IPL 2026: ನಿನ್ನೆ ನಡೆದ ಮುಂಬೈ ಇಂಡಿಯನ್ಸ್‌-ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 30, 2026, 09:46 AM IST
SRH vs MI

ಸಾರಾಂಶ

ಮುಂಬೈ ಇಂಡಿಯನ್ಸ್‌ ನೀಡಿದ 244 ರನ್‌ಗಳ ಬೃಹತ್ ಗುರಿಯನ್ನು ಸನ್‌ರೈಸರ್ಸ್‌ ಹೈದರಾಬಾದ್‌ ಯಶಸ್ವಿಯಾಗಿ ಬೆನ್ನಟ್ಟಿತು. ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಕ್ಲಾಸೆನ್‌ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್‌ 18.4 ಓವರ್‌ಗಳಲ್ಲಿ ಗೆಲುವು ಸಾಧಿಸಿ, ಮುಂಬೈಗೆ 6ನೇ ಸೋಲುಣಿಸಿತು.

ಮುಂಬೈ: ಮುಂಬೈ ಇಂಡಿಯನ್ಸ್‌ ನೀಡಿದ್ದ ಬರೋಬ್ಬರಿ 244 ರನ್‌ ಗುರಿಯನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಬೆನ್ನತ್ತಿ ಗೆದ್ದಿದೆ. 9 ಪಂದ್ಯಗಳಲ್ಲಿ 6ನೇ ಗೆಲುವು ದಾಖಲಿಸಿದ ಸನ್‌ರೈಸರ್ಸ್‌ ಪ್ಲೇ-ಆಫ್‌ಗೆ ಹತ್ತಿರವಾದರೆ, ಮುಂಬೈ 8 ಪಂದ್ಯಗಳಲ್ಲಿ 6ನೇ ಸೋಲನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಮುಂಬೈ 5 ವಿಕೆಟ್‌ಗೆ 243 ರನ್‌ ಗಳಿಸಿತು. ಆರಂಭಿಕ ಜೋಡಿ ರ್‍ಯಾನ್‌ ರಿಕೆಲ್ಟನ್‌ ಹಾಗೂ ವಿಲ್‌ ಜ್ಯಾಕ್ಸ್‌ ಸ್ಫೋಟಕ ಆಡವಾಡಿತು. ಜ್ಯಾಕ್ಸ್‌ 22 ಎಸೆತಕ್ಕೆ 46 ರನ್‌ ಗಳಿಸಿದರೆ, ರಿಕೆಲ್ಟನ್‌ 55 ಎಸೆತಕ್ಕೆ ಔಟಾಗದೆ 123 ರನ್‌ ಸಿಡಿಸಿದರು. ಹಾರ್ದಿಕ್‌ ಪಾಂಡ್ಯ 15 ಎಸೆತಕ್ಕೆ 31 ರನ್‌ ಸಿಡಿಸಿದರು.

ಸನ್‌ರೈಸರ್ಸ್‌ಗೆ ಸವಾಲಾಗದ ಮುಂಬೈ ಟಾರ್ಗೆಟ್

ಆಕ್ರಮಣಕಾರಿ ಬ್ಯಾಟರ್‌ಗಳಿರುವ ಸನ್‌ರೈಸರ್ಸ್‌ಗೆ ಈ ಮೊತ್ತ ಸವಾಲಾಗಲಿಲ್ಲ. ತಂಡ 18.4 ಓವರ್‌ಗಳಲ್ಲೇ ಕೇವಲ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಆರಂಭಿಕ ಜೋಡಿ ಟ್ರ್ಯಾವಿಸ್‌ ಹೆಡ್‌-ಅಭಿಷೇಕ್‌ ಶರ್ಮಾ 8.4 ಓವರ್‌ಗಳಲ್ಲಿ 129 ರನ್‌ ಸೇರಿಸಿತು. ಅಭಿಷೇಕ್‌ 24 ಎಸೆತಕ್ಕೆ 45, ಹೆಡ್‌ 30 ಎಸೆತಕ್ಕೆ 76 ರನ್‌ ಗಳಿಸಿದರೆ, ಕ್ಲಾಸೆನ್‌ 30 ಎಸೆತಕ್ಕೆ ಔಟಾಗದೆ 65 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಮುಂಬೈ 243/5 (ರಿಕೆಲ್ಟನ್‌ 123*, ಜ್ಯಾಕ್ಸ್‌ 46, ಪ್ರಫುಲ್‌ 2-54), ಸನ್‌ರೈಸರ್ಸ್‌ 18.4 ಓವರ್‌ಗಳಲ್ಲಿ 249/4 (ಕ್ಲಾಸೆನ್‌ 65, ಹೆಡ್‌ 76, ಘಜಾನ್ಫರ್‌ 2-51)

