7 ನಂಬರ್ ಬದಲಾಯಿಸಿ ಅಂದ್ರು, ಧೋನಿ ಹೇಳಿದ್ದು ಒಂದೇ ಮಾತು - ವೈರಲ್ ಆಗ್ತಿದೆ ಧೋನಿ ಉತ್ತರ!

Published : Nov 29, 2026, 10:10 PM IST
MS Dhoni

ಸಾರಾಂಶ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಜರ್ಸಿ ನಂಬರ್ 7 ಅನ್ನು ಆಯ್ಕೆ ಮಾಡಿಕೊಂಡ ಹಿಂದಿನ ಕುತೂಹಲಕಾರಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಸಂಖ್ಯಾಶಾಸ್ತ್ರಜ್ಞರೊಬ್ಬರು ನಂಬರ್ ಬದಲಾಯಿಸಲು ಹೇಳಿದರೂ, ಮೂಢನಂಬಿಕೆಗಿಂತ ಕಠಿಣ ಅಭ್ಯಾಸವೇ ಮುಖ್ಯ ಎಂದು ಆ ಸಲಹೆಯನ್ನು ಅವರು ತಿರಸ್ಕರಿಸಿದ್ದರು.

ನಂಬರ್ 7. ಎಂಎಸ್‌ ಧೋನಿ ಅವರ ಜರ್ಸಿ ನಂಬರ್. ಭಾರತೀಯ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದೇ ನೆನಪಿನಲ್ಲಿ ಉಳಿಯುವ ಸಂಖ್ಯೆ 7. ಇದೀಗ ಧೋನಿ ಅವರು ತಾವು ಯಾಕೆ ನಂಬರ್ 7 ಆಯ್ಕೆ ಮಾಡಿಕೊಂಡೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಖ್ಯಾತ ಸಂಖ್ಯಾ ಶಾಸ್ತ್ರಜ್ಞರೊಬ್ಬರು ನಂಬರ್ 7 ಬದಲಾಯಿಸುವಂತೆ ಕೇಳಿಕೊಂಡಿದ್ದರು. ಅದನ್ನು ತಾವು ಹೇಗೆ ತಿರಸ್ಕರಿಸಿದೆ. ಜೊತೆಗೆ ನಂಬರ್ ಮೇಲೆ ತಮಗಿದ್ದ ನಂಬಿಕೆ ಏನಾಗಿತ್ತು ಅನ್ನೋದನ್ನು ಎಂಎಸ್ ಧೋನಿ ವಿವರಿಸಿದ್ದಾರೆ.

ಧೋನಿ ನಂಬಿಕೆ ಏನು?

ACKO ನ ದಿ ಪರ್ಪಲ್ ಕಾರ್ಪೆಟ್‌ನಲ್ಲಿ ಮಾತನ್ನಾಡಿರುವ ಧೋನಿ.. ನಾನು ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದಾಗ ಯಾವ ನಂಬರ್ ಬೇಕು ಎಂದು ಕೇಳಿದರು. ನಾನು 1981ರ ಜುಲೈ 7ರಂದು ಹುಟ್ಟಿದ್ದು, ಹಾಗಾಗಿ 7, 7, ಎಂಟು ಮೈನಸ್ ಒಂದು, ಏಳು - ಹಾಗಾಗಿ ನಾನು, ನಂ.7 ಕೊಡಿ, ಬೇರೆ ಯಾರೂ ಬಳಸುತ್ತಿಲ್ಲದಿದ್ದರೆ ನನಗೆ ಅದೇ ಖುಷಿ ಎಂದಿದ್ದೆ. ನಾನು ಮೂಢನಂಬಿಕೆಯಿಂದ ಹಾಗೆ ಹೇಳಿರಲಿಲ್ಲ.

