IND vs ZIM 3rd T20I: ನಿನ್ನೆ ನಡೆದ ಭಾರತ-ಜಿಂಬಾಬ್ವೆ ಮೂರನೇ ಮ್ಯಾಚ್ ಗೆದ್ದಿದ್ದು ಯಾರು? ಸರಣಿ ಶ್ರೇಷ್ಠ ಪ್ರಶಸ್ತಿ ಯಾರ ಪಾಲು?

Naveen Kodase   | Kannada Prabha
Published : Jul 27, 2026, 11:15 AM IST
Team India

ಸಾರಾಂಶ

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ, ಸೋಲಿನ ಸರಪಳಿಯಿಂದ ಹೊರಬಂದಿದೆ. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಮತ್ತು ಮಯಾಂಕ್ ಯಾದವ್ ಅವರ ಬೌಲಿಂಗ್ ನೆರವಿನಿಂದ ಗೆದ್ದ ಟೀಂ ಇಂಡಿಯಾ, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನವನ್ನು ಅಲಂಕರಿಸಿದೆ.

ಹರಾರೆ: ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ಧ ಒಟ್ಟು 6 ಪಂದ್ಯಗಳಲ್ಲಿ ಪರಾಭವಗೊಂಡಿದ್ದ ಟೀಂ ಇಂಡಿಯಾ ಈಗ ಜಿಂಬಾಬ್ವೆಯನ್ನು ಸೋಲಿಸುವ ಮೂಲಕ ತುಸು ಸಂತಸಪಟ್ಟಿದೆ.

ಭಾನುವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಪಡೆ 35 ರನ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ಗೆ 192 ರನ್‌ ಗಳಿಸಿತು. ಅಭಿಷೇಕ್‌ ಶರ್ಮಾ(2) ಮತ್ತೆ ವೈಫಲ್ಯ ಅನುಭವಿಸಿದರು. ಸರಣಿಯಲ್ಲಿ 2ನೇ ಬಾರಿ ಸ್ಫೋಟಕ ಆಟವಾಡಿದ ವೈಭವ್‌ ಸೂರ್ಯವಂಶಿ 49 ಎಸೆತಕ್ಕೆ 81 ರನ್‌ ಸಿಡಿಸಿದರು. ಇಶಾನ್‌ ಕಿಶನ್‌ 29, ಶ್ರೇಯಸ್‌ 27, ರಿಂಕು ಸಿಂಗ್‌ 14 ಎಸೆತಕ್ಕೆ 25 ರನ್ ಸಿಡಿಸಿದರು.

ದೊಡ್ಡ ಮೊತ್ತ ಬೆನ್ನತ್ತಿದ ಜಿಂಬಾಬ್ವೆಗೆ ಭಾರತೀಯ ಬೌಲರ್‌ಗಳ ದಾಳಿ ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ತಂಡ 7 ವಿಕೆಟ್‌ ನಷ್ಟದಲ್ಲಿ 157 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ರ್‍ಯಾನ್ ಬರ್ಲ್‌(54) ಏಕಾಂಗಿ ಹೋರಾಟ ವ್ಯರ್ಥವಾಯಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಪಡೆದ ಮಯಾಂಕ್‌ ಯಾದವ್‌ ಒಟ್ಟು 4 ಓವರಲ್ಲಿ 29 ನೀಡಿ 3 ವಿಕೆಟ್‌ ಕಬಳಿಸಿದರು.

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿ ವೈಭವ್ ಪಾಲು:

ಇನ್ನು ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಚಚ್ಚಿದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದು ಈ ಸರಣಿಯಲ್ಲಿ ವೈಭವ್ ಬಾರಿಸಿದ ಎರಡನೇ ಅರ್ಧಶತಕ ಎನಿಸಿಕೊಂಡಿತು. ಇದಕ್ಕೂ ಮೊದಲು ಮೊದಲ ಏಕದಿನ ಪಂದ್ಯದಲ್ಲಿ ವೈಭವ್ 18 ಎಸೆತಗಳಲ್ಲಿ ಶತಕ ಚಚ್ಚಿದ್ದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸ್ಕೋರ್‌: ಭಾರತ 20 ಓವರಲ್ಲಿ 192/5 (ವೈಭವ್‌ 81, ಇಶಾನ್‌ 29, ಎವಾನ್ಸ್‌ 2-41), ಜಿಂಬಾಬ್ವೆ 20 ಓವರಲ್ಲಿ 157/7 (ಬರ್ಲ್‌ ಔಟಾಗದೆ 54, ಮಯಾಂಕ್‌ 3-29, ಯಶ್‌ 2-45)

