WPL 2024: ಆರ್‌ಸಿಬಿ ಫೈನಲ್ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಏನು? ಗೆಲುವಿನ ನಿಜವಾದ ರೂವಾರಿ ಯಾರು?

By Naveen Kodase  |  First Published Mar 18, 2024, 1:47 PM IST

ಈ ಹಿಂದಿನ ಕಳೆದ ನಾಲ್ಕು ಮುಖಾಮುಖಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಅರ್‌ಸಿಬಿ ಶರಣಾಗಿತ್ತು. ಆದರೆ ಫೈನಲ್‌ನಲ್ಲಿ ಸ್ಮೃತಿ ಮಂಧನಾ ಪಡೆ ಕಳೆದ ನಾಲ್ಕು ಪಂದ್ಯದ ಸೋಲಿಗೆ ಒಂದೇ ಗೆಲುವಿನ ಮೂಲಕ ಲೆಕ್ಕಚುಕ್ತಾ ಮಾಡಿದೆ. ಆರ್‌ಸಿಬಿ ತಂಡವು ಫೈನಲ್‌ನಲ್ಲಿ ಚಾಂಪಿಯನ್ ಆಗಲು ಟರ್ನಿಂಗ್ ಪಾಯಿಂಟ್ ಏನು? ಫೈನಲ್ ಗೆಲುವಿಗೆ ಪ್ರಮುಖ ರೂವಾರಿ ಯಾರು? ಎನ್ನುವುದನ್ನು ನೋಡೋಣ ಬನ್ನಿ.


ನವದೆಹಲಿ(ಮಾ.18): ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಕಳೆದೊಂದುವರೆ ದಶಕದಿಂದ ಟ್ರೋಫಿ ಬರ ಎದುರಿಸುತ್ತಾ ಬಂದ್ದಿದ್ದ ಆರ್‌ಸಿಬಿಗೆ ಕೊನೆಗೂ ಈ ಸಲ ಕಪ್ ನಮ್ದೇ ಎನ್ನುವ ಮಾತು ನಿಜವಾಗಿದೆ.

ಈ ಹಿಂದಿನ ಕಳೆದ ನಾಲ್ಕು ಮುಖಾಮುಖಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಅರ್‌ಸಿಬಿ ಶರಣಾಗಿತ್ತು. ಆದರೆ ಫೈನಲ್‌ನಲ್ಲಿ ಸ್ಮೃತಿ ಮಂಧನಾ ಪಡೆ ಕಳೆದ ನಾಲ್ಕು ಪಂದ್ಯದ ಸೋಲಿಗೆ ಒಂದೇ ಗೆಲುವಿನ ಮೂಲಕ ಲೆಕ್ಕಚುಕ್ತಾ ಮಾಡಿದೆ. ಆರ್‌ಸಿಬಿ ತಂಡವು ಫೈನಲ್‌ನಲ್ಲಿ ಚಾಂಪಿಯನ್ ಆಗಲು ಟರ್ನಿಂಗ್ ಪಾಯಿಂಟ್ ಏನು? ಫೈನಲ್ ಗೆಲುವಿಗೆ ಪ್ರಮುಖ ರೂವಾರಿ ಯಾರು? ಎನ್ನುವುದನ್ನು ನೋಡೋಣ ಬನ್ನಿ.

Latest Videos

undefined

ಟರ್ನಿಂಗ್‌ ಪಾಯಿಂಟ್‌

ಪವರ್‌-ಪ್ಲೇ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 61 ರನ್‌ ಗಳಿಸಿದ್ದ ಡೆಲ್ಲಿ 180ರ ಗಡಿ ದಾಟುವುದರ ಎಲ್ಲಾ ಸಾಧ್ಯತೆಗಳಿತ್ತು. ಆದರೆ 8ನೇ ಓವರ್‌ನಲ್ಲಿ ಸೋಫಿ ಮೋಲಿನ್ಯುಕ್ಸ್‌ 4 ಎಸೆತಗಳ ಅಂತರದಲ್ಲಿ ಶಫಾಲಿ, ಜೆಮಿಮಾ, ಅಲೈಸ್‌ ಕ್ಯಾಪ್ಸಿ ವಿಕೆಟ್‌ ಕಿತ್ತು ಪಂದ್ಯದ ಗತಿಯನ್ನೇ ಬದಲಿಸಿದರು. ಆ ಬಳಿಕ ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ನೆಲೆಯೂರಲು ಬಿಡದೆ ಆರ್‌ಸಿಬಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

'ಆನಂದ.. ಪರಮಾನಂದ...': ಕನ್ನಡದಲ್ಲೇ RCB ಗೆಲುವನ್ನು ಕೊಂಡಾಡಿದ ಯುಜುವೇಂದ್ರ ಚಹಲ್..!

