ಕ್ರಿಕೆಟ್ ಇತಿಹಾಸದ ಅತಿಚಿಕ್ಕ ಪಂದ್ಯ: ಕೇವಲ 7 ರನ್‌ಗಳಿಗೆ ಅಲೌಟ್‌..!

By Suvarna NewsFirst Published Jul 14, 2021, 11:02 AM IST
Highlights

* ಅತಿ ಕಡಿಮೆ ಅವಧಿಯ ಪಂದ್ಯಕ್ಕೆ ಸಾಕ್ಷಿಯಾದ ಯಾರ್ಕ್ಶೈರ್‌ ಪ್ರೀಮಿಯರ್‌ ಲೀಗ್‌

* ಕೇವಲ 7 ರನ್‌ಗಳಿಗೆ ಆಲೌಟ್ ಆದ ಹಿಲಮ್‌ ಮಾಂಕ್‌ ಫ್ರಿಸ್ಟನ್‌ ಕ್ರಿಕೆಟ್‌ ಕ್ಲಬ್‌

* ಎರಡು ಓವರ್‌ಗಳೊಳಗಾಗಿ ಗೆಲುವಿನ ನಗೆ ಬೀರಿದ ಈಸ್ವರಿಂಗ್ಟನ್‌ ಕ್ಲಬ್‌

ಲಂಡನ್(ಜು.14)‌: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಯಾರ್ಕ್ಶೈರ್‌ ಪ್ರೀಮಿಯರ್‌ ಲೀಗ್‌ನ ಪಂದ್ಯವೊಂದು 56 ಎಸೆತಗಳಲ್ಲಿ ಪೂರ್ಣಗೊಂಡಿದ್ದು, ಕ್ರಿಕೆಟ್‌ ಇತಿಹಾಸದ ಕಡಿಮೆ ಅವಧಿಯ ಪಂದ್ಯ ಎಂದು ಹೇಳಲಾಗಿದೆ.

ಪಂದ್ಯಾವಳಿಯಲ್ಲಿ ಈಸ್ಟರಿಂಗ್ಟನ್‌ ಕ್ಲಬ್‌ ಮತ್ತು ಹಿಲಮ್‌ ಮಾಂಕ್‌ ಫ್ರಿಸ್ಟನ್‌ ಕ್ರಿಕೆಟ್‌ ಕ್ಲಬ್‌ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್‌ ಮಾಡಿದ ಹಿಲಮ್‌ ತಂಡ 7 ರನ್‌ ಗಳಿಗೆ ಸರ್ವಪತನ ಕಂಡಿತು. 8 ಬ್ಯಾಟ್ಸ್‌ಮನ್‌ಗಳು ಡಕೌಟ್‌ ಆದರೆ, ಇಬ್ಬರು ದಾಂಡಿಗರು ತಲಾ 2 ರನ್‌ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ಇನ್ನುಳಿದ 3 ರನ್‌ಗಳು ಹೆಚ್ಚುವರಿಯಾಗಿ ತಂಡಕ್ಕೆ ಲಭಿಸಿತು. ಈಸ್ಟರಿಂಗ್ಟನ್‌ನ ಬೌಲರ್‌ ನಾಥನ್‌ ಕ್ರೀಗರ್‌ 4 ಓವರ್‌ಗಳಲ್ಲಿ 3 ರನ್‌ ನೀಡಿ 7 ವಿಕೆಟ್‌ ಉರುಳಿಸಿದರು. 

ಟಿ20 ಸರಣಿ ಮೇಲೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕಣ್ಣು

ಕೇವಲ 8 ರನ್‌ ಗುರಿ ಪಡೆದ ಈಸ್ವರಿಂಗ್ಟನ್‌ ಕೇವಲ 1.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ಜಯ ಗೆರೆ ದಾಟಿತು. ಅಂದರೆ ಕೇವಲ 8 ಎಸೆತಗಳಲ್ಲಿ 8 ರನ್‌ ಬಾರಿಸಿ ಈಸ್ಟರಿಂಗ್ಟನ್‌ ಗೆಲುವಿನ ನಗೆ ಬೀರಿತು. ಕಡಿಮೆ ಅವಧಿಯ ಪಂದ್ಯದ ಜತೆಗೆ ಇದನ್ನು ಅತ್ಯಂತ ಕಳಪೆ ಪ್ರದರ್ಶನ ಪಂದ್ಯ ಎಂದು ಸಹ ಕರೆಯಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

click me!