ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವಿಂಡೀಸ್‌

Suvarna News   | Asianet News
Published : Feb 15, 2021, 08:37 AM IST
ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವಿಂಡೀಸ್‌

ಸಾರಾಂಶ

ಬಾಂಗ್ಲಾದೇಶವನ್ನು ಅದರದ್ದೇ ನೆಲದಲ್ಲಿ ಬಗ್ಗುಬಡಿಯುವಲ್ಲಿ ಕೆರಿಬಿಯನ್ ಪಡೆ ಯಶಸ್ವಿಯಾಗಿದೆ. 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ವೆಸ್ಟ್‌ ಇಂಡೀಸ್‌ ತಂಡ ಕ್ಲೀನ್ ಸ್ವೀಪ್‌ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಢಾಕಾ(ಫೆ.15): ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ 17 ರನ್‌ಗಳ ರೋಚಕ ಗೆಲುವು ಸಾಧಿಸಿ 2-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದೆ. 

ಪಂದ್ಯದ 4ನೇ ದಿನವಾದ ಭಾನುವಾರ 2ನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ 117 ರನ್‌ಗೆ ಆಲೌಟ್‌ ಆಗಿ ಬಾಂಗ್ಲಾಗೆ 231 ರನ್‌ ಗುರಿ ನೀಡಿತು. ಮೊದಲ ವಿಕೆಟ್‌ಗೆ 59 ರನ್‌ ಜೊತೆಯಾಟ ಪಡೆದು ಉತ್ತಮ ಆರಂಭ ಪಡೆದ ಬಾಂಗ್ಲಾ ದಿಢೀರ್‌ ಕುಸಿತ ಕಂಡು 213 ರನ್‌ಗಳಿಗೆ ಆಲೌಟ್‌ ಆಯಿತು. ಕೊನೆಯಲ್ಲಿ ಮೆಹದಿ ಹಸನ್‌(31) ಹೋರಾಟ ಬಾಂಗ್ಲಾಗೆ ಗೆಲುವು ತಂದುಕೊಡಲಿಲ್ಲ. ಬಾಂಗ್ಲಾ ಪರ ಕಾರ್ನ್‌ವಾಲ್‌ 4, ವಾರಿಕ್ಕನ್‌ ಹಾಗೂ ಬ್ರಾಥ್‌ವೇಟ್‌ ತಲಾ 3 ವಿಕೆಟ್‌ ಕಬಳಿಸಿದರು.

INDvENG: 2ನೇ ದಿನವೂ ಮೇಲುಗೈ, ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ!

ಬಾಂಗ್ಲಾದೇಶ ವಿರುದ್ದ ಮೊದಲ ಟೆಸ್ಟ್‌ ಪಂದ್ಯವನ್ನು 3 ವಿಕೆಟ್‌ಗಳಿಂದ ಜಯಿಸಿದ್ದ  ವೆಸ್ಟ್‌ ಇಂಡೀಸ್‌ ತಂಡ ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ 17 ರನ್‌ಗಳ ಜಯ ದಾಖಲಿಸಿದೆ.

ಸ್ಕೋರ್‌: 
ವಿಂಡೀಸ್‌ 409 ಹಾಗೂ 117 
ಬಾಂಗ್ಲಾ 296 ಹಾಗೂ 213
(* ಎರಡು ಪಂದ್ಯಗಳ ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ವೆಸ್ಟ್ ಇಂಡೀಸ್‌)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್