಶ್ವರಿ (26) ಎಂಬುವವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿ ಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.

ಏನಿದು ದೂರು?: 

Tap to resize

Latest Videos

ದೂರುದಾರೆ ಭುವನೇಶ್ವರಿ ಅವರು ಚಾಮರಾಜಪೇಟೆಯ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಶೈಲ ಎಂಬ ವ್ಯಕ್ತಿ ಭುವನೇಶ್ವರಿ ವಾಟ್ಸಾಪ್‌ಗೆ ಎಚ್.ಆರ್.ಮ್ಯಾನೇಜ‌ರ್ ಎಂಬ ಸಂದೇಶ ಬಂದಿದೆ. ಅದರಲ್ಲಿ ಮನೆಯಲ್ಲಿ ಕುಳಿತು ಮಾಡುವ ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ತಿಳಿಸಿ ದ್ದಾರೆ. ಇದಕ್ಕೆ ಭುವನೇಶ್ವರಿ ಅವರು ಒಪ್ಪಿದ ಬಳಿಕ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ ಗೂಗಲ್ ಫಾರ್ಮ್ ಭರ್ತಿ ಮಾಡುವ ಕೆಲಸ ಮಾಡಿಸಿಕೊಂಡು ಭುವನೇಶ್ವರಿಗೆ ₹300 ಹಾಕಿದ್ದಾರೆ. ನಂತರ ಟೆಲಿಗ್ರಾಮ್ ಆ್ಯಪ್‌ನಲ್ಲಿ ಒಂದು ಟಾಸ್ಕ್‌ ಇದ್ದು, ₹850 ಹಾಕಿದರೆ, ಅದಕ್ಕೆ ₹250 ಸೇರಿಸಿ ನೀಡುವುದಾಗಿ ಹೇಳಿದ್ದಾರೆ. ಅದರಂತೆ ಭುವನೇಶ್ವರಿ ಅವರು ₹850 ಹಾಕಿದ್ದಾರೆ.

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಇದಕ್ಕೆ ಪ್ರತಿ ಯಾಗಿ ₹1,100 ನೀಡಲಾಗಿದೆ. ಇದೇ ರೀತಿ ಭುವನೇಶ್ವರಿ ಅವರಿಂದ ವಿವಿಧ ಹಂತಗಳಲ್ಲಿ ಒಟ್ಟು ₹1.07 ಲಕ್ಷ ಹಾಕಿಸಿ ಕೊಳ್ಳಲಾಗಿದೆ. ಬಳಿಕ ಈ ಹಣವನ್ನು ವಾಪಾಸ್ ಕೇಳಿದ್ದಕ್ಕೆ ₹1.40 ಲಕ್ಷ ಹಾಕಿದರೆ ₹1.70 ಲಕ್ಷ ವಾಪಾಸ್ ಕೊಡುವುದಾಗಿ ಹೇಳಿದ್ದಾರೆ.

ಎಚ್ಚೆತ್ತುಕೊಂಡ ಭುವನೇಶ್ವರಿ ಮತ್ತೆ ಹಣ ಹಾಕುವ ಗೋಜಿಗೆ ಹೋಗಿಲ್ಲ. ತಾನು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಅರಿವಾಗಿ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

click me!