04ನೇ ಗರಿಷ್ಠ

ಸನ್‌ರೈಸರ್ಸ್‌ 244 ರನ್‌ ಚೇಸ್‌ ಮಾಡಿ ಗೆದ್ದಿದ್ದು ಐಪಿಎಲ್‌ನಲ್ಲಿ 4ನೇ ಗರಿಷ್ಠ. ಇತ್ತೀಚೆಗೆ ಡೆಲ್ಲಿ ವಿರುದ್ಧ ಪಂಜಾಬ್‌ 265 ರನ್‌ ಯಶಸ್ವಿಯಾಗಿ ಚೇಸ್‌ ಮಾಡಿತ್ತು.

ರಿಕೆಲ್ಟನ್‌ 123: ಮುಂಬೈ ಪರ 19 ವರ್ಷಗಳಲ್ಲೇ ಗರಿಷ್ಠ ರನ್‌

ಮುಂಬೈ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ರ್‍ಯಾನ್‌ ರಿಕೆಲ್ಟನ್‌ 55 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೆ 123 ರನ್‌ ಗಳಿಸಿದ್ದಾರೆ. ಇದು ಐಪಿಎಲ್‌ ಇತಿಹಾಸದಲ್ಲೇ ಮುಂಬೈ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್‌ ಎನಿಸಿಕೊಂಡಿದೆ.

2008ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸನತ್‌ ಜಯಸೂರ್ಯ ಔಟಾಗದೆ 114 ರನ್‌ ಗಳಿಸಿದ್ದರು. ಇದು ಬರೋಬ್ಬರಿ 19 ವರ್ಷಗಳ ಕಾಲ ಮುಂಬೈ ಪರ ದಾಖಲೆಯಾಗಿಯೇ ಉಳಿದಿತ್ತು. ಅದನ್ನು ರಿಕೆಲ್ಟನ್‌ ಅಳಿಸಿ ಹಾಕಿದರು. ಇತ್ತೀಚೆಗಷ್ಟೇ ಪಂಜಾಬ್‌ ವಿರುದ್ಧ ಕ್ವಿಂಟನ್‌ ಡಿ ಕಾಕ್‌ ಔಟಾಗದೆ 112 ರನ್‌ ಗಳಿಸಿದ್ದು ತಂಡದ ಪರ 3ನೇ ಗರಿಷ್ಠ.

11ನೇ ಶತಕ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ 11 ಶತಕ ದಾಖಲಾಗಿದೆ. ಈ 11 ಬಾರಿಯೂ ಬ್ಯಾಟರ್‌ಗಳು ನಾಟ್‌ಔಟ್‌ ಆಗಿಯೇ ಉಳಿದಿರುವುದು ವಿಶೇಷ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಪಿಡೋ ಫ್ರೀ ರೈಡ್ ಕೊಟ್ಟ ವಿರಾಟ್ ಕೊಹ್ಲಿ ಅಭಿಮಾನಿ ಆಟೋ ಚಾಲಕನಿಗೆ RCB ಟಿಕೆಟ್ ಗಿಫ್ಟ್ ಕೊಟ್ಟ ಪ್ರಯಾಣಿಕ!
ಕೊಹ್ಲಿ ವಿರುದ್ಧ ಆಡಿದ್ದ ಕ್ರಿಕೆಟರ್ ಇದೀಗ ಗಾಯಗೊಂಡ ಎನ್ಗಿಡಿ ಪ್ರಾಣ ಉಳಿಸಿದ ಡೆಲ್ಲಿ ಪೊಲೀಸ್