WPL 2023: ಗುಜರಾತ್ ಜೈಂಟ್ಸ್ ಎದುರು ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್‌

Published : Mar 17, 2023, 08:47 AM ISTUpdated : Mar 17, 2023, 05:06 PM IST
WPL 2023: ಗುಜರಾತ್ ಜೈಂಟ್ಸ್ ಎದುರು ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಸಾರಾಂಶ

ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್‌ ಪ್ಲೇ ಆಫ್‌ ಕನಸು ಜೀವಂತ ಡೆಲ್ಲಿ ಕ್ಯಾಪಿಟಲ್ಸ್ ಎದುರು 11 ರನ್ ಜಯ ಸಾಧಿಸಿದ ಗುಜರಾತ್ ಜೈಂಟ್ಸ್‌ ಸೂಪರ್ ಸಂಡೆಯಲ್ಲಿಂದು ಡಬಲ್ ಹೆಡ್ಡರ್ ಪಂದ್ಯಗಳು

ಮುಂಬೈ(ಮಾ.17): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯ​ಪಿ​ಎ​ಲ್‌​)​ನಲ್ಲಿ ಗುಜ​ರಾತ್‌ ಜೈಂಟ್ಸ್‌ 2ನೇ ಜಯ​ದೊಂದಿಗೆ ಪ್ಲೇ-ಆಫ್‌ ಕನ​ಸನ್ನು ಜೀವಂತ​ವಾ​ಗಿ​ರಿ​ಸಿ​ಕೊಂಡಿದೆ. ಗುರು​ವಾರ ಡೆಲ್ಲಿ ಕ್ಯಾಪಿ​ಟಲ್ಸ್‌ ವಿರುದ್ಧ ಗುಜ​ರಾತ್‌ 11 ರನ್‌ ಗೆಲುವು ಸಾಧಿ​ಸಿತು. ಮೊದಲ ಮುಖಾ​ಮುಖಿ​ಯಲ್ಲಿ ಡೆಲ್ಲಿ ವಿರುದ್ಧ 10 ವಿಕೆ​ಟ್‌ ಹೀನಾಯ ಸೋಲುಂಡಿದ್ದ ಗುಜ​ರಾತ್‌ ಈ ಪಂದ್ಯ​ದಲ್ಲಿ ಸೇಡು ತೀರಿ​ಸಿ​ಕೊಂಡಿತು. ಗುಜ​ರಾ​ತ್‌ನ ಈ ಗೆಲುವಿನಿಂದ ಆರ್‌​ಸಿ​ಬಿಯ ಪ್ಲೇ-ಆಫ್‌ ಆಸೆಗೆ ಮತ್ತಷ್ಟು ಹಿನ್ನ​ಡೆ​ಯುಂಟಾ​ಗಿದ್ದು, ಉಳಿ​ದೆ​ರಡೂ ಪಂದ್ಯ ಗೆದ್ದು ಇತರ ಕೆಲ ಫಲಿ​ತಾಂಶಗಳು ತನ್ನ ಪರ​ವಾಗಿ ಬಂದ​ರಷ್ಟೇ ಪ್ಲೇ-ಆಫ್‌​ಗೇ​ರ​ಬ​ಹು​ದಾದ ಸಾಧ್ಯತೆ ಇದೆ.

