ಕೊರೋನಾ ಪರಿಣಾಮ, INDvsSA ಮೊದಲ ಪಂದ್ಯದ ಟಿಕೆಟ್ ಅನ್‌ಸೋಲ್ಡ್!

By Suvarna News  |  First Published Mar 11, 2020, 6:47 PM IST

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ನಾಳೆ(ಮಾ.12)ಯಿಂದ ಆರಂಭವಾಗಲಿದೆ. ಐಪಿಎಲ್ ಟೂರ್ನಿಗೂ ಮುನ್ನ ನಡೆಯುತ್ತಿರುವ ಕೊನೆಯ ಸರಣಿ ಇದಾಗಿದ್ದು, ಉಭಯ ತಂಡಗಳಿಗೂ ಪ್ರಮುಖವಾಗಿದೆ. ಆದರೆ ಇಂಡೋ-ಆಫ್ರಿಕಾ ಸರಣಿಗೆ ಅಭಿಮಾನಿಗಳು ಆಸಕ್ತಿ ತೋರುತ್ತಿಲ್ಲ. ಕಾರಣ ಕೊರೋನಾ ವೈರಸ್.


ಧರ್ಮಶಾಲಾ(ಮಾ.11): ಕೊರೋನಾ ವೈರಸ್ ಸೃಷ್ಟಿಸಿದ ಆವಾಂತರ ಅಷ್ಟಿಷ್ಟಲ್ಲ. ಇದೀಗ ಕ್ರಿಕೆಟ್‌ಗೂ ಭಾರಿ ಹೊಡೆತ ನೀಡಿದೆ. 3 ಪಂದ್ಯಗಳ ಸರಣಿಗಾಗಿ ಸೌತ್ ಆಫ್ರಿಕಾ ಭಾರತಕ್ಕೆ ಆಗಮಿಸಿದೆ. ಮಾರ್ಚ್ 12ರಿಂದ ಏಕಕದಿನ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಧರ್ಮಶಾಲಾ ಆತಿಥ್ಯವಹಿಸಿದೆ. ಆದರೆ ಕೊರೋನಾ ವೈರಸ್ ಪರಿಣಾಮ ನಾಳ ನಡೆಯಲಿರುವ ಮೊದಲ ಪಂದ್ಯದ ಬಹುತೇಕ ಟಿಕೆಟ್ ಮಾರಾಟವಾಗದೆ ಉಳಿದಿದೆ.

ಕೊರೋನಾ ಭೀತಿ: ಮಾಸ್ಕ್ ಧರಿಸಿಯೇ ಭಾರತಕ್ಕೆ ಬಂದ ಆಫ್ರಿಕಾ ತಂಡ..!

Latest Videos

ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದಾರೆ. ಪಂದ್ಯ ಶೇಕಡಾ 40 ರಷ್ಟು ಟಿಕೆಟ್ ಮಾರಾಟವಾಗದೇ ಉಳಿದಿದೆ. ಧರ್ಮಶಾಲಾ ಕ್ರೀಡಾಂಗಣ 2 ಮತ್ತು 3 ಕಾರ್ಪೋರೇಟ್ ಬಾಕ್ಸ್ ಟಿಕೆಟ್ ಮಾರಾಟವಾಗಿದೆ. ಆದರೆ ಸಾಮಾನ್ಯ ಟಿಕೆಟ್ ಖರೀದಿಗೆ ಅಭಿಮಾನಿಗಳು ಮುಂದೆ ಬರುತ್ತಿಲ್ಲ. 

ಕ್ರೀಡೆಗೆ ಗಡಿಯ ಹಂಗಿಲ್ಲ: ಧೋನಿ ಜೆರ್ಸಿ ತೊಟ್ಟ ಪಾಕ್‌ ಅಭಿಮಾನಿ

ಇತ್ತ ಬಿಸಿಸಿಐ ಕೊರೋನಾ ವೈರಸ್ ಹರಡದಂಡೆ ಕ್ರೀಡಾಂಗಣದಲ್ಲಿ ಹಲವು ಮುನ್ನಚ್ಚೆರಿಕೆ ಕ್ರಮಕೈಗೊಳ್ಳಲಾಗಿದೆ. ಕ್ರೀಡಾಂಗಣದಲ್ಲಿ ವೈದ್ಯರ ತಂಡವೊಂದು ಠಕಾಣಿ ಹೊಡಲಿದೆ. ಕ್ರೀಡಾಂಗಣದಲ್ಲಿರುವ ಎಲ್ಲಾ ಶೌಚಾಲಯಗಳಲ್ಲಿ ವಾಶ್ ಲಿಕ್ವಿಡ್, ಸ್ಯಾನಿಟೈಸರ್ ಸೇರಿದಂತೆ ವೈರಸ್ ಹರಡದಂತೆ ತಡೆಯಲು ಎಲ್ಲಾ ಕ್ರಮ ಕೈಗೊಂಡಿದೆ.

click me!