ನೆದರ್‌ಲೆಂಡ್ಸ್‌ ಎದುರು ಕಿವೀಸ್‌ಗೆ ಮತ್ತೊಂದು ದೊಡ್ಡ ಜಯದ ಗುರಿ..!

Published : Oct 09, 2023, 10:10 AM IST
ನೆದರ್‌ಲೆಂಡ್ಸ್‌ ಎದುರು ಕಿವೀಸ್‌ಗೆ ಮತ್ತೊಂದು ದೊಡ್ಡ ಜಯದ ಗುರಿ..!

ಸಾರಾಂಶ

ತಾರಾ ಆಟಗಾರರ ಗೈರಿನಲ್ಲಿ ಕಣಕ್ಕಿಳಿದಿದ್ದರೂ ಇಂಗ್ಲೆಂಡ್‌ ವಿರುದ್ಧ ಕಿವೀಸ್‌ ಅಬ್ಬರದ ಪ್ರದರ್ಶನ ನೀಡಿತ್ತು. ಡೆವೋನ್‌ ಕಾನ್‌ವೇ, ರಚಿನ್‌ ರವೀಂದ್ರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 9 ವಿಕೆಟ್‌ ಜಯಗಳಿಸಿತ್ತು. ತಂಡದ ಖಾಯಂ ನಾಯಕ ಕೇನ್‌ ವಿಲಿಯಮ್ಸನ್‌ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದು, ವೇಗಿಗಳಾದ ಟಿಮ್‌ ಸೌಥಿ, ಲಾಕಿ ಫರ್ಗ್ಯೂಸನ್‌ ತಂಡಕ್ಕೆ ಮರಳುವ ನಿರೀಕ್ಷೆಯಿದೆ. 

ಹೈದರಾಬಾದ್‌(ಅ.09): ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ನೀಡಿದ್ದ ನ್ಯೂಜಿಲೆಂಡ್‌, ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಪಂದ್ಯದಲ್ಲಿ ಸೋಮವಾರ ನೆದರ್‌ಲೆಂಡ್ಸ್‌ ವಿರುದ್ಧ ಸೆಣಸಾಡಲಿದೆ. ಕಿವೀಸ್‌ ಪಡೆ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಡಚ್‌ ಪಡೆ ಬಲಿಷ್ಠ ಕಿವೀಸ್‌ಗೆ ಸೋಲುಣಿಸಿ ಟೂರ್ನಿಯ ಮೊದಲ ಗೆಲುವು ದಾಖಲಿಸುವ ಕಾತರದಲ್ಲಿದೆ.

ತಾರಾ ಆಟಗಾರರ ಗೈರಿನಲ್ಲಿ ಕಣಕ್ಕಿಳಿದಿದ್ದರೂ ಇಂಗ್ಲೆಂಡ್‌ ವಿರುದ್ಧ ಕಿವೀಸ್‌ ಅಬ್ಬರದ ಪ್ರದರ್ಶನ ನೀಡಿತ್ತು. ಡೆವೋನ್‌ ಕಾನ್‌ವೇ, ರಚಿನ್‌ ರವೀಂದ್ರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 9 ವಿಕೆಟ್‌ ಜಯಗಳಿಸಿತ್ತು. ತಂಡದ ಖಾಯಂ ನಾಯಕ ಕೇನ್‌ ವಿಲಿಯಮ್ಸನ್‌ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದು, ವೇಗಿಗಳಾದ ಟಿಮ್‌ ಸೌಥಿ, ಲಾಕಿ ಫರ್ಗ್ಯೂಸನ್‌ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಪ್ರಮುಖರ ಉಪಸ್ಥಿತಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದು, ಡಚ್‌ ವಿರುದ್ಧ ದೊಡ್ಡ ಗೆಲುವಿನೊಂದಿಗೆ ನೆಟ್‌ ರನ್‌ರೇಟ್‌ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

ಪುಟಿದೇಳುತ್ತಾ ಡಚ್‌ ಪಡೆ?: ಅರ್ಹತಾ ಟೂರ್ನಿಯಲ್ಲಿ ಬಲಿಷ್ಠ ವೆಸ್ಟ್‌ಇಂಡೀಸನ್ನು ಹೊರಹಾಕಿರುವ ಡಚ್‌ ಪಡೆ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪರಾಭವಗೊಂಡಿದೆ. ಪಾಕ್‌ಗೆ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ ಕೊನೆಯಲ್ಲಿ ಎಡವಿತ್ತು. ಸುಧಾರಿತ ಪ್ರದರ್ಶನದೊಂದಿಗೆ ಕಿವೀಸನ್ನು ಮಣಿಸಲು ತಂಡ ಸಜ್ಜಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಡೆವೊನ್‌ ಕಾನ್‌ವೇ, ವಿಲ್‌ ಯಂಗ್‌, ರಚಿನ್‌ ರವೀಂದ್ರ, ಡ್ಯಾರೆಲ್ ಮಿಚೆಲ್‌, ಟಾಮ್ ಲೇಥಮ್‌(ನಾಯಕ), ಗ್ಲೆನ್ ಫಿಲಿಪ್ಸ್‌, ಜೇಮ್ಸ್ ನೀಶಮ್‌, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್‌, ಹೆನ್ರಿ ನಿಕೋಲ್ಸ್, ಟ್ರೆಂಟ್ ಬೌಲ್ಟ್‌.

ನೆದರ್‌ಲೆಂಡ್ಸ್‌: ವಿಕ್ರಂ, ಒ ಡೌಡ್‌, ಆ್ಯಕರ್‌ಮನ್‌, ಎಡ್ವರ್ಡ್ಸ್‌(ನಾಯಕ), ಲೀಡೆ, ತೇಜ, ಜುಲ್ಫಿಕರ್‌, ಬೀಕ್‌, ಮೆರ್ವೆ, ಆರ್ಯನ್‌, ಮೀಕೆರೆನ್‌.

ಮುಖಾಮುಖಿ: 04

ನ್ಯೂಜಿಲೆಂಡ್‌: 04

ನೆದರ್‌ಲೆಂಡ್ಸ್‌: 00

ಫಲಿತಾಂಶವಿಲ್ಲ: 00

ಟೈ: 00

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್‌.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?