ಮೊದಲ ಟಿ20: ಭಾರತ ವಿರುದ್ಧ ವಿಂಡೀಸ್‌ಗೆ 4 ರನ್ ಜಯ
ತಂಡ ಆಯ್ಕೆ ಎಡವಟ್ಟು, ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆತೆತ್ತ ಭಾರತ
ವಿಂಡೀಸ್ 149/6, ಪೋವೆಲ್ 48 ರನ್
ಸುಲಭ ಗುರಿ ಬೆನ್ನತ್ತಲು ಪರದಾಡಿದ ಭಾರತ 145/9
ವಿಂಡೀಸ್‌ಗೆ 1-0 ಮುನ್ನಡೆ
ತರೌಬ(ಆ.04): ವಿಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ‘ಐಪಿಎಲ್ ಸ್ಟಾರ್’ಗಳನ್ನು ಒಳಗೊಂಡ ಭಾರತ ತಂಡ 4 ರನ್ ಸೋಲು ಕಂಡಿದೆ. ತಂಡದ ಆಯ್ಕೆಯಲ್ಲಿ ಎಡವಟ್ಟು ಹಾಗೂ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಪ್ರಮುಖ ಕಾರಣವಾಗಿ ಕಂಡುಬಂತು. 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆಯಿತು.
ಮೊದಲು ಬ್ಯಾಟ್ ಮಾಡಲು ಇಳಿದ ವಿಂಡೀಸ್ ಪವರ್-ಪ್ಲೇ ಮುಕ್ತಾಯಕ್ಕೆ 2 ವಿಕೆಟ್‌ಗೆ 54 ರನ್ ಸಿಡಿಸಿದರೂ, 10 ಓವರ್ ಮುಕ್ತಾಯಕ್ಕೆ 3 ವಿಕೆಟ್‌ಗೆ 69 ರನ್ ಗಳಿಸಿತು. ನಾಯಕ ರೋವ್ಮನ್ ಪೋವೆಲ್(48)ರ ಹೋರಾಟದ ನೆರವಿನಿಂದ ಕೊನೆಯ 10 ಓವರಲ್ಲಿ 80 ರನ್ ಕಲೆಹಾಕಿದ ವಿಂಡೀಸ್ 20 ಓವರಲ್ಲಿ 6 ವಿಕೆಟ್‌ಗೆ 149 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
undefined
ಆರಂಭಿಕರಾದ ಶುಭ್‌ಮನ್ ಗಿಲ್(03), ಇಶಾನ್ ಕಿಶನ್(06) ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಸೂರ್ಯಕುಮಾರ್(21) ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪದಾರ್ಪಣಾ ಪಂದ್ಯದಲ್ಲೇ ಆಕರ್ಷಕ ಆಟವಾಡಿದ ತಿಲಕ್ ವರ್ಮಾ 22 ಎಸೆತದಲ್ಲಿ 39 ರನ್ ಸಿಡಿಸಿದರು. ಆದರೆ 16ನೇ ಓವರಲ್ಲಿ ಹಾರ್ದಿಕ್, ಸ್ಯಾಮ್ಸನ್ ಇಬ್ಬರೂ ಔಟಾಗಿದ್ದು ಪಂದ್ಯ ವಿಂಡೀಸ್‌ನತ್ತ ವಾಲುವಂತೆ ಮಾಡಿತು. ಕೊನೆಯಲ್ಲಿ ಅಶ್‌ರ್‍ದೀಪ್ 2 ಬೌಂಡರಿ ಬಾರಿಸಿ ಸಾಹಸ ಮೆರೆಯುವ ಯತ್ನ ನಡೆಸಿದರೂ, ಗೆಲುವಿಗೆ ಸಾಕಾಗಲಿಲ್ಲ. ಭಾರತ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು.
West Indies hold their nerve and go 1-0 up in the five-match T20I series 👏 | 📝: https://t.co/NfcMJQlC3w pic.twitter.com/sMBCfpSh8W
— ICC (@ICC)West Indies vs India: ಭಾರತದ ಬೌಲಿಂಗ್‌ಗೆ ಪರದಾಡಿದ ವಿಂಡೀಸ್ ಬ್ಯಾಟಿಂಗ್!
ಆಯ್ಕೆ ಎಡವಟ್ಟು: 3ನೇ ಏಕದಿನ ಪಂದ್ಯಕ್ಕೆ ಉಪಯೋಗಿಸಿದ್ದ ಪಿಚ್ ಈ ಪಂದ್ಯಕ್ಕೂ ಬಳಕೆಯಾಯಿತು. ನಿಧಾನಗತಿಯ ಪಿಚ್‌ನಲ್ಲಿ ಭಾರತ ಕೇವಲ 7 ತಜ್ಞ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದು, ಅಚ್ಚರಿ ಮೂಡಿಸಿತು. ಹೆಚ್ಚುವರಿ ಸ್ಪಿನ್ನರ್ ಆಡಿಸುವ ಪ್ರಯೋಗವೂ ಕೈಹಿಡಿಯಲಿಲ್ಲ.
ಸ್ಕೋರ್: ವಿಂಡೀಸ್ 20 ಓವರಲ್ಲಿ 149/6 (ಪೋವೆಲ್ 48, ಪೂರನ್ 41, ಅಶ್‌ರ್‍ದೀಪ್ 2-31)
ಭಾರತ 20 ಓವರಲ್ಲಿ 145/9 (ತಿಲಕ್ 39, ಸೂರ್ಯ 21, ಹೋಲ್ಡರ್ 2-19)
ಪಂದ್ಯಶ್ರೇಷ್ಠ: ಜೇಸನ್ ಹೋಲ್ಡರ್
ಟರ್ನಿಂಗ್ ಪಾಯಿಂಟ್
ಭಾರತಕ್ಕೆ 30 ಎಸೆತದಲ್ಲಿ ಗೆಲ್ಲಲು ಕೇವಲ 37 ರನ್ ಬೇಕಿತ್ತು. ಆದರೆ 16ನೇ ಓವರ್ ಪಂದ್ಯದ ಗತಿ ಬದಲಿಸಿತು. ಹಾರ್ದಿಕ್ ಹಾಗೂ ಸ್ಯಾಮ್ಸನ್ ಇಬ್ಬರೂ ಔಟಾದರು. ಇದು ತಂಡದ ಸೋಲಿಗೆ ಪ್ರಮುಖ ಕಾರಣವೆನಿಸಿತು.
ಇಂಟ್ರೆಸ್ಟಿಂಗ್ ಅಂಕಿ-ಅಂಶ:
200 ಪಂದ್ಯ: ಭಾರತ 200 ಟಿ20 ಪಂದ್ಯಗಳನ್ನಾಡಿದ 2ನೇ ತಂಡ ಎನಿಸಿತು. ಪಾಕಿಸ್ತಾನ(223 ಪಂದ್ಯ) ಈ ಮೈಲಿಗಲ್ಲು ತಲುಪಿದ ಮೊದಲ ತಂಡ.
02ನೇ ಬೌಲರ್: ಒಂದೇ ಪ್ರವಾಸದಲ್ಲಿ ಮೂರೂ ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 2ನೇ ಭಾರತೀಯ ಮುಕೇಶ್. ನಟರಾಜನ್ ಮೊದಲಿಗ.