ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಸೆಮೀಸ್ ಆಡದೇ ಭಾರತ ವನಿತೆಯರು ಫೈನಲ್‌ಗೆ ಲಗ್ಗೆ

By Suvarna News  |  First Published Mar 5, 2020, 11:06 AM IST

ಭಲೇ ಅದೃಷ್ಟವೋ ಅದೃಷ್ಟ. ಕಾಲ ಕೂಡಿ ಬಂದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಭಾರತ ಕ್ರಿಕೆಟ್ ವನಿತರ ಟೀಮ್ ಸಾಕ್ಷಿಯಾಗಿದೆ. ಸೆಮಿ ಫೈನಲ್ ಆಡದೇ ಭಾರತ ವನಿತೆಯರ ಕ್ರಿಕೆಟ್ ಟೀಮ್ ಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.


ಸಿಡ್ನಿ, (ಮಾ.05):  ಐಸಿಸಿ ಮಹಿಳಾ ಕ್ರಿಕೆಟ್ ಟಿ20 ವಿಶ್ವಕಪ್‌  ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಫೈನಲ್ ಪ್ರವೇಶಿಸಿದೆ.

ಇಂದು (ಗುರುವಾರ) ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಆಡಬೇಕಿತ್ತು. ಆದ್ರೆ, ಮಳೆ ಅಡ್ಡಿಪಡಿಸಿದ್ದರಿಂದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಸೆಮೀಸ್ ಪಂದ್ಯ ರದ್ದಾಗಿದೆ.

Latest Videos

undefined

ಈ ಹಿನ್ನೆಲೆಯಲ್ಲಿ ಅಂಕಪಟ್ಟಿಯಲ್ಲಿ ಟಾಪ್‌ನಲ್ಲಿರುವ ಭಾರತ ವನಿತೆಯರು ನೇರವಾಗಿ ಫೈನಲ್ ಲಗ್ಗೆ ಇಟ್ಟಿದೆ. ಈ ಮೂಲಕ 2009ರ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ಗೆ ಭಾರೀ ನಿರಾಸೆಯಾಗಿದೆ.

ಅಪ್ಪ ತರಕಾರಿ ವ್ಯಾಪಾರಿ, ಮಗಳು ಭಾರತ ಕ್ರಿಕೆಟ್ ತಂಡದ ವೀರ ನಾರಿ! 

‘ಎ’ ಗುಂಪಿನಲ್ಲಿ ಸತತ 4 ಗೆಲುವುಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರಿಂದ ಭಾರತ ಫೈನಲ್‌ ಪ್ರವೇಶಿಸಿದಂತಾಗಿದೆ. ಮಹಿಳಾ ತಂಡ ಇದೇ ಮೊದಲ ಬಾರಿಗೆ ಐಸಿಸಿ ಮಹಿಳಾ ಕ್ರಿಕೆಟ್ ಟಿ20 ವಿಶ್ವಕಪ್‌  ಟೂರ್ನಿಯಲ್ಲಿ ಫೈನಲ್‌ಗೆ ದಾಪುಗಾಲಿಟ್ಟಿದೆ.

2ನೇ ಸೆಮಿಫೈನಲ್‌ನಲ್ಲಿ 4 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡದ ಜತೆ ಭಾರತ ಸೆಣಸಾಡಲಿದ್ದು, ಇದೇ ಮಾರ್ಚ್‌ 8ರಂದು ಫೈನಲ್ ಪಂದ್ಯ ನಡೆಯಲಿದೆ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!