ಶುಭ್‌ಮನ್ ಗಿಲ್, ಇಶಾನ್ ಕಿಶನ್ ಇಬ್ಬರೂ ಅಲ್ಲ, ಈತನೇ ಏಕದಿನ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂದ ಟೀಂ ಇಂಡಿಯಾ ಲೆಜೆಂಡ್..!

Published : Oct 05, 2026, 12:01 PM IST
Shubman Gill-Virat Kohli

ಸಾರಾಂಶ

2027ರ ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿಯಾದರೆ, ಅವರ 3ನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಸೂಕ್ತ ಆಯ್ಕೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ತಿಲಕ್ ಅವರ ವೈವಿಧ್ಯಮಯ ಬ್ಯಾಟಿಂಗ್ ಸಾಮರ್ಥ್ಯವನ್ನು ಕೊಂಡಾಡಿರುವ ಅವರು, ಕೊಹ್ಲಿ ಉತ್ತರಾಧಿಕಾರಿಯಾಗುವ ಎಲ್ಲಾ ಲಕ್ಷಣಗಳು ಇವರಲ್ಲಿವೆ ಎಂದಿದ್ದಾರೆ. ಜೊತೆಗೆ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಪ್ರಬುದ್ಧ ಆಟವನ್ನೂ ಜಾಫರ್ ಮೆಚ್ಚಿದ್ದಾರೆ.

Virat Kohli ODI Successor: 2027ರ ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿಯಾದರೆ, ಟೀಂ ಇಂಡಿಯಾದ 3ನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಓಪನರ್ ವಾಸಿಂ ಜಾಫರ್ ಹೇಳಿದ್ದಾರೆ. ಬೇರೆ ಬೇರೆ ಕ್ರಮಾಂಕಗಳಲ್ಲಿ ಬ್ಯಾಟ್ ಬೀಸುವ ತಿಲಕ್ ಸಾಮರ್ಥ್ಯವನ್ನು ಜಾಫರ್ ಕೊಂಡಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ 3, 4 ಮತ್ತು 5ನೇ ಕ್ರಮಾಂಕಗಳಲ್ಲಿ ಆಡಿರುವ ತಿಲಕ್, ಟಿ20ಯಲ್ಲೂ ಹಲವು ರೋಲ್‌ಗಳಲ್ಲಿ ಮಿಂಚಿದ್ದಾರೆ.

ಇತ್ತೀಚಿಗಿನ ವರ್ಷಗಳಲ್ಲಿ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಇಶಾನ್ ಕಿಶನ್‌ ಕೂಡಾ ಭಾರತ ಟಿ20 ತಂಡದ ಪರ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಇಶಾನ್ ಕಿಶನ್ ಹಾಗೂ ಶುಭ್‌ಮನ್ ಗಿಲ್ ಮುಂದಿನ ಭಾರತದ ಸೂಪರ್ ಸ್ಟಾರ್‌ಗಳಾಗಬಹುದು ಎನ್ನುವ ಚರ್ಚೆ ಜೋರಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಾಸೀಂ ಜಾಫರ್, ತಿಲಕ್ ವರ್ಮಾ ಪರ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ್ದಾರೆ. ಇದಷ್ಟೇ ಅಲ್ಲ ತಿಲಕ್ ವರ್ಮಾ ಯಾಕೆ ಕೊಹ್ಲಿಯ ಉತ್ತರಾಧಿಕಾರಿಯಾಗಬಲ್ಲರು ಎನ್ನುವುದಕ್ಕೆ ಸಮರ್ಥನೆಯನ್ನು ನೀಡಿದ್ದಾರೆ.

ತಿಲಕ್ ವರ್ಮಾ ಪರ ಜಾಫರ್ ಬ್ಯಾಟಿಂಗ್:

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಜಾಫರ್, "ತಿಲಕ್ ಅವರ ವೈವಿಧ್ಯಮಯ ಬ್ಯಾಟಿಂಗ್ ನೋಡುವುದೇ ಒಂದು ಖುಷಿ. ಈ ಹಿಂದೆ ಟಿ20ಯಲ್ಲಿ 3ನೇ ಕ್ರಮಾಂಕದಲ್ಲಿ ಆಡಿ ಸೆಂಚುರಿ ಸಿಡಿಸಿದ್ದರು. ಈಗ 5 ಮತ್ತು 6ನೇ ಕ್ರಮಾಂಕಕ್ಕೂ ಅದ್ಭುತವಾಗಿ ಹೊಂದಿಕೊಂಡಿದ್ದಾರೆ. ಇದೊಂದು ಶ್ರೇಷ್ಠ ಗುಣ," ಎಂದಿದ್ದಾರೆ. ದುಲೀಪ್ ಟ್ರೋಫಿ ಹಾಗೂ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿನ ತಿಲಕ್ ದಾಖಲೆಗಳನ್ನು ನೋಡಿದರೆ, ಅವರು ಎಲ್ಲಾ ಮಾದರಿಯಲ್ಲೂ ಮಿಂಚಬಲ್ಲರು ಎಂಬುದು ಸಾಬೀತಾಗುತ್ತದೆ ಎಂದು ಜಾಫರ್ ವಿವರಿಸಿದ್ದಾರೆ.

