
ನವದೆಹಲಿ(ಜೂ.12): ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ತಂಡವನ್ನು ಅಭಿನಂದಿಸಿರುವ ಸಚಿನ್ ತೆಂಡುಲ್ಕರ್, ಭಾರತ ತಂಡದ ಯೋಜನೆಯನ್ನು ಪ್ರಶ್ನಿಸಿದ್ದಾರೆ.
ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಭಾರತ ಪಂದ್ಯದಲ್ಲಿ ಉಳಿಯಲು ಮೊದಲ ಇನ್ನಿಂಗ್‌್ಸನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವ ನಂ.1 ಬೌಲರ್ ಆರ್.ಅಶ್ವಿನ್‌ರನ್ನು ಆಡಿಸದೆ ಇದ್ದಿದ್ದು ಅಚ್ಚರಿ ಮೂಡಿಸಿತು. ವಿಶ್ವ ಶ್ರೇಷ್ಠ ಬೌಲರ್‌ಗಳು ಪಿಚ್ ನೆರವು ನೀಡಿದರಷ್ಟೇ ಪರಿಣಾಮಕಾರಿಯಾಗುವುದಿಲ್ಲ. ಕಠಿಣ ಪಿಚ್‌ಗಳಲ್ಲೂ ಯಶಸ್ಸು ಕಾಣುವ ಕೌಶಲ್ಯ ಅವರಲ್ಲಿ ಇರಲಿದೆ. ಆಸೀಸ್‌ನ ಅಗ್ರ 8 ಬ್ಯಾಟರ್‌ಗಳಲ್ಲಿ ಐವರು ಎಡಗೈ ಬ್ಯಾಟರ್‌ಗಳಾಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ’ ಎಂದಿದ್ದಾರೆ.
2021-23ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 61 ವಿಕೆಟ್ ಕಬಳಿಸುವ ಮೂಲಕ ಈ ಅವಧಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಹೀಗಿದ್ದೂ ಅಶ್ವಿನ್‌ಗೆ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಅವರಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಸುನಿಲ್ ಗವಾಸ್ಕರ್ ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು.
ಟೆಸ್ಟ್‌ಗೆ ಆಸೀಸ್ ಬಾಸ್!
ಭಾರತ ದಶಕಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲಲಿದೆ ಎಂಬ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ, ಕನಸು ಭಗ್ನಗೊಂಡಿತು. 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಭಾರತ 209 ರನ್‌ಗಳ ಹೀನಾಯ ಸೋಲುಂಡಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಕೈಜಾರಿತು. ಮೊದಲ ಬಾರಿ ಟೆಸ್ಟ್ ವಿಶ್ವಕಪ್ ಫೈನಲ್ಗೇರಿದ್ದ ಆಸೀಸ್ ಕಪ್ ಗೆದ್ದು ಸಂಭ್ರಮಿಸಿತು.
ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತಕ್ಕೆ ಗೆಲ್ಲಲು ಬೇಕಿದ್ದದ್ದು ಬರೋಬ್ಬರಿ 444 ರನ್. ಅಂದರೆ ಟೆಸ್ಟ್ ಇತಿಹಾಸದಲ್ಲೇ ಈವರೆಗೆ ಯಾರೂ ಯಶಸ್ವಿಯಾಗಿ ಚೇಸ್ ಮಾಡಿರದ ಬೃಹತ್ ಮೊತ್ತ. ಆದರೆ ಭಾರತ ಅಸಾಧಾರಣ ಪ್ರದರ್ಶನ ತೋರಿ ದೊಡ್ಡ ಮೊತ್ತ ಬೆನ್ನತ್ತಬಹುದೆಂಬ ನಿರೀಕ್ಷೆ ಹುಸಿಯಾಯಿತು. ಕೊನೆಯ ದಿನವಾದ ಭಾನುವಾರ ಭೋಜನ ವಿರಾಮಕ್ಕೂ ಮೊದಲೇ ಭಾರತ 234 ರನ್‌ಗೆ ಗಂಟು ಮೂಟೆ ಕಟ್ಟಿತು.
WTC Final: ಟೆಸ್ಟ್ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ, ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ಗೆ ಒಡೆಯ
2023-25: ಭಾರತಕ್ಕೆ ಕಠಿಣ ಸವಾಲು!
ಟೆಸ್ಟ್ ಫೈನಲ್ ಸೋತಿರುವ ಭಾರತ 2023-25ರ ಚಾಂಪಿಯನ್‌ಶಿಪ್ ಅಭಿಯಾನವನ್ನು ಮುಂದಿನ ತಿಂಗಳಿಂದಲೇ ಆರಂಭಿಸಲಿದೆ. ಈ ಪೈಕಿ 3 ಸರಣಿ ತವರಿನಲ್ಲಿ, 3 ಸರಣಿ ವಿದೇಶದಲ್ಲಿ ನಿಗದಿಯಾಗಿದೆ. ತವರಿನಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ 2, ಇಂಗ್ಲೆಂಡ್ ವಿರುದ್ಧ 5 ಹಾಗೂ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದೇ ಜುಲೈನಲ್ಲಿ ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ 2 ಟೆಸ್ಟ್ ಆಡಲಿದ್ದು, ಬಳಿಕ ದ.ಆಫ್ರಿಕಾದಲ್ಲಿ 2 ಹಾಗೂ ಆಸ್ಪ್ರೇಲಿಯಾದಲ್ಲಿ 5 ಪಂದ್ಯಗಳನ್ನು ಆಡಲಿದೆ. ದ.ಆಫ್ರಿಕಾ ಹಾಗೂ ಆಸೀಸ್ ಪ್ರವಾಸ ಭಾರತದ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.