ಟ್ರೋಫಿ ಗೆಲುವಿನ ಹಿಂದೆ ಶ್ರೇಯಾಂಕ ಚಮತ್ಕಾರ

ಆರ್‌ಸಿಬಿ ಟ್ರೋಫಿ ಗೆಲ್ಲಲು ಕನ್ನಡತಿ ಶ್ರೇಯಾಂಕ ಪಾಟೀಲ್‌ ಕೂಡಾ ಪ್ರಮುಖ ಕಾರಣ. ಸೆಮಿಫೈನಲ್‌ನಲ್ಲಿ ನಿರ್ಣಾಯಕ ಘಟ್ಟದಲ್ಲಿ ಹರ್ಮನ್‌ಪ್ರೀತ್‌ ಸೇರಿ ಒಟ್ಟು 2 ವಿಕೆಟ್‌ ಕಿತ್ತು ಗೆಲುವಿನ ರೂವಾರಿ ಎನಿಸಿಕೊಂಡಿದ್ದ ಶ್ರೇಯಾಂಕ ಫೈನಲ್‌ನಲ್ಲೂ ತಮ್ಮ ಕೈ ಚಳಕ ತೋರಿಸಿದರು. 3.3 ಓವರಲ್ಲಿ ಕೇವಲ 12 ರನ್‌ ನೀಡಿ 4 ವಿಕೆಟ್‌ ಕಬಳಿಸಿದ 21ರ ಶ್ರೇಯಾಂಕ ಟೂರ್ನಿಯ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.

ಪುರುಷರಿಗೆ ಸಿಗದ ಟ್ರೋಫಿ ಹೊತ್ತೊಯ್ದ ಮಹಿಳೆಯರು

ಈ ವರೆಗೆ ಐಪಿಎಲ್‌ನ 16 ಆವೃತ್ತಿಗಳಲ್ಲಿ ಒಮ್ಮೆಯೂ ಆರ್‌ಸಿಬಿ ಟ್ರೋಫಿ ಗೆದ್ದಿಲ್ಲ. ಆದರೆ ಮಹಿಳಾ ತಂಡ 2ನೇ ಆವೃತ್ತಿಯಲ್ಲೇ ಕಪ್ ತನ್ನದಾಗಿಸಿಕೊಂಡಿತು. ಆರ್‌ಸಿಬಿ ಪುರುಷರ ತಂಡ 2009, 2011 ಹಾಗೂ 2016ರಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮಹಿಳಾ ತಂಡ ಚೊಚ್ಚಲ ಬಾರಿ ಫೈನಲ್‌ಗೇರಿದರೂ ಯಾವುದೇ ತಪ್ಪೆಸಗದೆ ಟ್ರೋಫಿಗೆ ಮುತ್ತಿಟ್ಟಿತು.

ಚಾಂಪಿಯನ್‌ RCB ಮಹಿಳಾ ತಂಡಕ್ಕೆ ವಿಡಿಯೋ ಕಾಲ್ ಮಾಡಿ ಸಂಭ್ರಮಿಸಿದ ಕಿಂಗ್ ಕೊಹ್ಲಿ..! ವಿಡಿಯೋ ವೈರಲ್

ಫೈನಲ್‌ನಲ್ಲಿ ಹ್ಯಾಟ್ರಿಕ್‌ ಸೋಲು

ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ತಂಡಕ್ಕೆ ಫೈನಲ್‌ನಲ್ಲಿದು ಸತತ 3ನೇ ಸೋಲು. ಪುರುಷರ ತಂಡ ಐಪಿಎಲ್‌ನಲ್ಲಿ 2022ರಲ್ಲಿ ಫೈನಲ್‌ನಲ್ಲಿ ಸೋತಿತ್ತು. ಮಹಿಳಾ ತಂಡ ಕಳೆದ ವರ್ಷ ಡಬ್ಲ್ಯುಪಿಎಲ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರೂ ಮುಂಬೈ ವಿರುದ್ಧ ಪರಾಭವಗೊಂಡಿತು. ಈ ಬಾರಿ ಆರ್‌ಸಿಬಿ ವಿರುದ್ಧ ಸೋತು ಪ್ರಶಸ್ತಿ ಗೆಲ್ಲುವ 3ನೇ ಅವಕಾಶವನ್ನೂ ಮಿಸ್‌ ಮಾಡಿಕೊಂಡಿತು.
 

click me!