ವಿರಾಟ್ ಮತ್ತು ರೋಹಿತ್ ಆಟದಿಂದ ಹಿಂದೆ ಸರಿದಾಗ, ರೋಹಿತ್ ಜಾಗಕ್ಕೆ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಬರಲಿದ್ದಾರೆ. ಹಾಗೆಯೇ ಕೊಹ್ಲಿ ಜಾಗವನ್ನು ಎಡಗೈ ಬ್ಯಾಟರ್ ತಿಲಕ್ ವರ್ಮಾ ತುಂಬಲಿದ್ದಾರೆ ಎಂಬುದು ಜಾಫರ್ ಲೆಕ್ಕಾಚಾರ. ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ 55ರ ಸರಾಸರಿ ಹೊಂದಿರುವ ತಿಲಕ್, ಮೂರೂ ಮಾದರಿಯ ಕ್ರಿಕೆಟ್‌ಗೆ ಸುಲಭವಾಗಿ ಫಿಟ್ ಆಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತದ ಪರ 4 ಏಕದಿನ ಪಂದ್ಯಗಳನ್ನಾಡಿರುವ ತಿಲಕ್ 68 ರನ್ ಗಳಿಸಿದ್ದಾರೆ.

2027ರ ಏಕದಿನ ವಿಶ್ವಕಪ್ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಲಿದೆ ಎಂದು ವಿರಾಟ್ ಕೊಹ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕೊಹ್ಲಿ, ವಿಶ್ವಕಪ್ ಗೆಲ್ಲುವುದೇ ತಮ್ಮ ಗುರಿ ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದರು. 3ನೇ ಕ್ರಮಾಂಕಕ್ಕೆ ತಿಲಕ್ ಮಾತ್ರವಲ್ಲದೆ, ಋತುರಾಜ್ ಗಾಯಕ್ವಾಡ್ ಮತ್ತು ಓಪನರ್ ಶುಭ್‌ಮನ್ ಗಿಲ್ ಹೆಸರೂ ಕೂಡ ಚರ್ಚೆಯಲ್ಲಿದೆ.

ಅಭಿಷೇಕ್ ಶರ್ಮಾ ಆಟಕ್ಕೂ ಜಾಫರ್ ಮೆಚ್ಚುಗೆ

ಇದೇ ವೇಳೆ, ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಶೈಲಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆಯೂ ವಾಸಿಂ ಜಾಫರ್ ಮಾತನಾಡಿದ್ದಾರೆ. ಎದುರಿಸಿದ ಮೊದಲ ಬಾಲ್‌ನಲ್ಲೇ ಸಿಕ್ಸರ್ ಬಾರಿಸಲು ಹೋಗುವ ಬದಲು, ಈಗ ಅಭಿಷೇಕ್ ಸ್ವಲ್ಪ ತಾಳ್ಮೆ ಹಾಗೂ ಪ್ರಬುದ್ಧತೆಯಿಂದ ಕ್ರೀಸ್‌ನಲ್ಲಿ ನಿಂತು ಆಡುತ್ತಿದ್ದಾರೆ ಎಂದು ಜಾಫರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್‌ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾಗಿದ್ದರು. ಇದಾದ ಬಳಿಕ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ಭಾರತ ಕ್ರಿಕೆಟ್ ತಂಡವು ಸತತ ಎರಡನೇ ಬಾರಿಗೆ ಚಿನ್ನದ ಪದಕ ಜಯಿಸವಲ್ಲಿ ಯಶಸ್ವಿಯಾಗಿತ್ತು. ಭಾರತದ ಗೆಲುವಿನಲ್ಲಿ ಅಭಿಷೇಕ್ ಶರ್ಮಾ ಹಾಗೂ ತಿಲಕ್ ವರ್ಮಾ ಪ್ರಮುಖ ಪಾತ್ರ ವಹಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್ ತಂಡದಲ್ಲಿ ಕೋಲಾಹಲ, ನಾಯಕ ಸಲ್ಮಾನ್ ತಲೆದಂಡ?
6, 6, 6, 6, 6 ಮತ್ತೆ ಆರ್ಭಟಿಸಿದ RCB ಹಳೇ ಹುಲಿ; ಮತ್ತೆ ತಂಡಕ್ಕೆ ಬನ್ನಿ ಎಂದ ಬೆಂಗಳೂರು ಫ್ಯಾನ್ಸ್