ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ ಎದುರು ಪಾಕಿಸ್ತಾನಕ್ಕೆ ಡು ಆರ್ ಡೈ ಮ್ಯಾಚ್! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?

Kannadaprabha News   | Kannada Prabha
Published : Sep 05, 2026, 07:25 AM IST
IND vs PAK

ಸಾರಾಂಶ

ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತಕ್ಕೆ ಇದು ಪ್ರತಿಷ್ಠೆಯ ಪಂದ್ಯವಾದರೆ, ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಕ್ರಿಕೆಟ್‌ ಅಂಗಳದಲ್ಲಿ ಕಾದಾಟಕ್ಕೆ ಸಜ್ಜಾಗಿವೆ. ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಉಭಯ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ.

ಭಾರತ ‘ಎ’ ಗುಂಪಿನಲ್ಲಿ ಆಡಿರುವ ಎರಡು ಪಂದ್ಯಗಳಲ್ಲೂ ಗೆದ್ದಿದ್ದು, ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಸೋತರೂ ಭಾರತಕ್ಕೆ ನಷ್ಟವಿಲ್ಲ. ಆದರೆ ಸೆಮಿಫೈನಲ್‌ ದೃಷ್ಟಿಯಲ್ಲಿ ಭಾರತ ಈ ಪಂದ್ಯದಲ್ಲಿ ತನ್ನ ಬ್ಯಾಟಿಂಗ್‌ ಪಡೆಯನ್ನು ಬಲಿಷ್ಠಗೊಳಿಸಬೇಕಿದೆ. ಭಾರತ ಈಗ ಥಾಯ್ಲೆಂಡ್‌, ಹಾಂಕಾಂಗ್‌ ವಿರುದ್ಧ ಆಡಿದೆ. ಇವೆರಡೂ ತಂಡಕ್ಕೆ ಸುಲಭ ತುತ್ತಾಗಿದ್ದರೂ, ಭಾರತದ ಪ್ರಮುಖ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು. ಸ್ಮೃತಿ ಮಂಧನಾ ಹೊರತಾಗಿ ಇತರರು ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾಗುತ್ತಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್, ಶಫಾಲಿ ವರ್ಮಾ, ರಿಚಾ ಘೋಷ್‌ ಸ್ಥಿರ ಆಟವಾಡುತ್ತಿಲ್ಲ. ಹೀಗಾಗಿ ಅವರು ಪಾಕ್‌ ವಿರುದ್ಧ ಅಬ್ಬರಿಸಲೇಬೇಕಿದೆ.

ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ರೆಡಿಯಾದ ಪಾಕಿಸ್ತಾನ

ಇದೇ ವೇಳೆ ಪಾಕ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ತಂಡ ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ಧ ಗೆದ್ದಿದೆ. ಈ ಪಂದ್ಯದಲ್ಲಿ ಭಾರತ ವಿರುದ್ಧ ಸೋತರೆ, ತಂಡ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ಹಾಂಕಾಂಗ್‌ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಫಾತಿಮಾ ಸನಾ ನಾಯಕತ್ವದ ತಂಡ, ಭಾರತದಕ್ಕೆ ಕಠಿಣ ಸವಾಲೊಡ್ಡುವ ಕಾತರದಲ್ಲಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌.

ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ: 22ಕ್ಕೆ ಭಾರತ-ಜಪಾನ್‌ ಟಿ20 ಪಂದ್ಯ

ನವದೆಹಲಿ: ಭಾರತ-ಜಪಾನ್ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವದ ಆಚರಣೆ ಸಲುವಾಗಿ ಸೆ.22ರಂದು ಉಭಯ ದೇಶಗಳ ನಡುವೆ ಐತಿಹಾಸಿಕ ಟಿ20 ಪಂದ್ಯ ನಡೆಯಲಿದೆ. ಇದು 2 ದೇಶಗಳ ನಡುವೆ ನಡೆಯಲಿರುವ ಮೊದಲ ಕ್ರಿಕೆಟ್‌ ಪಂದ್ಯ.

ಜಪಾನಿನ ಸಾನೋದಲ್ಲಿ ಈ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನಡೆಸಲಿದ್ದು, ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌ ತಂಡದಲ್ಲಿರಲಿದ್ದಾರೆ ಎನ್ನಲಾಗಿದೆ. ಸೆ.19ರಿಂದ ಜಪಾನ್‌ನಲ್ಲಿ ಏಷ್ಯನ್‌ ಗೇಮ್ಸ್‌ ಪ್ರಾರಂಭವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಹಿಟ್‌ಮ್ಯಾನ್ ಅಸಲಿ ವೈರಿ ಯಾರು? ಟೀಂ ಇಂಡಿಯಾದಲ್ಲಿ ನಡೀತಿರೋ ಈ ಕಳಪೆ ಗೇಮ್ ಪ್ಲಾನ್ ಏನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!
Cricket: ಸಿಕ್ಸರ್‌ಗಳ ಕಿಂಗ್, ಸೆಂಚುರಿಗಳ ಸರದಾರ! ವಿಶ್ವಕಪ್ ಮೈದಾನದಲ್ಲಿ ‘ರೋಹಿತ್ ಶೋ’ ಹಿಂದಿದೆ ಮುರಿಯಲಾಗದ ದಾಖಲೆ!