ರೈತರ ಪ್ರತಿಭಟನೆಗೆ ಕೈ ಜೋಡಿಸಿ ಮೋದಿ ವಿರುದ್ದ ಗುಡುಗಿದ ಯುವಿ ತಂದೆ..!

By Suvarna NewsFirst Published Dec 4, 2020, 3:57 PM IST
Highlights

ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಬೆಂಬಲ ಸೂಚಿಸಿದ್ದು, ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಪಂಜಾಬ್(ಡಿ.04): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್‌ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಜನರ ನಡುವೆ ಬರುವ ಧೈರ್ಯವಿದೆಯಾ ಎನ್ನುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. 

ಪಂಜಾಬ್ ಸ್ಥಳೀಯ ಸುದ್ದಿವಾಹಿನಿ ರೋಜಾನಾ ಜತೆ ಮಾತನಾಡಿದ ಯೋಗರಾಜ್ ಸಿಂಗ್, ರೈತರು ಮೋದಿಗೆ ಜೀವ ಬೆದರಿಕೆಯೊಡ್ಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. 
ನಾವು ಇಂದಿರಾರನ್ನು ಕೊಲ್ಲುತ್ತೀವಿ ಎನ್ನುವುದಾದರೆ, ಮೋದಿಯನ್ನು ಯಾಕೆ ಕೊಲ್ಲಲಾಗುವುದಿಲ್ಲ ಎನ್ನುವ ರೈತರ ಘೋಷಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಯುವಿ ತಂದೆ ಯೋಗರಾಜ್, ಇದು ಒಂದು ರೀತಿಯ ಭಾವನಾತ್ಮಕ ಹೋರಾಟವಾಗಿದ್ದು, ಕೇಂದ್ರ ಸರ್ಕಾರ ರೈತರ ಬಗ್ಗೆ ಮಾತನಾಡದೇ ಇರುವುದು ದೇಶದ ಜನರನ್ನು ವಿಭಜಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಅಲ್ಲಿನ ನಾಯಕರ ಬಗ್ಗೆ ಕಿಡಿಕಾರಿರುವ ಯೋಗರಾಜ್ ಸಿಂಗ್, ಕೇಂದ್ರ ಸರ್ಕಾರದಲ್ಲಿರುವ ಮೋದಿ ಹಾಗೂ ಮತ್ತವರ ನಾಯಕರ ಮುಖಗಳು ದೆವ್ವದಂತೆ ನನಗೆ ಭಾಸವಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ತಂಟೆಗೆ ಸರ್ಕಾರ ಹೋಗಲ್ಲ : ಕೇಂದ್ರ ಸರ್ಕಾರ

ಇನ್ನು ಡೆಲ್ಲಿ ಗಡಿಯನ್ನು ರಕ್ಷಣಕೋಟೆಯಿಂದ ಸೀಲ್ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಯೋಗರಾಜ್ ಸಿಂಗ್, ಗಡಿಯಲ್ಲಿರುವ ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸೇನೆ ಹಾಗೂ ಪೊಲೀಸರಿಲ್ಲದೇ ರೈತರ ನಡುವೆ ಬನ್ನಿ ಆ ಮೇಲೆ ಪರಿಸ್ಥಿತಿ ಏನಾಗುತ್ತೆ ನೋಡೋಣ ಎಂದು ಪ್ರಧಾನಿ ಮೋದಿಗೆ ಸವಾಲೆಸೆದಿದ್ದಾರೆ.

ನಾನು ನಿಮಗೆ ಇನ್ನೊಂದು ವಿಚಾರವನ್ನು ನೆನಪಿಸಲು ಬಯಸುತ್ತೇನೆ. ಈವರೆಗೂ ಪಂಜಾಬ್ 18 ಬಾರಿ ಡೆಲ್ಲಿ ವಿರುದ್ದ ಜಯಭೇರಿ ಬಾರಿಸಿದೆ. ಈ ಸಲ 19ನೇ ಬಾರಿ ದಿಗ್ವಿಜಯ ಸಾಧಿಸಿದಂತಾಗಬಹುದು. ಆ ಹಂತಕ್ಕೆ ನಮ್ಮನ್ನು ತಳ್ಳಬೇಡಿ ಎಂದು ಪ್ರಧಾನಿ ಮೋದಿಯನ್ನು ಎಚ್ಚರಿಸಿದ್ದಾರೆ.

click me!