ಇಂದಿನಿಂದ ನಾಲ್ಕನೇ ಆವೃತ್ತಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭ!

Kannadaprabha News   | Kannada Prabha
Published : Jan 09, 2026, 08:54 AM IST
Captains of WPL Teams

ಸಾರಾಂಶ

ಮಹಿಳಾ ಪ್ರೀಮಿಯರ್‌ ಲೀಗ್‌ನ (ಡಬ್ಲ್ಯುಪಿಎಲ್‌) 4ನೇ ಆವೃತ್ತಿಯು ಜ.9ರಿಂದ ಫೆ.5ರ ವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿದೆ. 5 ತಂಡಗಳು ಭಾಗವಹಿಸುವ ಈ ಟೂರ್ನಿಯು, ಮುಂಬರುವ ಟಿ20 ವಿಶ್ವಕಪ್‌ಗೆ ಆಟಗಾರ್ತಿಯರ ಆಯ್ಕೆಗೆ ಪ್ರಮುಖ ವೇದಿಕೆಯಾಗಲಿದೆ. 

ನವಿ ಮುಂಬೈ: ಐಪಿಎಲ್‌ ಮಾದರಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನ ಮೊದಲ 3 ಆವೃತ್ತಿ, ಟೂರ್ನಿಯು ಭಾರತೀಯ ಕ್ರಿಕೆಟ್‌ ವ್ಯವಸ್ಥೆಯೊಳಗೆ ಆಳವಾಗಿ ನೆಲೆಯೂರಲು ಬಳಕೆಯಾಯಿತು. ಇದೀಗ 4ನೇ ಆವೃತ್ತಿ ಆರಂಭಗೊಳ್ಳುವ ಸಮಯ ಬಂದಿದ್ದು, ವೇದಿಕೆ ಸಜ್ಜಾಗಿದೆ. ಜ.9ರಿಂದ ಫೆ.5ರ ವರೆಗೂ ನಡೆಯಲಿರುವ ಟೂರ್ನಿಯು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಸ್ಥಾನಮಾನವನ್ನೇ ಬದಲಿಸಬಹುದು ಎನ್ನುವ ಭರವಸೆ ಮೂಡಿಸಿದೆ.

ಇತ್ತೀಚಿನ ಕೆಲ ವರ್ಷಗಳ ವರೆಗೂ ಮಹಿಳಾ ಕ್ರಿಕೆಟಿಗರು ತಮ್ಮ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದಲ್ಲಿ ಮಹಿಳಾ ಕ್ರಿಕೆಟಿಗರಿಗೂ ಅವರದ್ದೇ ಆದ ಅಭಿಮಾನಿ ಬಳಗವಿದೆ. ಡಬ್ಲ್ಯುಪಿಎಲ್‌ನಿಂದಲೇ ಪ್ರಸಿದ್ಧಿ ಪಡೆದು, ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತಿದೆ. ಈ ಆವೃತ್ತಿಯು, ಹಲವು ಪ್ರತಿಭಾನ್ವಿತರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಬಹುದು.

ಟೂರ್ನಿ ಮಾದರಿ ಹೇಗೆ?

ಈ ಹಿಂದಿನ ಆವೃತ್ತಿಗಳಂತೆಯೇ ಈ ಸಲವೂ ಪ್ರಶಸ್ತಿಗಾಗಿ 5 ತಂಡಗಳು ಸೆಣಸಲಿವೆ. ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದರೆ ಪ್ರತಿ ತಂಡ ಉಳಿದ 4 ತಂಡದ ವಿರುದ್ಧ ತಲಾ 2 ಬಾರಿ ಆಡಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಪ್ಲೇ-ಆಫ್‌ನಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಫೆ.5ರಂದು ಫೈನಲ್‌ ನಿಗದಿಯಾಗಿದೆ.

2 ನಗರ, ತಲಾ 11 ಪಂದ್ಯ

ಟೂರ್ನಿಯನ್ನು ಈ ಸಲವೂ ಕೇವಲ ಎರಡು ನಗರಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ನವಿ ಮುಂಬೈನ ಡಿ.ವೈ.ಪಾಟೀಲ್‌, ವಡೋದರಾದ ಕೋಟಂಬಿ ಕ್ರೀಡಾಂಗಣಗಳು ತಲಾ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಮೊದಲ ಚರಣ ನವಿ ಮುಂಬೈನಲ್ಲಿ ನಡೆಯಲಿದ್ದು, ಲೀಗ್‌ ಹಂತದ 9, ಪ್ಲೇ-ಆಫ್‌ ಹಾಗೂ ಫೈನಲ್‌ ಪಂದ್ಯ ವಡೋದರಾದಲ್ಲಿ ನಡೆಯಲಿವೆ.

ಟಿ20 ವಿಶ್ವಕಪ್‌ಗೆ ಸಿದ್ಧತೆ

4ನೇ ಆವೃತ್ತಿಯ ಡಬ್ಲ್ಯುಪಿಎಲ್‌ ಜೂನ್‌- ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ನೆರವಾಗಲಿದೆ. ಭಾರತದ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲು ಡಬ್ಲ್ಯುಪಿಎಲ್‌ ಅನ್ನು ಬಿಸಿಸಿಐ ಬಳಸಿಕೊಳ್ಳಲಿದೆ. ಅದೇ ರೀತಿ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದ. ಆಫ್ರಿಕಾ, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌ನ ಹಲವು ಆಟಗಾರ್ತಿಯರು ಟೂರ್ನಿಯಲ್ಲಿ ಆಡಲಿದ್ದು, ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಕಾಡಲಿದೆ ಪೆರ್ರಿ ಅನುಪಸ್ಥಿತಿ

ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಎಲೈಸಿ ಪೆರ್ರಿ ಈ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಅವರ ನಿರ್ಧಾರದಿಂದ ಕೇವಲ ಆರ್‌ಸಿಬಿಗೆ ಮಾತ್ರವಲ್ಲ, ಇಡೀ ಟೂರ್ನಿಗೇ ನಷ್ಟ ಉಂಟು ಮಾಡಲಿದೆ. ಡಬ್ಲ್ಯುಪಿಎಲ್‌ನ ಪ್ರಮುಖ ಆಕರ್ಷಣೆ ಎನಿಸಿದ್ದ ಪೆರ್ರಿ, ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್‌ ಶರ್ಮ ಐಪಿಎಲ್‌ ಸ್ಯಾಲರಿಗಿಂತ ಹೆಚ್ಚಿನ ಮೊತ್ತಕ್ಕೆ ಐಷಾರಾಮಿ ಮನೆ ಖರೀದಿಸಿದ ಪತ್ನಿ ರಿತಿಕಾ
ಬಾಂಗ್ಲಾದೇಶ ಕ್ರಿಕೆಟರ್ ಮುಸ್ತಾಫಿಜುರ್ ರಹಮಾನ್ ಪತ್ನಿ ಓದಿದ್ದೆಷ್ಟು?