ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದೆ. ಮೊದಲ ದಿನ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ದಿನ ಬೌಲಿಂಗ್‌ಲ್ಲಿ ಮಿಂಚಿತು. ಸೆಕೆಂಡ್ ಡೇ ಹೈಲೈಟ್ಸ್ ಇಲ್ಲಿದೆ.
ಚೆನ್ನೈ(ಫೆ.14): 2ನೇ ಟೆಸ್ಟ್ ಪಂದ್ಯ 2ನೇ ದಿನಕ್ಕೆ ಕುತೂಹಲ ಘಟ್ಟ ತಲುಪಿದೆ. ಇದಕ್ಕೆ ಕಾರಣ ಟೀಂ ಇಂಡಿಯಾದ ದಿಟ್ಟ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ. 2ನೇ ದಿನ ಇಂಗ್ಲೆಂಡ್ ತಂಡವನ್ನು 134 ರನ್‌ಗಳಿಗೆ ಆಲೌಟ್ ಮಾಡಿದ ಭಾರತ 2ನೇ ಇನ್ನಿಂಗ್ಸ್ ಆರಂಭಿಸಿದೆ. 2ನೇ ದಿನದಾಟದಲ್ಲಿ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 54 ರನ್ ಸಿಡಿಸಿತು. ಈ ಮೂಲಕ 249 ರನ್ ಮುನ್ನಡೆ ಪಡೆದುಕೊಂಡಿದೆ.
ಹಿಟ್‌ಮ್ಯಾನ್ ರೋಹಿತ್ ಸೆಂಚುರಿ; ಜೈ ಹೋ ಎಂದ ಕ್ರಿಕೆಟ್ ಫ್ಯಾನ್ಸ್
undefined
2ನೇ ದಿನದಾಟದ ಆರಂಭದಲ್ಲಿ ಟೀಂ ಇಂಡಿಯಾ 329 ರನ್‌ಗೆ ಆಲೌಟ್ ಆಯಿತು. ಮೊಯಿನ್ ಆಲಿ 4 ವಿಕೆಟ್ ಕಬಳಿಸಿ ಮಿಂಚಿದರು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿದ ಇಂಗ್ಲೆಂಡ್ ಟೀಂ ಇಂಡಿಯಾ ಸ್ಪಿನ್ ದಾಳಿಗೆ ತತ್ತರಿಸಿತು. ಆರ್ ಅಶ್ವಿನ್ 4 ವಿಕೆಟ್ ಕಬಳಿಸಿದರು. ಪರಿಣಾಮ ಇಂಗ್ಲೆಂಡ್ 134 ರನ್‌ಗಳಿಗೆ ಆಲೌಟ್ ಆಯಿತು.
195 ರನ್ ಮುನ್ನಡೆ ಪಡೆದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ಆರಂಭಿಸಿತು. ಆದರೆ ಶುಭಮನ್ ಗಿಲ್ 14 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ ಅಜೇಯ 25 ರನ್ ಹಾಗೂ ಚೇತೇಶ್ವರ ಪೂಜಾರ 7 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 249 ರನ್ ಮುನ್ನಡೆ ಪಡೆದುಕೊಂಡಿರುವ ಟೀಂ ಇಂಡಿಯಾ ತೃತೀಯ ದಿನದಾಟದಲ್ಲಿ ಉತ್ತಮ ಮೊತ್ತ ಪೇರಿಸಲಿದೆ. ಇಷ್ಟೇ ಅಲ್ಲ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಲು ಸಜ್ಜಾಗಿದೆ.