
ನವಿ ಮುಂಬೈ (ಅ.23) ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಬೃಹತ್ ಮೊತ್ತ ಕಲೆ ಹಾಕಿದೆ. ಸ್ಮೃತಿ ಮಂಧನಾ ಹಾಗೂ ಪ್ರತೀಕಾ ರಾವಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ 340 ರನ್ ಸಿಡಿಸಿದೆ. ಇಬ್ಬರು ಶತಕ ಸಾಧನೆ ಮಾಡು ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮಳೆಯಿಂದ ಪಂದ್ಯ ಸ್ಥಗಿತಗೊಂಡಿದ್ದ ಕಾರಣ ಪಂದ್ಯವನ್ನು 49 ಓವರ್‌ಗೆ ಸೀಮಿತಗೊಳಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಪ್ರತೀಕ ರಾವಲ್ ಹಾಗೂ ಸ್ಮೃತಿ ಮಂಧನಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಬೃಹತ್ ಮೊತ್ತ ಕಲೆ ಹಾಕಿದೆ. ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧನಾ ಇಬ್ಬರು ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಈ ಜೋಡಿ ದಾಖಲೆ ಬರೆದಿದೆ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಇಬ್ಬರು ಸೆಂಚುರಿ ಸಿಡಿಸಿದ ವಿಶ್ವದ ಮೂರನೇ ಜೋಡಿ ಎಂಬ ದಾಖಲೆ ಬರೆದಿದೆ.
ಲೈನೆ ಥಾಮಸ್, ಎನಿಡ್ ಬ್ಯಾಕ್‌ವೆಲ್( ಇಂಗ್ಲೆಂಡ್) 1973
ಲಿಂಡ್ಸೆ ರೀಲರ್, ರುತ್ ಬಕ್‌ಸ್ಟೀನ್ (ಆಸ್ಟ್ರೇಲಿಯಾ) 1988
ಸ್ಮೃತಿ ಮಂಧನಾ, ಪ್ರತಿಕಾ ರಾವಲ್ (ಭಾರತ) 2025
ಸ್ಮೃತಿ ಮಂದನಾ ಹಾಗೂ ಪ್ರತೀಕಾ ರಾವಲ್ ಸೆಂಚುರಿ ಸಿಡಿಸುವ ಮೂಲಕ ಭಾರತ ಮಹಿಳಾ ತಂಡ ಮತ್ತೊಂದು ದಾಖಲೆ ಬರೆದಿದೆ. ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಏಕದಿನ ಸೆಂಚುರಿ ಸಿಡಿಸಿದ ತಂಡ ಅನ್ನೋ ದಾಖಲೆ ಬರೆದಿದೆ.
ಭಾರತ ಮಹಿಳಾ ತಂಡ: 10 ಸೆಂಚುರಿ (2025)
ನ್ಯೂಜಿಲೆಂಡ್ ಮಹಿಳಾ ತಂಡ: 8 ಸೆಂಚುರಿ (2018)
ಸೌತ್ ಆಫ್ರಿಕಾ ಮಹಿಳಾ ತಂಡ : 8 ಸೆಂಚುರಿ (2025)
ಪ್ರತೀಕಾ ರಾವಲ್ 122 ರನ್ ಸಿಡಿಸಿದರೆ, ಸ್ಮೃತಿ ಮಂಧನಾ 109 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಜ್ಯಾಮಿ ರೋಡಿಗ್ರಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ಅಬ್ಬರ ಆರಂಭಗೊಂಡಿತು. ಜ್ಯಾಮಿ ರೋಡಿಗ್ರಸ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. 48 ಓವರ್ ಮುಕ್ತಾಯದ ವೇಳೆಗೆ ಭಾರತ ಮಹಿಳಾ ತಂಡ 2 ವಿಕೆಟ್ ಕಳೆದುಕೊಂಡು 329 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು.
ಒಂದು ಓವರ್‌ಗಾಗಿ ಪಂದ್ಯ ಮತ್ತೆ ಆರಂಭಗೊಂಡಿತು. ಹರ್ಮನ್‌ಪ್ರೀತ್ 10 ರನ್ ಸಿಡಿಸಿ ಔಟಾದರು. ಇತ್ತ ರೋಡಿಗ್ರಿಸ್ ಅಜೇಯ 76 ರನ್ ಸಿಡಿಸಿದರು.ಈ ಮೂಲಕ ಭಾರತ ಮಹಿಳಾ ತಂಡ 49 ಓವರ್‌ಲ್ಲಿ 3 ವಿಕೆಟ್ ಕಳೆದುಕೊಂಡು 340 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.