
ಮುಂಬೈ(ಫೆ.13): ಬಹುನಿರೀಕ್ಷಿತ ವುಮೆನ್ಸ್ ಪ್ರೀಮಿಯರ್ ಲೀಗ್(ಮಹಿಳಾ ಐಪಿಎಲ್)ನ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈನಲ್ಲಿ ನಡೆಯಲಿದ್ದು, 246 ಭಾರತೀಯರು ಸೇರಿದಂತೆ ಒಟ್ಟು 409 ಆಟಗಾರ್ತಿಯರು ವಿವಿಧ ತಂಡಗಳಿಗೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಪಟ್ಟಿಯಲ್ಲಿ 163 ವಿದೇಶಿ ಆಟಗಾರ್ತಿಯರ ಜೊತೆಗೆ, 199 ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ್ತಿಯರೂ ಇದ್ದಾರೆ. ಟೂರ್ನಿಯ 5 ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು ಕನಿಷ್ಠ 30 ವಿದೇಶಿಗರು ಸೇರಿ ಗರಿಷ್ಠ 90 ಆಟಗಾರ್ತಿಯರು ಬಿಕರಿಯಾಗಬಹುದು. ಪ್ರತೀ ತಂಡ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಿಬಹುದಾಗಿದ್ದು, ಗರಿಷ್ಠ 12 ಕೋಟಿ ರು. ಬಳಸಬಹುದಾಗಿದೆ. 24 ಅಟಗಾರ್ತಿಯರು ಗರಿಷ್ಠ ಅಂದರೆ 50 ಲಕ್ಷ ರು. ಮೂಲಬೆಲೆ, 30 ಅಟಗಾರ್ತಿಯರು 40 ಲಕ್ಷ ರು. ಮೂಲಬೆಲೆಯ ಪಟ್ಟಿಯಲ್ಲಿದ್ದಾರೆ.
ICC Womens T20 World Cup: ಜೆಮಿಮಾ ಸೂಪರ್ ಆಟ, ಪಾಕ್ ವಿರುದ್ಧ ಜಯ ಕಂಡ ಮಹಿಳಾ ಭಾರತ!
ಹರಾಜು ಪಟ್ಟಿಯಲ್ಲಿ 50 ಲಕ್ಷ ರು. ಮೂಲಬೆಲೆ ಹೊಂದಿರುವ ಸ್ಮೃತಿ ಮಂಧನಾ, ಹರ್ಮನ್ಪ್ರೀತ್, ಶಫಾಲಿ, ಜೆಮಿಮಾ, ದೀಪ್ತಿ, ಅಲೀಸಾ ಹೀಲಿ, ಎಲೈಸಿ ಪೆರ್ರಿ, ಸೋಫಿ ಎಕ್ಲೆಸ್ಟೋನ್ ಸೇರಿದಂತೆ ಪ್ರಮುಖರು ಬಂಪರ್ ನಿರೀಕ್ಷೆಯಲ್ಲಿದ್ದಾರೆ. ವೇದಾ ಕೃಷ್ಣಮೂರ್ತಿ, ರಾಜೇಶ್ವರಿ, ವೃಂದಾ ಸೇರಿದಂತೆ ಕರ್ನಾಟಕದ 21 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ಮಹಿಳಾ ಹರಾಜುಗಾರ್ತಿ!
ಮಹಿಳಾ ಐಪಿಎಲ್‌ನ ಹರಾಜು ಪ್ರಕ್ರಿಯೆಯನ್ನು ಮುಂಬೈ ಮೂಲದ ಮಲ್ಲಿಕಾ ಸಾಗರ್ ನಡೆಸಿಕೊಡಲಿದ್ದಾರೆ. ಪ್ರಸಿದ್ಧ ಕಲಾವಿದರ ಪೇಟಿಂಗ್ ಸೇರಿ ಹಲವು ಪ್ರಸಿದ್ಧ ಹರಾಜು ಪ್ರಕ್ರಿಯೆಗಳನ್ನು ನಡೆಸಿದ ಅನುಭವವಿರುವ ಮಲ್ಲಿಕಾ, ಕಳೆದ ಆವೃತ್ತಿ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಹರಾಜುಗಾರ್ತಿಯಾಗಿ ಕಾಣಿಸಿಕೊಂಡಿದ್ದರು.
ಹರಾಜು ಆರಂಭ: ಮಧ್ಯಹ್ನ 2.30ಕ್ಕೆ
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
ಹರಾಜಿನ ಇಂಟ್ರೆಸ್ಟಿಂಗ್ ಅಂಕಿ-ಅಂಶ:
246 ಮಂದಿ: ಹರಾಜು ಪಟ್ಟಿಯಲ್ಲಿರುವ ಒಟ್ಟು ಭಾರತೀಯ ಆಟಗಾರ್ತಿಯರು.
90 ಆಟಗಾರ್ತಿಯರು: ಗರಿಷ್ಠ 90 ಮಂದಿ 5 ತಂಡಗಳಿಗೆ ಹರಾಜಾಗಬಹುದು.
12 ಕೋಟಿ ರುಪಾಯಿ: ಪ್ರತಿ ತಂಡ ಹರಾಜಿನಲ್ಲಿ ಗರಿಷ್ಠ 12 ಕೋಟಿ ರು. ಬಳಸಬಹುದು.
21 ಆಟಗಾರ್ತಿಯರು: ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಆಟಗಾರ್ತಿಯರ ಸಂಖ್ಯೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.