Women's Big Bash League‌: ಹರ್ಮನ್‌ಪ್ರೀತ್ ಕೌರ್‌ಗೆ ಸರಣಿ ಶ್ರೇಷ್ಠ ಗೌರವ

By Suvarna News  |  First Published Nov 25, 2021, 10:02 AM IST

* ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರಿರುವ ಹರ್ಮನ್‌ಪ್ರೀತ್ ಕೌರ್

* ಹರ್ಮನ್‌ಗೆ ಒಲಿಂದ ಮಹಿಳಾ ಬಿಗ್‌ಬ್ಯಾಶ್ ಲೀಗ್ ಸರಣಿ ಶ್ರೇಷ್ಠ ಪ್ರಶಸ್ತಿ

* ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿರುವ ಹರ್ಮನ್‌ಪ್ರೀತ್ ಕೌರ್


ಕ್ಯಾನ್‌ಬೆರ್ರಾ(ನ.25): 7ನೇ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ (Women's Big Bash League‌) ಮೆಲ್ಬರ್ನ್‌ ರೆನಿಗೇಡ್ಸ್‌ ತಂಡದ ಆಟಗಾರ್ತಿ, ಭಾರತ ಮಹಿಳಾ ಟಿ20 ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಹರ್ಮನ್‌ ಪಾತ್ರರಾಗಿದ್ದಾರೆ. 

ಸರಣಿ ಶ್ರೇಷ್ಠ ಪ್ರಶಸ್ತಿಗೆ ಅಂಪೈರ್‌ಗಳ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದ ಹರ್ಮನ್‌ಪ್ರೀತ್‌ ಕೌರ್‌ 31 ಮತ ಪಡೆದರೆ, ಪರ್ಥ್‌ ಸ್ಕಾರ್ಚ​ರ್ಸ್‌ ಬೆಥ್‌ ಮೂನಿ ಹಾಗೂ ಸೋಫೀ ಡೆವೈನ್‌ ತಲಾ 28 ಮತ ಪಡೆದರು. ಕೌರ್‌ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ 3ನೇ ವಿದೇಶಿ ಆಟಗಾರ್ತಿಯಾಗಿದ್ದಾರೆ. ಈ ಮೊದಲು ನ್ಯೂಜಿಲೆಂಡ್‌ನ ಡೆವೈನ್‌(2 ಬಾರಿ) ಹಾಗೂ ಆಮಿ ಸ್ಯಾಟಥ್‌ರ್‍ವೈಟ್‌ ಈ ಸಾಧನೆ ಮಾಡಿದ್ದರು. 

Latest Videos

undefined

7ನೇ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ ಹರ್ಮನ್‌ಪ್ರೀತ್ ಕೌರ್‌ ಟೂರ್ನಿಯಲ್ಲಿ 12 ಪಂದ್ಯಗಳಲ್ಲಿ 3 ಅರ್ಧಶತಕಗಳೊಂಡಿಗೆ ಒಟ್ಟು 399 ರನ್‌ ಕಲೆಹಾಕಿದ್ದು, 15 ವಿಕೆಟ್‌ ಸಹ ಕಬಳಿಸಿದ್ದಾರೆ. ಇನ್ನು ಮೆಲ್ಬರ್ನ್‌ ರೆನಿಗೇಡ್ಸ್‌ (Melbourne Renegades) ತಂಡದ ಸಹ ಆಟಗಾರ್ತಿ ಜೆಮಿಯಾ ರೋಡ್ರಿಗಸ್‌ (Jemimah Rodrigues) ಕೂಡಾ ಉತ್ತಮವಾಗಿ ರನ್‌ ಗಳಿಸಿ ಗಮನ ಸೆಳೆದಿದ್ದಾರೆ. ಜೆಮಿಯಾ 116.11ರ ಸ್ಟ್ರೈಕ್‌ರೇಟ್‌ನಲ್ಲಿ 317 ರನ್‌ ಬಾರಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ಸ್ಕೋರರ್‌ ಎನಿಸಿದ್ದಾರೆ. 

