ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ Vs ಪಾಕ್ ಡು ಆರ್ ಡೈ ಕದನ; ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ

By Kannadaprabha News  |  First Published Oct 6, 2024, 8:14 AM IST

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿಗಳಾದ ಭಾರತ ಹಾಗೂಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಭಾರತದ ಪಾಲಿಗೆ ಇಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ


ದುಬೈ: ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಕನಸಿನೊಂದಿಗೆ ಯುಎಇ ವಿಮಾನವೇರಿದ್ದ ಭಾರತ ಮಹಿಳಾ ತಂಡ, ಟೂರ್ನಿ ಶುರುವಾದ ಮೂರೇ ದಿನಕ್ಕೆ ನಿರ್ಣಾಯಕ ಘಟ್ಟ ತಲುಪಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿರುವ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಭಾನುವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ದ ಸೆಣಸಾಡಲಿದೆ. ಪಂದ್ಯಕ್ಕೆ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಶುಕ್ರವಾರ ಕಿವೀಸ್ ವಿರುದ್ಧ ಭಾರತ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿ, 58 ರನ್‌ಗಳಿಂದ ಸೋಲಿನ ಆಘಾತಕ್ಕೊಳ ಗಾಗಿತ್ತು. ತಂಡ ಸದ್ಯ ಕಳಪೆ ನೆಟ್ ರನ್‌ರೇಟ್ (-2.99) ಹೊಂದಿದ್ದು, 5 ತಂಡಗಳಿರುವ 'ಎ' ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ. ತಂಡ ಇನ್ನು ಪಾಕ್ ವಿರುದ್ಧ ಪಂದ್ಯ ಸೇರಿ ಒಟ್ಟು 3 ಪಂದ್ಯಗಳನ್ನಾಡಲಿದ್ದು, ಎಲ್ಲ ಪಂದ್ಯಗಳಲ್ಲಿ ಗೆಲ್ಲುವ ಅಗತ್ಯವಿದೆ. ಪಾಕ್ ವಿರುದ್ಧ ಸೋತರೆ ಭಾರತ ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಗುಳಿಯಲಿದೆ.

Latest Videos

undefined

ಸಚಿನ್ ಏಕದಿನ ದ್ವಿಶತಕ ಬಾರಿಸಿದ ಬಳಿಕ ಗ್ವಾಲಿಯರ್ ಸ್ಟೇಡಿಯಂ 14 ವರ್ಷ ಬಂದ್ ಆಗಿದ್ದೇಕೆ?

ಭಾರತಕ್ಕೆ ಪಾಕ್ ಪಂದ್ಯಕ್ಕೂ ಮುನ್ನ ಪ್ರಮುಖ ತಲೆನೋವಾಗಿರುವುದು ತಂಡದ ಆಯ್ಕೆ, ನಾಯಕಿ ಹರ್ಮನ್‌ಪ್ರೀತ್ ತಮ್ಮ ಎಂದಿನ 4ನೇ ಕ್ರಮಾಂಕದ ಬದಲು ಮತ್ತೆ 3ನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ 3ನೇ ಕ್ರಮಾಂಕದಲ್ಲಿ ಆಡಿರುವ ಕಳೆದ 19 ಇನ್ನಿಂಗ್ಸ್ ಗಳಲ್ಲಿ ಒಮ್ಮೆಯೂ ಹರ್ಮನ್ ಅರ್ಧಶತಕ ಬಾರಿಸಿಲ್ಲ. ಹೀಗಾಗಿ ಪಾಕ್ ವಿರುದ್ಧ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕ ಬದಲಿಸಲಿದ್ದಾರೆಯೇ ಎಂಬ ಎಂಬ ಕುತೂಹಲವಿದೆ. ಉಳಿದಂತೆ ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್ ಹಾಗೂ ರಿಚಾ ಘೋಷ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಬೌಲರ್‌ಗಳು ಸುಧಾರಿತ ಪ್ರದರ್ಶನ ನೀಡುವ ಅಗತ್ಯವಿದೆ. ಕಳೆದ ಪಂದ್ಯದಲ್ಲಿ 4 ಓವರಲ್ಲಿ 45 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದ ಆಲ್ರೌಂಡರ್ ದೀಪ್ತಿ ಶರ್ಮಾ ಪಾಕ್ ವಿರುದ್ದ ತಮ್ಮ ಎಂದಿನ ಆಟವಾಡಬೇಕಿದೆ. ಹೆಚ್ಚುವರಿ ವೇಗಿ ಅರುಂಧತಿ ರೆಡ್ಡಿ ಬದಲು ರಾಧಾ ಯಾದವ್‌ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. 

ಪಾಕ್‌ಗೆ 2ನೇ ಜಯ ಗುರಿ: ಪಾಕಿಸ್ತಾನ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿದ್ದು, ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅನುಭವಿ ನಿದಾ ಧಾರ್, ನಾಯಕಿ ಫಾತಿಮಾ ಸನಾ, ಸಾದಿಯಾ ಇಕ್ಬಾಲ್ ತಂಡದ ಪ್ರಮುಖ ಆಧಾರಸ್ತಂಭಗಳು. ಆದರೆ ಪಾಕ್ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.

ಭಾರತ-ಕಿವೀಸ್‌ ಬೆಂಗಳೂರು ಟೆಸ್ಟ್‌ ಟಿಕೆಟ್‌ ಸೇಲ್‌ ಶುರು; ಕನಿಷ್ಠ ಟಿಕೆಟ್ ಬೆಲೆ ಎಷ್ಟು? ಎಲ್ಲಿ ಟಿಕೆಟ್ ಖರೀದಿಸೋದು?

ಸಂಭವನೀಯ ಆಟಗಾರರ ಪಟ್ಟಿ 

ಭಾರತ:
ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ/ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಆಶಾ ಶೋಭನಾ, ರೇಣುಕಾ ಸಿಂಗ್.

ಪಾಕಿಸ್ತಾನ:
ಮುನೀಬಾ ಅಲಿ, ಫಿರೋಜಾ, ಸಿದ್ರಾ, ನಿದಾ ದಾರ್, ಆಲಿಯಾ, ಒಮೈಮಾ, ಫಾತಿಮಾ(ನಾಯಕಿ), ತೂಬಾ, ನಶ್ರಾ, ಡಯಾನಾ, ಸಾದಿಯಾ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಹಾಟ್‌ಸ್ಟಾರ್

click me!