ಧೋನಿ ಶಿಷ್ಯನಿಗೆ ಟೀಂ ಇಂಡಿಯಾದಲ್ಲಿ ಪದೇ ಪದೇ ಅನ್ಯಾಯ!

By Suvarna NewsFirst Published Sep 30, 2024, 3:34 PM IST
Highlights

ಬಾಂಗ್ಲಾದೇಶ ಎದುರಿನ ಟಿ20 ಸರಣಿಗೆ ಧೋನಿ ಶಿಷ್ಯ ಋತುರಾಜ್ ಗಾಯಕ್ವಾಡ್ ಅವರನ್ನು ಕೈಬಿಡಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಈ ಯಂಗ್‌ಸ್ಟರ್ ಟೀಂ ಇಂಡಿಯಾ ಪರ ಟಿ20ಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾನೆ. ಆ ಮೂಲಕ ತನ್ನ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾನೆ. ಇಷ್ಟಾದ್ರೂ, ಬಾಂಗ್ಲಾದೇಶ ಎದುರಿನ ಟಿ20 ತಂಡದಿಂದ ಈತನನ್ನ ಡ್ರಾಪ್ ಮಾಡಲಾಗಿದೆ. ಮತ್ತೊಂದೆಡೆ ಕಳಪೆ ಪ್ರದರ್ಶನ ನೀಡಿರೋ ಆಟಗಾರನಿಗೆ ತಂಡದಲ್ಲಿ ಚಾನ್ಸ್ ನೀಡಲಾಗಿದೆ. ಅಷ್ಟಕ್ಕೂ ಯಾರು ಆ ಆಟಗಾರರು ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ತಂಡದಲ್ಲಿ ಋತುರಾಜ್ ಗಾಯಕ್ವಾಡ್‌ಗೆ ಚಾನ್ಸ್ ನೀಡದಿರೋದ್ಯಾಕೆ?

Latest Videos

ಟೆಸ್ಟ್ ಸರಣಿಯ ನಂತರ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಆಡಲಿದೆ. 3 ಪಂದ್ಯಗಳ ಈ ಸರಣಿಗಾಗಿ ಈಗಾಗ್ಲೇ ಸೂರ್ಯ ಕುಮಾರ್ ಯಾದವ್ ನಾಯಕತ್ವದಲ್ಲಿ ತಂಡವನ್ನ ಆಯ್ಕೆ ಮಾಡಲಾಗಿದೆ. ಆದ್ರೆ, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ರಿಷಭ್ ಪಂತ್ ಸೇರಿದಂತೆ ಕೆಲ ಪ್ರಮುಖ ಆಟಗಾರರಿಗೆ ರೆಸ್ಟ್ ನೀಡಲಾಗಿದೆ. 

ಕಾನ್ಪುರ ಟೆಸ್ಟ್‌: ಮೊದಲ 3 ಓವರ್‌ನಲ್ಲೇ ಫಿಫ್ಟಿ ಬಾರಿಸಿದ ಟೀಂ ಇಂಡಿಯಾ; ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ

ಐಪಿಎಲ್‌ನಲ್ಲಿ ಮಿಂಚಿದ್ದ ಯುವ ವೇಗಿ ಮಯಾಂಕ್ ಯಾದವ್, ಆಲ್ರೌಂಡರ್ ನಿತೀಶ್ ರೆಡ್ಡಿ ಇದೇ ಮೊದಲ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವರುಣ್ ಚಕ್ರವರ್ತಿ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದ್ರೆ, ತಂಡದಲ್ಲಿ ಅಭಿಷೇಕ್ ಶರ್ಮಾರನ್ನ ಬಿಟ್ರೆ, ಬೇರೆ ಆರಂಭಿಕ ಬ್ಯಾಟರ್ ಇಲ್ಲ. ಮತ್ತೊಂದೆಡೆ ಋತುರಾಜ್ ಗಾಯಕ್ವಾಡ್‌ನ ಅಯ್ಕೆ ಮಾಡಿಲ್ಲ.  ಇದೇ ಈಗ ದೊಡ್ಡ ಚರ್ಚೆಯಾಗಿದೆ. 