3️⃣9️⃣9️⃣ runs, 1️⃣5️⃣ wickets and counting 🤩
Most sixes in 🔥
First Indian to win Player of the Tournament in the WBBL ✅ has put up some mind-boggling all-round numbers for the 🤯

Can she end the season with the trophy? 🏆🤞🏼 pic.twitter.com/DKD405u3ZV

— Delhi Capitals (@DelhiCapitals)

IPL 2022: ಈ ಐವರು ಬ್ಯಾಟರ್‌ಗಳು RCB ಪರ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬಬಲ್ಲರು..!

ಭಾರತದ ತಾರಾ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ತಮಗೆದುರಾದ ಎಲ್ಲಾ ಅಡ್ಡಿ ಆತಂಕಗಳನ್ನು ಮೆಟ್ಟಿನಿಂತು ಮಹಿಳಾ ಬಿಗ್‌ಬ್ಯಾಶ್‌ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದರು. ಈ ಮೂಲಕ ಹಲವು ಭಾರತೀಯ ಯುವ ಕ್ರಿಕೆಟ್ ಆಟಗಾರ್ತಿಯರಿಗೆ ಸ್ಪೂರ್ತಿ ಎನಿಸಿಕೊಂಡಿದ್ದರು. ಯಾವುದೇ ಟೂರ್ನಿಯಲ್ಲಿ ಆಡಿದರೂ ಒಂದಷ್ಟು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅದೇ ರೀತಿ ನಮ್ಮ ಪ್ರತಿಭೆ ಅನಾವರಣ ಮಾಡಲು ಮಹಿಳಾ ಬಿಗ್‌ಬ್ಯಾಶ್ ಲೀಗ್ ಒಂದೊಳ್ಳೆಯ ವೇದಿಕೆಯಾಗಿದೆ. ಪ್ರತಿ ಭಾರತೀಯರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವಾಗಿ ತಿಳಿಸಿದ್ದಾರೆ. ನನಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿರುವುದು ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಮತ್ತಷ್ಟು ಹುರುಪು ತುಂಬಲಿದೆ ಎಂದು ಹರ್ಮನ್‌ಪ್ರೀತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮೆಲ್ಬರ್ನ್‌ ರೆನಿಗೇಡ್ಸ್‌ ತಂಡವು ಆಡಿದ 14 ಪಂದ್ಯಗಳ ಪೈಕಿ 8 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ

ಲಂಕಾ ಟೆಸ್ಟ್‌: ಸೋಲಿನ ಸುಳಿಯಲ್ಲಿ ವಿಂಡೀಸ್‌

ಕೊಲಂಬೊ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ ತಂಡ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ಗೆಲುವಿಗೆ 348 ರನ್‌ ಗುರಿ ಪಡೆದಿರುವ ವಿಂಡೀಸ್‌ 4ನೇ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ ಕೇವಲ 52 ರನ್‌ ಗಳಿಸಿದ್ದು, ಕೊನೆಯ ದಿನ ಇನ್ನೂ 296 ರನ್‌ ಗಳಿಸಬೇಕಿದೆ.

ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 386 ರನ್‌ ಕಲೆಹಾಕಿದ್ದರೆ, ವಿಂಡೀಸ್‌ 230 ರನ್‌ಗೆ ಆಲೌಟ್‌ ಆಗಿತ್ತು. 156 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಲಂಕಾ 191 ರನ್‌ಗೆ 2ನೇ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಕಠಿಣ ಗುರಿ ಪಡೆದ ವಿಂಡೀಸ್‌ ರಮೇಶ್‌ ಮೆಂಡಿಸ್‌(4), ಲಸಿತ್‌ ಎಂಬುಲ್ಡೆನಿಯಾ ದಾಳಿಗೆ ಕುಸಿಯಿತು.

ಸ್ಕೋರ್‌: 
ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 386/10, ವೆಸ್ಟ್‌ಇಂಡೀಸ್‌ 230/10, 
ಶ್ರೀಲಂಕಾ 2ನೇ ಇನ್ನಿಂಗ್ಸ್‌ 191/4(ಡಿಕ್ಲೇರ್‌), ವೆಸ್ಟ್‌ಇಂಡೀಸ್‌ 52/6

click me!