ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ
ನವೆಂಬರ್ 20ರಿಂದ ಆರಂಭವಾಗಲಿರುವ ಫುಟ್ಬಾಲ್ ವಿಶ್ವಕಪ್ ಟೂರ್ನಿ
ತಮ್ಮಿಷ್ಟದ ಫುಟ್ಬಾಲ್ ತಂಡವನ್ನು ಹೆಸರಿಸಿದ ಯುವರಾಜ್ ಸಿಂಗ್
ನವದೆಹಲಿ(ನ.17): 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಕತಾರ್ ಆತಿಥ್ಯವನ್ನು ವಹಿಸಿದ್ದು, ನವೆಂಬರ್ 20ರಂದು ಜಾಗತಿಕ ಫುಟ್ಬಾಲ್ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಈಗಾಗಲೇ ಜಗತ್ತಿನಾದ್ಯಂತ ಫುಟ್ಬಾಲ್ ಜ್ವರ ಆವರಿಸಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ತಮ್ಮ ನೆಚ್ಚಿನ ಫುಟ್ಬಾಲ್ ಹಾಗೂ ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಯಾರು ಎನ್ನುವುದನ್ನು ಹೆಸರಿಸಿದ್ದಾರೆ. ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಮ್ಮ ನೆಚ್ಚಿನ ತಂಡವಾಗಿದ್ದು, ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ನೆಚ್ಚಿನ ಆಟಗಾರ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಕ್ರಿಕೆಟ್‌ನಷ್ಟೇ ಫುಟ್ಬಾಲ್ ಕ್ರೀಡೆಯನ್ನು ಎಂಜಾಯ್ ಮಾಡುತ್ತಾರೆ ಎನ್ನುವುದು ರಹಸ್ಯವಾಗಿಯೇನು ಉಳಿದಿಲ್ಲ. ಈ ವರ್ಷರಂಭದಲ್ಲಿ ಇಂಗ್ಲೀಷ್ ಫುಟ್ಬಾಲ್ ದಿಗ್ಗಜ ತಂಡವಾದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದರು. ಇದೀಗ ಈ ಬಾರಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಪ್ರಸಾರದ ಮಾಧ್ಯಮ ಹಕ್ಕು ಹೊಂದಿರುವ ವೈಕಾಂ 18 ಸ್ಪೋರ್ಟ್ಸ್ ಜತೆ ಮಾತನಾಡಿರುವ ಯುವಿ, ತಮ್ಮ ನೆಚ್ಚಿನ ತಂಡ ಹಾಗೂ ತಮ್ಮ ನೆಚ್ಚಿನ ಆಟಗಾರನನ್ನು ಹೆಸರಿಸಿದ್ದಾರೆ. ಕತಾರ್ ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯು ಜಿಯೋ ಸಿನಿಮಾದಲ್ಲಿಯೂ ಪ್ರಸಾರವಾಗಲಿದೆ.
undefined
ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಮ್ಮ ನೆಚ್ಚಿನ ತಂಡವಾಗಿದ್ದು, ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ನೆಚ್ಚಿನ ಆಟಗಾರ ಎನ್ನುವುದನ್ನು ಯುವಿ ಬಹಿರಂಗ ಪಡಿಸಿದ್ದಾರೆ. ಇನ್ನು ಇದೇ ವೇಳೆ ತಾವು ನೋಡಿದ ಮೊದಲ ಫಿಫಾ ವಿಶ್ವಕಪ್ ಯಾವುದು ಎನ್ನುವುದನ್ನು ಕೂಡಾ ಯುವರಾಜ್ ಸಿಂಗ್ ಬಹಿರಂಗ ಪಡಿಸಿದ್ದಾರೆ. " ಈ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಮ್ಮ ನೆಚ್ಚಿನ ತಂಡವಾಗಿದ್ದು, ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರರಾಗಿದ್ದಾರೆ. ನಾನು 2002ರಲ್ಲಿ ಮೊಟ್ಟಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ಚಾಂಪಿಯನ್ ಆದ ಪಂದ್ಯವನ್ನು ನೋಡಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
FIFA World Cup: ಫುಟ್ಬಾಲ್ ಮಹಾಕಾಳಗಕ್ಕೆ 32 ತಂಡಗಳು ಸನ್ನದ್ದ..!