ಗುರು​ವಾ​ರದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜ​ರಾತ್‌ 4 ವಿಕೆ​ಟ್‌ಗೆ 147 ರನ್‌ ಕಲೆ​ಹಾ​ಕಿತು. ಲಾರಾ ವೂಲ್ವಾರ್ಚ್‌(45 ಎಸೆ​ತ​ಗ​ಳಲ್ಲಿ 57), ಆಶ್ಲೆ ಗಾಡ್ರ್ನ​ರ್‌​(​33 ಎಸೆ​ತ​ಗ​ಳಲ್ಲಿ ಔ​ಟಾ​ಗದೆ 51) ತಲಾ ಅರ್ಧ​ಶ​ತಕ ಬಾರಿಸಿ ತಂಡ ಕಡಿಮೆ ಮೊತ್ತಕ್ಕೆ ಕುಸಿ​ಯ​ದಂತೆ ಕಾಪಾ​ಡಿ​ದ​ರು. ಹರ್ಲಿನ್‌ ಡಿಯೋಲ್‌ 31 ರನ್‌ ಕೊಡುಗೆ ನೀಡಿ​ದರು. ಸ್ಪರ್ಧಾ​ತ್ಮಕ ಗುರಿ ಬೆನ್ನ​ತ್ತಿದ ಡೆಲ್ಲಿ 18.4 ಓವ​ರಲ್ಲಿ 136 ರನ್‌ಗೆ ಆಲೌ​ಟಾ​ಗಿ ಸೋಲೊ​ಪ್ಪಿ​ಕೊಂಡಿತು. ಮೆಗ್‌ ಲ್ಯಾನಿಂಗ್‌​(18), ಶಫಾಲಿ ವರ್ಮಾ​(08), ಜೆಮಿಮಾ ರೋಡ್ರಿ​ಗ್‌್ಸ​(01) ವಿಫ​ಲ​ರಾ​ದರೂ ಮಾರಿ​ಝಾನ್‌ ಕಾಪ್‌​(36)ರ ಹೋರಾಟ ತಂಡಕ್ಕೆ ಗೆಲು​ವಿನ ಆಸೆ ಹುಟ್ಟಿ​ಸಿತು. ಕೊನೆ​ಯಲ್ಲಿ ಅರುಂಧತಿ(25) ಹೋರಾ​ಡಿ​ದರೂ ತಂಡಕ್ಕೆ ಗೆಲುವು ದಕ್ಕ​ಲಿಲ್ಲ. ಗಾಡ್ರ್ನರ್‌, ತನುಜಾ, ಕಿಮ್‌ ಗಾರ್ಥ್‌ ತಲಾ 2 ವಿಕೆಟ್‌ ಕಿತ್ತ​ರು.

ಸದ್ಯ ಮುಂಬೈ ಇಂಡಿಯನ್ಸ್‌ ತಂಡವು ಆಡಿದ 5 ಪಂದ್ಯಗಳಲ್ಲಿ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಭದ್ರವಾಗಿದ್ದು, ಮೊದಲ ತಂಡವಾಗಿ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲು ಸಹಿತ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನು ಯುಪಿ ವಾರಿಯರ್ಸ್‌ ಹಾಗೂ ಗುಜರಾತ್ ಜೈಂಟ್ಸ್‌ ತಂಡಗಳು ತಲಾ ಅಂಕಗಳೊಂದಿಗೆ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿವೆ. ಇನ್ನು ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಆಡಿದ 6 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.

WPL 2023: RCB ತಂಡಕ್ಕೆ ಧೈರ್ಯ ತುಂಬಿದ ವಿರಾಟ್ ಕೊಹ್ಲಿ..! ಗೆಲುವಿನ ಖಾತೆ ತೆರೆದ ಬೆಂಗಳೂರು

ಸೂಪರ್ ಶನಿವಾರ ಡಬಲ್ ಫೈಟ್‌:

ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಡಬಲ್ ಹೆಡ್ಡರ್ ಪಂದ್ಯಗಳ ಪೈಕಿ ಶನಿವಾರ ಮೊದಲ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್‌ ತಂಡವು ಯುಪಿ ವಾರಿಯರ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್‌ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಇಲ್ಲಿನ ಬ್ರೆಬೋರ್ನ್‌ ಮೈದಾನ ಆತಿಥ್ಯವನ್ನು ವಹಿಸಲಿದೆ.

ಸ್ಕೋರ್‌: 
ಗುಜ​ರಾತ್‌ 20 ಓವ​ರಲ್ಲಿ 147/4(ವೂ​ಲ್ವಾರ್ಚ್‌ 57, ಗಾಡ್ರ್ನರ್‌ 51, ಜೊನಾ​ಸೆನ್‌ 2-38) 
ಡೆಲ್ಲಿ 18.4 ಓವ​ರಲ್ಲಿ 136/10(ಕಾಪ್‌ 36, ಅರುಂಧತಿ 25, ಗಾರ್ಥ್ 2-18, ಗಾಡ್ರ್ನರ್‌ 2-19)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್