ಕೊರೋನಾ ವೈರಸ್ ಆತಂಕ ಇದೀಗ ಎಲ್ಲಾ ಕ್ಷೇತ್ರಕ್ಕೂ ತಟ್ಟಿದೆ. ಕೊರೋನಾ ವೈರಸ್ ಭೀತಿಯಿಂದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯ ಮುಂದೂಡಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಢಾಕ(ಮಾ.11): ಕೊರೋನಾ ವೈರಸ್‌ನಿಂದ ಪ್ರತಿಷ್ಠಿತ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ಟಿ20 ಪಂದ್ಯ ಮುಂದೂಡಲಾಗಿದೆ. ಸುದ್ದಿಗೋಷ್ಠಿ ನಡೆಸಿದೆ ಬಾಂಗ್ಲಾದೇಶ ಕ್ರಿಕೆಟ್ ಅಧ್ಯಕ್ಷ ನಜ್ಮುಲ್ ಹಸನ್ ಪಂದ್ಯ ಮುಂದೂಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೊರೋನಾ ವೈರಸ್‌ನಿಂದ ಮುಂದೂಡಿಕೆಯಾದ ಮೊದಲ ಕ್ರಿಕೆಟ್ ಪಂದ್ಯವಾಗಿದೆ.
ಇದನ್ನೂ ಓದಿ: ಕೊರೋನಾ ಪರಿಣಾಮ, INDvsSA ಮೊದಲ ಪಂದ್ಯದ ಟಿಕೆಟ್ ಅನ್‌ಸೋಲ್ಡ್!
ದಕ್ಷಿಣ ಏಷ್ಯಾದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಆಟಾಗಾರರು ಹಾಗೂ ಅಭಿಮಾನಿಗಳ ಸುರಕ್ಷತೆಗಾಗಿ ಪಂದ್ಯ ಮುಂಡೂತ್ತಿದ್ದೇವವೇ ಎಂದಿದ್ದಾರೆ. ಮಾರ್ಚ್ 21 ಹಾಗೂ 22 ರಂದು ಪಂದ್ಯ ಆಯೋಜಿಸಲಾಗಿತ್ತು. ಇನ್ನು ಇದಕ್ಕೂ ಮುನ್ನ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಅವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮವೂ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಕೊರೋನಾ ವೈರಸ್ ಆತಂಕ; IPL ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ?
ನಿಗದಿತ ಸಮಯದಲ್ಲಿ ಪಂದ್ಯ ಆಡಲು ಆಟಗಾರರು ಒಪ್ಪಿಕೊಂಡಿದ್ದಾರೆ. ಆದರೆ ಎಲ್ಲರ ಸುರಕ್ಷತೆಯಿಂದ ಪಂದ್ಯ ಮುಂದೂಡದೆ ಬೇರೆ ದಾರಿಯಿಲ್ಲ ಎಂದಿದ್ದಾರೆ. ಕನಿಷ್ಠ 3 ತಿಂಗಳು ಮುಂದೂಡಲಾಗುವುದು. ಮುಂದಿನ ದಿನಾಂಕ ನಿರ್ಧರಿಸಲಾಗಿಲ್ಲ. ವೈರಸ್ ಹತೋಟಿಗೆ ಬಂದ ಬಳಿಕ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಹಸನ್ ಹೇಳಿದ್ದಾರೆ.