2022ರ ಫಿಫಾ ವಿಶ್ವಕಪ್ ಟೂರ್ನಿಯು ಕ್ರಿಸ್ಟಿಯಾನೋ ರೊನಾಲ್ಡೋ ಪಾಲಿಗೆ ಕೊನೆಯ ಫುಟ್ಬಾಲ್ ವಿಶ್ವಕಪ್ ಟೂರ್ನಿ ಎನಿಸಲಿದ್ದು, ಪೋರ್ಚುಗಲ್‌ಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಡಲು ಮತ್ತೊಂದು ಸುವರ್ಣಾವಕಾಶ ಎನಿಸಿಕೊಂಡಿದೆ. ತಾರಾ ಫಾವರ್ಡ್ ಪ್ಲೇಯರ್ ಕ್ರಿಸ್ಟಿಯಾನೋ ರೊನಾಲ್ಡೋ, ತಮ್ಮ ಆಕ್ರಮಣಕಾರಿಯಾಟದ ಮೂಲಕ ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಿದ್ದು, ಇವರಿಗೆ ಬ್ರೂನೋ ಫರ್ನಾಂಡೀಸ್ ಹಾಗೂ ಬೆನಾರ್ಡೊ ಸಿಲ್ವಾ ಉತ್ತಮ ಸಾಥ್ ಸಿಗುವ ನಿರೀಕ್ಷೆಯಿದೆ.
ಜಗತ್ತಿನ ಅತಿ ಜನಪ್ರಿಯ ಟೂರ್ನಿ ಫಿಫಾ ವಿಶ್ವಕಪ್!
ಜಗತ್ತಿನಲ್ಲೇ ಅತಿಹೆಚ್ಚು ಜನಪ್ರಿಯತೆ ಪಡೆದಿರುವ ಟೂರ್ನಿ ಎನ್ನುವ ಹಿರಿಮೆಗೆ ಫಿಫಾ ಫುಟ್ಬಾಲ್ ವಿಶ್ವಕಪ್ ಪಾತ್ರವಾಗಿದೆ. ಬಹುತೇಕ ಫುಟ್ಬಾಲ್ ಪ್ರಿಯರು ವಿಶ್ವಕಪ್ ಟೂರ್ನಿ ಬಂದಾಗಷ್ಟೇ ಕ್ರೀಡೆಯತ್ತ ಆಸಕ್ತಿ ತೋರುವುದು ಸಾಮಾನ್ಯ. ಇನ್ನು ಫುಟ್ಬಾಲ್ ವಿಶ್ವಕಪ್ ಜಗತ್ತಿನಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಡುವ ಪಂದ್ಯಾವಳಿಯೂ ಹೌದು. 2006ರ ವಿಶ್ವಕಪ್‌ನ ಟೂರ್ನಿ(ಎಲ್ಲಾ ಪಂದ್ಯಗಳು ಸೇರಿ)ಯನ್ನು ಅಂದಾಜು 26.29 ಬಿಲಿಯನ್ ಮಂದಿ ವೀಕ್ಷಿಸಿದ್ದರು ಎಂದು ಸಮೀಕ್ಷೆಯೊಂದು ತಿಳಿಸಿದೆ. ಇನ್ನು ಅದೇ ಆವೃತ್ತಿಯ ಫೈನಲ್ ಪಂದ್ಯವೊಂದೇ 715.1 ಮಿಲಿಯನ್ ಜನರಿಂದ ಅಂದರೆ ಜಗತ್ತಿನ ಆಗಿನ ಒಟ್ಟು ಜನಸಂಖ್ಯೆಯ ಒಂಭತ್ತನೇ ಒಂದು ಭಾಗ ಮಂದಿಯಿಂದ ವೀಕ್ಷಣೆಗೆ ಒಳಪಟ್ಟಿತ್ತು ಎನ್ನುವ ಅಂಕಿ-ಅಂಶವೂ ದಾಖಲಾಗಿದೆ.