ಬುಮ್ರಾಗಿಂತ ಸಚಿನ್ ವಿಕೆಟ್ ಜಾಸ್ತಿ, ಧೋನಿಗೆ ಏಷ್ಯಾದ ಹೊರಗೆ ಶತಕವೇ ನಾಸ್ತಿ; ಕ್ರಿಕೆಟ್ ಲೋಕದ 4 ವಿಚಿತ್ರ ರೆಕಾರ್ಡ್ಸ!

Published : Nov 18, 2026, 05:48 PM IST
Cricket True Facts

ಸಾರಾಂಶ

ಬುಮ್ರಾಗಿಂತ ಸಚಿನ್ ವಿಕೆಟ್ ಹೆಚ್ಚಿರುವುದರಿಂದ ಹಿಡಿದು ಧೋನಿಗೆ ಏಷ್ಯಾದ ಹೊರಗೆ ಶತಕವಿಲ್ಲದಿರುವವರೆಗೆ... ಸಚಿನ್, ಧೋನಿ, ಮಿಲ್ಲರ್ ಮತ್ತು ಅಲಿಸ್ಟರ್ ಕುಕ್ ಕ್ರಿಕೆಟ್ ವೃತ್ತಿಜೀವನದ 4 ಅಪರೂಪದ ಹಾಗೂ ವಿಚಿತ್ರ ದಾಖಲೆಗಳ ಪೂರ್ಣ ವಿವರ ಇಲ್ಲಿದೆ.

ಕ್ರಿಕೆಟ್ ಎಂದರೆ ದಾಖಲೆಗಳ ಕಣಜ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರ ರನ್ ಮತ್ತು ವಿಕೆಟ್‌ಗಳ ಲೆಕ್ಕಾಚಾರ ಬಾಯಲ್ಲಿರುತ್ತದೆ. ಆದರೆ, ಅಪ್ಪಟ ಕ್ರಿಕೆಟ್ ಪ್ರೇಮಿಗಳಿಗೂ ತಿಳಿಯದ ಕೆಲವು ವಿಚಿತ್ರ ಮತ್ತು ಅಪರೂಪದ ದಾಖಲೆಗಳು ಸಚಿನ್, ಧೋನಿ, ಕುಕ್ ಮತ್ತು ಮಿಲ್ಲರ್ ಹೆಸರಿನಲ್ಲಿವೆ. ನಿಜವಾಗಿಯೂ ಆ ರೆಕಾರ್ಡ್ಸ್ ಮಾತ್ರ ದಿಗ್ಬ್ರಮೆಗೊಳಿಸಲಿವೆ. ಅದರಲ್ಲಿ ಎರಡೂ ಮಾತಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಬುಮ್ರಾಗಿಂತ ಹೆಚ್ಚು ಏಕದಿನ ವಿಕೆಟ್ ಪಡೆದ ಸಚಿನ!

'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 154 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಏಕದಿನ ಮಾದರಿಯಲ್ಲಿ ಪಡೆದಿರುವುದು 151 ವಿಕೆಟ್‌ಗಳನ್ನು ಮಾತ್ರ. ಬ್ಯಾಟರ್ ಆಗಿದ್ದ ಸಚಿನ್, ಬುಮ್ರಾಗಿಂತ ಹೆಚ್ಚು ಏಕದಿನ ವಿಕೆಟ್ ಪಡೆದಿರುವುದು ಅಚ್ಚರಿಯ ಸಂಗತಿಯಾಗಿದೆ.

ಏಷ್ಯಾದ ಹೊರಗೆ ಒಂದೇ ಒಂದು ಶತಕ ಸಿಡಿಸದ ಧೋನಿ!

ವಿಶ್ವದ ಶ್ರೇಷ್ಠ ಫಿನಿಶರ್ ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 16 ಶತಕಗಳನ್ನು ಬಾರಿಸಿದ್ದಾರೆ (ಇದರಲ್ಲಿ ಭಾರತದಿಂದ ಹೊರಗೆ 3 ಶತಕಗಳಿವೆ). ಆದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಏಷ್ಯಾ ಖಂಡದಿಂದ ಹೊರಗೆ ಧೋನಿ ಒಂದೇ ಒಂದು ಅಂತಾರಾಷ್ಟ್ರೀಯ ಶತಕವನ್ನೂ ಗಳಿಸಿಲ್ಲ. ಅವರ ಎಲ್ಲಾ ಶತಕಗಳು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೇ ದಾಖಲಾಗಿವೆ.

ದಿಗ್ಗಜ ಬ್ಯಾಟರ್ ಆದರೂ ಕುಕ್ ವಿಶ್ವಕಪ್ ಆಡಲೇ ಇಲ್ಲ!

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಅಲಿಸ್ಟೇರ್ ಕುಕ್, 92 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 69 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಇಷ್ಟೆಲ್ಲಾ ಅನುಭವವಿದ್ದರೂ, ಕುಕ್ ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯೂ ಏಕದಿನ ವಿಶ್ವಕಪ್ (ODI World Cup) ಟೂರ್ನಿಯಲ್ಲಿ ಆಡಲಿಲ್ಲ. 2015ರ ವಿಶ್ವಕಪ್‌ಗೆ ಕೆಲವೇ ತಿಂಗಳುಗಳ ಮೊದಲು ಅವರನ್ನು ತಂಡದಿಂದ ಕೈಬಿಡಲಾಗಿತ್ತು.

300ಕ್ಕೂ ಹೆಚ್ಚು ಪಂದ್ಯ ಆಡಿದರೂ ಮಿಲ್ಲರ್ ಟೆಸ್ಟ್ ಆಡಲೇ ಇಲ್ಲ!

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ 180ಕ್ಕೂ ಹೆಚ್ಚು ಏಕದಿನ ಮತ್ತು 140ಕ್ಕೂ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಮಿಂಚಿದ ಮಿಲ್ಲರ್, ತಮ್ಮ ದೇಶದ ಪರ ಒಂದೇ ಒಂದು ಟೆಸ್ಟ್ ಪಂದ್ಯವನ್ನೂ ಆಡದೆಯೇ ವೃತ್ತಿಜೀವನ ಮುಂದುವರಿಸಿದ್ದಾರೆ. ಕ್ರಿಕೆಟ್ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಪೈಪೋಟಿಯಲ್ಲ, ಅದು ಇಂತಹ ಅನಿರೀಕ್ಷಿತ ಮತ್ತು ಅಚ್ಚರಿಯ ಅಂಕಿಅಂಶಗಳ ಸುಂದರ ಸಂಗಮ ಎಂಬುದಕ್ಕೆ ಈ 4 ದಾಖಲೆಗಳೇ ಸಾಕ್ಷಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2008ರಲ್ಲಿ ಧೋನಿ ಜೊತೆ ಮೊದಲ ಐಪಿಎಲ್‌ ಆಡಿದ್ದ CSK ಆಟಗಾರರು ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಆಸಕ್ತಿದಾಯಕ ಮಾಹಿತಿ!
'ಫೈನಲ್‌ನಲ್ಲಿ ನಾವು ಮತ್ತೆ ಮುಖಾಮುಖಿಯಾಗ್ತೇವೆ ಅನ್ನೋದನ್ನ ಪಾಕ್‌ ಮರೆತಿತ್ತು' ಅಂಡರ್-19 ಏಷ್ಯಾಕಪ್ ಗೆಲುವಿನ ಸಂಭ್ರಮ ಸಮರ್ಥಿಸಿದ ಮೋಹಿತ್‌ ಉಲ್ವಾ