ಪಂದ್ಯಶ್ರೇಷ್ಠ: ವೈಭವ್ । ಸರಣಿಶ್ರೇಷ್ಠ: ವೈಭವ್‌

6 ಕ್ಯಾಚ್‌ ಕೈಚೆಲ್ಲಿದ ಭಾರತದ ಫೀಲ್ಡರ್ಸ್‌!

ಈ ಪಂದ್ಯದಲ್ಲಿ ಭಾರತದ ಫೀಲ್ಡರ್‌ಗಳು 5 ಕ್ಯಾಚ್‌ ಕೈಚೆಲ್ಲಿದರು. ಇದು ತಂಡದ 2ನೇ ಗರಿಷ್ಠ. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ 6 ಕ್ಯಾಚ್‌ ಕೈಚೆಲ್ಲಿದ್ದು ಈಗಲೂ ಗರಿಷ್ಠ. ಉಳಿದಂತೆ 2022ರಲ್ಲಿ ಇಂಗ್ಲೆಂಡ್‌ ವಿರುದ್ಧ, 2025ರಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲೂ ತಲಾ 5 ಕ್ಯಾಚ್‌ ಕೈಚೆಲ್ಲಿದ್ದರು.

ಐಸಿಸಿ ಟಿ20 ರ್‍ಯಾಂಕಿಂಗ್‌: ಭಾರತ ಮತ್ತೆ ಅಗ್ರಸ್ಥಾನಿ

ನವದೆಹಲಿ: ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ ಮತ್ತೆ ಅಗ್ರಸ್ಥಾನಕ್ಕೇರಿದೆ. ಐರ್ಲೆಂಡ್‌, ಇಂಗ್ಲೆಂಡ್‌ ಸರಣಿ ಸೋಲಿನಿಂದ 1605 ದಿನಗಳ ಬಳಿಕ ಭಾರತ ಎರಡನೇ ಸ್ಥಾನಕ್ಕೆ ಕುಸಿದಿತ್ತು. ಆದರೆ ಇದೀಗ ತಂಡ ಗೆಲುವಿನ ಲಯಕ್ಕೆ ಮರಳ, ಅಗ್ರಸ್ಥಾನ ಪಡೆದುಕೊಂಡಿದೆ. ಮತ್ತೊಂದೆಡೆ ಮೊದಲ ಸ್ಥಾನದಲ್ಲಿದ್ದ ಇಂಗ್ಲೆಂಡ್‌ ಎರಡನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಟೀಂ ಇಂಡಿಯಾ 268 ಅಂಕ ಹೊಂದಿದ್ದು, ಇಂಗ್ಲೆಂಡ್‌ 260 ಅಂಕ ಹೊಂದಿದೆ. ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಇಶಾನ್‌ ಕಿಶನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಅಭಿಷೇಕ್‌ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ತಿಲಕ್‌ ವರ್ಮಾ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟಾಗಿ ಬೇರೆ ತಂಡ ಸೇರಿಕೊಂಡ ಆರ್‍‌ಸಿಬಿ ಸ್ಟಾರ್ ಯಶ್ ದಯಾಳ್..!
Vaibhav: ಗಂಭೀರ್, ಶ್ರೇಯಸ್‌ ಅಲ್ಲ, 'ಆ ಒಬ್ಬರಿಗೆ' ಧನ್ಯವಾದ ತಿಳಿಸಿದ ವೈಭವ್! ನಿಜವಾದ ಹೀರೊ ಹೆಸರು ಕೇಳಿದ್ರೆ ನೀವು ದಂಗಾಗ್ತೀರಾ!