ಕ್ರಿಕೆಟ್‌ನಲ್ಲಿ ನಿಮ್ಮ ಫಾರ್ಮ್ ಏರುಪೇರಾಗುತ್ತಿರುತ್ತದೆ. ನಾನು ವಿಮಾನದಲ್ಲಿ ಹೋಗುತ್ತಿದ್ದಾಗ ಒಬ್ಬ ಸಂಖ್ಯಾಶಾಸ್ತ್ರ ತಜ್ಞ ನನ್ನ ಬಳಿ ಬಂದರು. ನಾನು ನನ್ನ ಜೆರ್ಸಿ ನಂಬರ್ 7 ಬದಲಾಯಿಸಿದರೆ ಇದು ಆಗುತ್ತದೆ, ಅದು ಆಗುತ್ತದೆ ಎಂದು ಸಲಹೆ ನೀಡಿದರು. ಆದರೆ ನಾನು ಅವರ ಸಲಹೆಯನ್ನು ತಿರಸ್ಕರಿಸಿದೆ. ನಾನು ಅವರನ್ನು ಕೇಳಿದೆ. ಇದು ಎಲ್ಲಿ ನಿಲ್ಲುತ್ತದೆ? ನಾನು 7 ರಿಂದ 11 ಕ್ಕೆ ಬದಲಾಯಿಸುತ್ತೇನೆ, ನಂತರ 11 ರಿಂದ 15 ಕ್ಕೆ ಬದಲಾಯಿಸುತ್ತೇನೆ. ಆದರೆ ನನ್ನ ನ್ಯೂನತೆಗಳನ್ನು ನನ್ನ ಜೆರ್ಸಿ ನಂಬರ್ ಮೇಲೆ ಹಾಕುತ್ತಲೇ ಇರುತ್ತೇನೆ. ನಾನು ಚೆನ್ನಾಗಿ ಅಭ್ಯಾಸ ಮಾಡಿದರೆ, ಸರಿಯಾಗಿ ಆಡಿದರೆ ನಾನು ನಂಬರ್ ಮೇಲೆ ಅವಲಂಬಿತರಾಗಬೇಕಿಲ್ಲ ಎಂದಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 90 ಟೆಸ್ಟ್ ಮ್ಯಾಚ್‌ಗಳನ್ನ ಆಡಿರುವ ಧೋನಿ 38.09 ಸರಾಸರಿಯೊಂದಿಗೆ 4876 ರನ್‌ಗಳಿಸಿದ್ದಾರೆ. 224 ಅತ್ಯಧಿಕ ಸ್ಕೋರ್ ಆಗಿದ್ದರೆ, ಆರು ಶತಕ 33 ಅರ್ಧ ಶತಕ ಕೂಡ ಸೇರಿದೆ. 350 ಏಕದಿನ ಪಂದ್ಯಗಳನ್ನ ಆಡಿರುವ ಅವರು 50.57 ಸರಾಸರಿಯಲ್ಲಿ 10,773 ರನ್‌ಗಳಿಸಿದ್ದಾರೆ. 183 ಅತ್ಯಧಿಕ ರನ್ ಆಗಿದ್ದರೆ, 10 ಸೆಂಚುರಿ 73 ಅರ್ಧ ಶತಕ ಸೇರಿದೆ. 98 ಟಿ-20 ಪಂದ್ಯಗಳಲ್ಲಿ 37.60 ಸರಾಸರಿಯಲ್ಲಿ 1617 ರನ್‌ಗಳಿಸಿದ್ದಾರೆ. 56 ಅತ್ಯಧಿಕ ಸ್ಕೋರ್ ಆಗಿದೆ. ಎರಡು ಅರ್ಧ ಶತಕವನ್ನೂ ಬಾರಿಸಿದ್ದಾರೆ. 2026 ವರೆಗೂ ಐಪಿಎಲ್ ಆಡಿದ್ದ ಧೋನಿ ಈ ವರ್ಷದಿಂದ ಬ್ಯಾಟ್ ಹಿಡಿದು ಮೈದಾನಕ್ಕೆ ಬರಲ್ಲ. ಸಿಎಸ್‌ಕೆ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುಜ್ವೇಂದ್ರ ಚಹಾಲ್ ಬಳಿಕ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಸರದಿ? ಬಿಜೆಪಿ ಅಧ್ಯಕ್ಷರ ಭೇಟಿಯಿಂದ ರಾಜಕೀಯ ಎಂಟ್ರಿ ಚರ್ಚೆ!
IPL 2027: ಅವನನ್ನು ರಿಲೀಸ್ ಮಾಡಬೇಕಿತ್ತು, ಆತನೇ ಆರ್‌ಸಿಬಿ ತಂಡದ ದುರ್ಬಲ ಕೊಂಡಿ ಎಂದು ಕಿಡಿಕಾರಿದ ಹರ್ಷಾ ಬೋಗ್ಲೆ..!