ಯೆಸ್, ಬಾಂಗ್ಲಾ ಟಿ20 ಸರಣಿಗೆ  ಮಹಾರಾಷ್ಟ್ರ ಪ್ಲೇಯರ್ ಋತುರಾಜ್ ಆಯ್ಕೆಯಾಗಿಲ್ಲ. ಇದ್ರಿಂದ ಸೆಲೆಕ್ಟರ್ಸ್ ಋತುರಾಜ್ ಕರಿಯರ್ ಜೊತೆ ಆಟವಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಋತುರಾಜ್ ಟಿ20ಯಲ್ಲಿ ಅದ್ಭುತ ಬ್ಯಾಟರ್, ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ನೀಡಿದ್ರು. ಇಷ್ಟಾದ್ರೂ ತಂಡದಿಂದ ಸೈಡ್‌ಲೈನ್ ಮಾಡ್ತಿರೋದ್ಯಾಕೆ? ಅಂತ ಫ್ಯಾನ್ಸ್ ಪ್ರಶ್ನಿಸ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಋತುರಾಜ್ ಆಯ್ಕೆಯಾಗಿರಲಿಲ್ಲ. ಈಗ ಗಿಲ್, ಜೈಸ್ವಾಲ್ ಅಲಭ್ಯತೆಯಲ್ಲೂ ಸ್ಥಾನ ನೀಡಿಲ್ಲ.  

ಬಾಂಗ್ಲಾದೇಶ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಮಾರಕ ವೇಗಿ ಮಯಾಂಕ್‌ಗೆ ಜಾಕ್‌ಪಾಟ್, ಇಶಾನ್ ಕಿಶನ್‌ಗೆ ಶಾಕ್

ಟಿ20ಯಲ್ಲಿ ಮಹಾರಾಷ್ಟ್ರ ಪ್ಲೇಯರ್ ಟ್ರ್ಯಾಕ್ ರೆಕಾರ್ಡ್ ಸೂಪರ್!

ಅಂತರಾಷ್ಟ್ರೀಯ ಟಿ20ಯಲ್ಲಿ ಋತುರಾಜ್, ಉತ್ತಮ ದಾಖಲೆ ಹೊಂದಿದ್ದಾರೆ. ಟೀಂ ಇಂಡಿಯಾ ಪರ ಈವರೆಗೂ 23 ಟಿ20 ಪಂದ್ಯಗಳನ್ನಾಡಿ, 39.56ರ ಸರಾಸರಿ ಮತ್ತು  143.54ರ ಸರಾಸರಿಯಲ್ಲಿ 633 ರನ್ ಸಿಡಿಸಿದ್ದಾರೆ. ಇದ್ರಲ್ಲಿ 1 ಶತಕ ಮತ್ತು 4 ಅರ್ಧಶತಕ ಸೇರಿವೆ. 

ಫ್ಲಾಪ್ ಸ್ಟಾರ್ ಸಂಜು ಸ್ಯಾಮ್ಸನ್‌ಗೆ ಮತ್ತೆ ಮಣೆ ಹಾಕಿದ ಸೆಲೆಕ್ಟರ್ಸ್!
 
ಯೆಸ್, ಋತುರಾಜ್‌ನ ಕಡೆಗಣಿಸಿರೋ ಸೆಲೆಕ್ಟರ್ಸ್, ಟಿ20ಯಲ್ಲಿ ಕಳಪೆ ದಾಖಲೆ ಇರೋ ಸಂಜು ಸ್ಯಾಮ್ಸನ್‌ಗೆ ಚಾನ್ಸ್ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಅಟ್ಟರ್ ಫ್ಲಾಪ್ ಶೋ ನೀಡಿದ್ರು. ಸತತ ಎರಡು ಪಂದ್ಯಗಳಲ್ಲಿ ಡಕೌಟ್ ಆಗಿದ್ರು. ಅಷ್ಟೇ ಅಲ್ಲ, ಈವರೆಗೂ 30 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ಕೇರಳ ಬ್ಯಾಟರ್, ಕೇವಲ 19.31ರ ಸರಾಸರಿ ಯಲ್ಲಿ  444 ರನ್ಕಲೆಹಾಕಿದ್ದಾರೆ. ಎರಡು ಬಾರಿ ಮಾತ್ರ, ಅರ್ಧಶತಕದ ಗಡಿ ದಾಟಿದ್ದಾರೆ. ಬಾಂಗ್ಲಾ ವಿರುದ್ಧ ಸಂಜು ಅಬ್ಬರಿಸದೇ ಇದ್ರೆ, ಟಿ20ಯಲ್ಲಿ ಟೀಂ ಇಂಡಿಯಾದ ಬಾಗಿಲು ಶಾಶ್ವತವಾಗಿ ಮುಚ್ಚಿದ್ರು ಅಚ್ಚರಿ ಇಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!