2ನೇ ಟೆಸ್ಟ್‌: ಬಾಂಗ್ಲಾ ವಿರುದ್ಧ ವಿಂಡೀಸ್‌ ಮೇಲುಗೈ

By Suvarna NewsFirst Published Feb 13, 2021, 9:45 AM IST
Highlights

ಬಾಂಗ್ಲಾದೇಶ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎರಡನೇ ದಿನದಾಟದಂತ್ಯದ ವೇಳೆಗೆ ಮೇಲುಗೈ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಢಾಕಾ(ಫೆ.13): ಜೋಶ್ವಾ ಡಾ ಸಿಲ್ವಾ(92) ಹಾಗೂ ಆಲ್ಜಾರಿ ಜೋಸೆಫ್‌ (82) ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್‌ 409 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. 

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್‌ ಆರಂಭಿಸಿರುವ ಬಾಂಗ್ಲಾದೇಶ 2ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 105 ರನ್‌ ಗಳಿಸಿತು. ಫಾಲೋ ಆನ್‌ನಿಂದ ಬಚಾವಾಗಲು ಬಾಂಗ್ಲಾದೇಶ ಇನ್ನೂ 105 ರನ್‌ ಬಾರಿಸಬೇಕಿದೆ. ಬಾಂಗ್ಲಾ ಇನ್ನೂ 304 ರನ್‌ ಹಿನ್ನಡೆಯಲ್ಲಿದ್ದು, ವಿಂಡೀಸ್‌ ದೊಡ್ಡ ಮುನ್ನಡೆಯ ನಿರೀಕ್ಷೆಯಲ್ಲಿದೆ. ಸದ್ಯ ಬಾಂಗ್ಲಾದೇಶ ಪರ ಮುಷ್ಫಿಕುರ್ ರಹೀಮ್‌(27) ಹಾಗೂ ಮೊಹಮ್ಮದ್ ಮಿಥುನ್‌(6) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 

A good day for West Indies as they have restricted Bangladesh to 105/4 at stumps on day two 🏏

The hosts still trail by 304 runs. ➡️ https://t.co/Es33PQRdna pic.twitter.com/MONCHmHNyD

— ICC (@ICC)

ಚೆನ್ನೈ ಪಿಚ್‌ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ ಜೋಫ್ರಾ ಆರ್ಚರ್‌..!

ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ 3 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ 1-0 ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಟೆಸ್ಟ್ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್‌ ಮಾಡುವ ಲೆಕ್ಕಾಚಾರದಲ್ಲಿದೆ.

ಸ್ಕೋರ್‌: 
ವಿಂಡೀಸ್‌ 409/10
ಬಾಂಗ್ಲಾದೇಶ 105/4
 

click me!