2ನೇ ಚೆನ್ನೈ ಟೆಸ್ಟ್‌: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

By Suvarna News  |  First Published Feb 13, 2021, 9:16 AM IST

ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಚೆನ್ನೈ(ಫೆ.13): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ 3 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ನದೀಮ್‌ ಹಾಗೂ ವಾಷಿಂಗ್ಟನ್ ಸುಂದರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಮೊಹಮ್ಮದ್ ಸಿರಾಜ್‌, ಅಕ್ಷರ್ ಪಟೇಲ್‌ ಹಾಗೂ ಕುಲ್ದೀಪ್ ಯಾದವ್ ತಂಡ ಕೂಡಿಕೊಂಡಿದ್ದಾರೆ. ಅಕ್ಷರ್‌ ಪಟೇಲ್‌ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಲ್ರೌಂಡರ್‌ ಪಟೇಲ್‌ಗೆ ಕ್ಯಾಪ್‌ ನೀಡುವ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಸ್ವಾಗತಿಸಿದ್ದಾರೆ.

Tap to resize

Latest Videos

undefined

ಇಂಗ್ಲೆಂಡ್ ಎದುರು ಎರಡನೇ ಟೆಸ್ಟ್‌ ಗೆಲ್ಲಬೇಕಿದ್ದರೆ ಟೀಂ ಇಂಡಿಯಾದಿಂದ 3 ಬದಲಾವಣೆ ಅನಿವಾರ್ಯ..!

Toss Update: have won the toss & elected to bat against England in the 2nd Test at Chepauk! pic.twitter.com/9q28PbUxZ7

— BCCI (@BCCI)

Welcome to Test cricket, ! 👏👏

Congratulations to the all-rounder who receives his Test cap from Captain 🔝👌 pic.twitter.com/WIugeXY15D

— BCCI (@BCCI)

ಇನ್ನು ಇಂಗ್ಲೆಂಡ್‌ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿದ್ದು, ಮೋಯಿನ್ ಅಲಿ, ಫೋಕ್ಸ್‌, ಬ್ರಾಡ್ ಹಾಗೂ ಓಲಿ ಸ್ಟೋನ್‌ ತಂಡ ಕೂಡಿಕೊಂಡಿದ್ದಾರೆ. 

ತಂಡಗಳು ಹೀಗಿವೆ ನೋಡಿ
ಭಾರತ:

2nd Test. India XI: R Sharma, S Gill, C Pujara, V Kohli, A Rahane, R Pant, A Patel, R Ashwin, K Yadav, I Sharma, M Siraj https://t.co/Hr7Zk2BVcc

— BCCI (@BCCI)

ಆಸ್ಟ್ರೇಲಿಯಾ:

 

2nd Test. England XI: R Burns, D Sibley, D Lawrence, J Root, B Stokes, O Pope, B Foakes, M Ali, J Leach, S Broad, O Stone https://t.co/Hr7Zk2BVcc

— BCCI (@BCCI)


 

click me!