
ಲಂಡನ್ (ಜು.13) ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪದಾರ್ಪಣೆ ಮಾಡಿ ನಿರಾಸೆ ಅನುಭವಿಸಿದ್ದಾರೆ. ಆದರೆ ವೈಭವ್ ಸ್ಫೋಟಕ ಬ್ಯಾಟಿಂಗ್ ಯಾರು ಮರೆತಿಲ್ಲ. ಇದೀಗ ವೈಭವ್ ಸೂರ್ಯವಂಶಿ ಸಿಕ್ಸರ್ ಅಬ್ಬರ, ಆಕ್ರಮಣಕಾರಿ ಆಟ ಡಬಲ್ ಆಗುವ ಸಾಧ್ಯತೆ ಇದೆ. 15ನೇ ವಯಸ್ಸಿನಲ್ಲೇ ಹಲವು ದಾಖಲೆ ಬರೆದಿರುವ ವೈಭವ್ ಸೂರ್ಯವಂಶಿಗೆ ಮೆಂಟಲ್ ಆಗಲು ತಾನು ರೆಡಿ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಟೀಂ ಇಂಡಿಯಾ ಹಾಗೂ ಯುವ ಕ್ರಿಕೆಟಿಗರ ಕುರಿತು ಮಾತನಾಡಿದ ಯುವರಾಜ್ ಸಿಂಗ್, ನಾನು ಯಾವತ್ತು ನನ್ನನ್ನು ಟರ್ಮಿನೆಟರ್ ಎಂದು ಕರೆಯುತ್ತಿದ್ದೆ. ಆದರೆ ಅಭಿಷೇಕ್ ಶರ್ಮಾನ ನನಗಿಂತ ನಾಲ್ಕು ಪಟ್ಟು ಉತ್ತಮ ಬ್ಯಾಟರ್. ಹೀಗಾಗಿ ಅಭಿಷೇಕ್ ಶರ್ಮಾ ಟರ್ಮಿನೇಟರ್ 4. ಇದೀಗ ವೈಭವ್ ಸೂರ್ಯವಂಶಿ ನನಗಿಂತ 6 ಪಟ್ಟು ಹೆಚ್ಚು ಉತ್ತಮ ಬ್ಯಾಟರ್. ಹೀಗಾಗಿ ವೈಭವ್ ಸೂರ್ಯವಂಶಿ ಟರ್ಮಿನೇಟರ್ 6 ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ವೈಭವ್ ಭವಿಷ್ಯದ ಆಟಗಾರ. ಬ್ಯಾಟಿಂಗ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸವಾಲು ಎದುರಿಸುವ ಸಾಮರ್ಥ್ಯ ವೈಭವ್ ಸೂರ್ಯವಂಶಿಗಿದೆ. ಆತನ ಮೆಂಟರ್ ಆಗಲು ನಾನು ಇಷ್ಟುಪಡುತ್ತೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ವೈಭವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಂಬಲ್ಡನ್ ಪಂದ್ಯದ ವೇಳೆ ಯುವರಾಜ್ ಸಿಂಗ್, ಟೀಂ ಇಂಡಿಯಾ ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ. ಈ ವೇಳೆ ವೈಭವ್ ಸೂರ್ಯವಂಶಿ ಕೂಡ ಯುವಿ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಯುವರಾಜ್ ಸಿಂಗ್ ನನ್ನ ರೋಲ್ ಮಾಡೆಲ್ ಎಂದಿದ್ದಾರೆ. ಟೀಂ ಇಂಡಿಯಾದ ಶ್ರೇಷ್ಠ ಆಟಗಾರನ ಜೊತೆ ಮಾತನಾಡುವ ಅವಕಾಶ ಸಿಕ್ಕಿದೆ. ಉತ್ತಮ ಸಲಹೆ ನೀಡಿದ್ದಾರೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವೈಭವ್ ಸೂರ್ಯವಂಶಿ ಭಾರತ ಎ ತಂಡದ ಜೊತೆ ಶ್ರೀಲಂಕಾ ಪ್ರವಾಸ ಮಾಡಿದ್ದರು. ಶ್ರೀಲಂಕಾ ಎ ವಿರುದ್ದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 11 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಯುವರಾಜ್ ಸಿಂಗ್ ದಾಖಲೆ ಮುರಿದಿದ್ದರು. ಆದರೆ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.