ಧೋನಿ-ಕೊಹ್ಲಿಯಿಂದ ಯುವರಾಜ್ ಕರಿಯರ್ ಹಾಳಾಯ್ತು; ಮತ್ತೊಮ್ಮೆ ಗುಡುಗಿದ ಯೋಗರಾಜ್!

By Suvarna NewsFirst Published May 6, 2020, 3:50 PM IST
Highlights

2011ರ ವಿಶ್ವಕಪ್ ಹೀರೋ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಕರಿಯರ್ ಕುರಿತು ಹಲವು ಚರ್ಚೆಗಳಾಗಿವೆ. ಬಿಸಿಸಿಐ ಸರಿಯಾಗಿ ನಡೆಸಿಕೊಂಡಿಲ್ಲ ಅನ್ನೋ ಆರೋಪಗಳು ಇವೆ. ಆದರೆ ಯುವಿ ತಂದೆ ಹಲವು ಬಾರಿ ನೇರವಾಗಿ ಎಂ.ಎಸ್.ಧೋನಿ ಮೇಲೆ ಆರೋಪ ಮಾಡಿದ್ದಾರೆ. ಇದೀಗ ಧೋನಿ ಜೊತೆಗೆ ವಿರಾಟ್ ಕೊಹ್ಲಿ ಮೇಲೆ ಆರೋಪ ಮಾಡಿದ್ದಾರೆ. ಯುವಿ ತಂದೆ ಈ ಬಾರಿಯ ಆರೋಪ ಕೊಂಚ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಪಂಜಾಬ್(ಮೇ.05): ಟೀಂ ಇಂಡಿಯ ಕಂಡ ಅಪ್ರತಿಮ ಹೋರಾಟಗಾರ, ಆಲ್ರೌಂಡರ್ ಯುವರಾಜ್ ಸಿಂಗ್ 2019ರ ಆರಂಭದಲ್ಲಿ ಎಲ್ಲಾ ಮಾದರಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ವಿಶ್ವಕಪ್ ಗೆಲ್ಲಿಸಿಕೊಟ್ಟ ಆಟಗಾರನಿಗೆ ಸರಿಯಾದ ವಿದಾಯ ಸಿಗಲಿಲ್ಲ ಅನ್ನೋ ಕೊರಗು ಅಭಿಮಾನಿಗಳಿಗೆ ಈಗಲೂ ಇದೆ. ಯುವಿ ಈ ರೀತಿಯ ನಿರ್ಗಮನಕ್ಕೆ ಬಿಸಿಸಿಐ ಕಾರಣ ಅನ್ನೋ ಆರೋಪವೂ ಇದೆ. ಇತ್ತ 2011ರ ಬಳಿಕ ಯುವರಾಜ್ ಸಿಂಗ್ ಏರಿಳಿತಕ್ಕೆ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿ ಕಾರಣ ಎಂದು ಯುವಿ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ.

ಯುವ ಕ್ರಿಕೆಟಿಗರಿಗೆ ಮಹತ್ವದ ಸಲಹೆ ನೀಡಿದ ಯುವರಾಜ್ ಸಿಂಗ್! 

ಎಂ.ಎಸ್.ಧೋನಿಯಿಂದ ಯುವರಾಜ್ ಸಿಂಗ್ ಕರಿಯರ್ ಹಾಳಾಯ್ತು ಎಂದು ಈಗಾಗಲೇ ಹಲವು ಬಾರಿ ಯುವಿ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದಾರೆ. ಇದೀಗ ಧೋನಿ ಮಾತ್ರವಲ್ಲ ವಿರಾಟ್ ಕೊಹ್ಲಿಯಿಂದಲೂ ಯುವರಾಜ್ ಸಿಂಗ್ ಕರಿಯರ್ ಹಾಳಾಗಿದೆ ಎಂದಿದ್ದಾರೆ. ಧೋನಿ ಹಾಗೂ ಕೊಹ್ಲಿ ಯುವಿಗೆ ದ್ರೋಹ ಮಾಡಿದ್ದಾರೆ. ಇವರಷ್ಟೇ ಅಲ್ಲ ಟೀಂ ಇಂಡಿಯಾ ಆಯ್ಕೆ ಸಮಿತಿ ಕೂಡ ದ್ರೋಹ ಮಾಡಿದೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ...

ಇತ್ತೀಚೆಗೆ ರವಿ ಶಾಸ್ತ್ರಿ ಭೇಟಿಯಾದ ಸಂದರ್ಭದಲ್ಲಿ ಕೆಲ ವಿಚಾರಗಳನ್ನು ಸ್ಪಷ್ಟಪಡಿಸಿದ್ದೇನೆ. ಟೀಂ ಇಂಡಿಯಾಗೆ ಸೇವೆ ಸಲ್ಲಿಸಿದ ಯಾರೇ ಆದರೂ ಅವರ ವಿದಾಯ ಗೌರವಯುತವಾಗಿರಲಿ. ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಯಾರೇ ಆಗಿರಬಹುದು. ಟೀಂ ಇಂಡಿಯಾಗೆ ಅಪಾರ ಸೇವೆ ಸಲ್ಲಿಸಿದವರನ್ನು ಕಾಲ ಕಸದಂತೆ ಮಾಡಬೇಡಿ. ಬಹುಚೇಕ ದಿಗ್ಗಜ ಕ್ರಿಕೆಟಿಗರಿಗೆ ಬಿಸಿಸಿಐ ಸರಿಯಾದ ವಿದಾಯ ಹೇಳಲಿಲ್ಲ ಎಂದು ಯೋಗರಾಜ್ ಸಿಂಗ್ ಹೇಳಿದ್ದರು.

ಇತ್ತೀಚೆಗೆ ಯುವರಾಜ್ ಸಿಂಗ್ ಕೂಡ ತನಗೆ ಸೌರವ್ ಗಂಗೂಲಿ ನೀಡಿದ ಪ್ರೋತ್ಸಾಹ ಹಾಗೂ ಬೆಂಬಲ ಎಂ.ಎಸ್.ಧೋನಿ ಹಾಗೂ ವಿರಾಟ್ ಕೊಹ್ಲಿಯಿಂದ ಸಿಗಲಿಲ್ಲ ಎಂದಿದ್ದರು. ಈ ಮೂಲಕ ನಾಯಕನಾಗಿ ಸೌರವ್ ಗಂಗೂಲಿ ಆಟಗಾರರಿಗೆ ಹೆಚ್ಚಿನ ಬೆಂಬಲ ನೀಡುತ್ತಾರೆ ಎಂದಿದ್ದರು.

click me!