RCB video:ಮ್ಯೂಸಿಕ್ ವಿಡಿಯೋದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಕೊಹ್ಲಿ ಎಬಿಡಿ!

By Suvarna NewsFirst Published Nov 23, 2021, 8:24 PM IST
Highlights
  • ಭಾರಿ ಸದ್ದು ಮಾಡುತ್ತಿದೆ ಆರ್‌ಸಿಬಿ ಮ್ಯೂಸಿಕ್ ವಿಡಿಯೋ
  • ಚಹಾಲ್ ಪತ್ನಿ ಧನಶ್ರಿ ವರ್ಮಾ ನಿರ್ದೇಶನದ ವಿಶೇಷ ವಿಡಿಯೋ
  • ಕೊಹ್ಲಿ, ಎಬಿಡಿ ಸೇರಿ ಆರ್‌ಸಿಬಿ ಕ್ರಿಕೆಟಿಗರು ವಿಡಿಯೋದಲ್ಲಿ ಡ್ಯಾನ್ಸ್

ಬೆಂಗಳೂರು(ನ.23):  ಮುಂಬರುವ ಐಪಿಎಲ್ ಟೂರ್ನಿಗೆ(IPL) ಬಿಸಿಸಿಐ ಜೊತೆಗೆ ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಮುಂದಿನ ತಿಂಗಳು ನಡೆಯಲಿರುವ ಮೆಘಾ ಹರಾಜಿನಲ್ಲಿ(IPL Auction) ಯಾವ ಕ್ರಿಕೆಟಿಗರನ್ನು ಆಯ್ಕೆ ಮಾಡಬೇಕು, ಯಾರನ್ನು ರಿಟೈನ್ ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿದೆ. ಇದರ ನಡುವೆ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ಮ್ಯೂಸಿಕ್ ವಿಡಿಯೋ(RCB Music Video) ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಬೆಂಗಳೂರು ತಂಡದ ಕ್ರಿಕೆಟಿಗರು ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋದಲ್ಲಿ ಮತ್ತೊಂದು ವಿಶೇಷವಿದೆ. ಆರ್‌ಸಿಬಿ(RCB) ಕ್ರಿಕೆಟಿಗ ಯಜುವೇಂದ್ರ ಚಹಾಲ್ ಪತ್ನಿ ಧನಶ್ರಿ ವರ್ಮಾ(Dhanashree Verma) ನಿರ್ದೇಶನ ಮಾಡಿದ ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಬಿಟ್ಟುಕೊಡುವುದಿಲ್ಲ ಕೊನೆಯವರೆಗೂ ಹೋರಾಟ, ಹಿಂದೆ ಸರಿಯಬೇಡಿ ಅನ್ನೋ ಈ ಹಾಡು ತಂಡದ ಕ್ರೀಡಾಸ್ಪೂರ್ತಿಯನ್ನು ಎತ್ತಿ ಹಿಡಿಯುವ ಮ್ಯೂಸಿಕ್ ಆಲ್ಬಮ್ ಆಗಿದೆ.

AB de Villiers Retires: ನಾನು ಎಂದೆಂದಿಗೂ ಆರ್‌ಸಿಬಿಗ: ಭಾವನಾತ್ಮಕ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್‌

ವಿರಾಟ್ ಕೊಹ್ಲಿ(Virat Kohli), ಎಬಿ ಡಿವಿಲಿಯರ್ಸ್(AB de Villiers) ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇವರ ಜೊತೆಗೆ ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್ ಸೇರಿದಂತ ಕೆಲ ಆರ್‌ಸಿಬಿ ಕ್ರಿಕೆಟಿಗರು ಈ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಇನ್ಸ್‌ಸ್ಟಾಗ್ರಾಂ, ಟ್ವಿಟರ್ ಖಾತೆಯಲ್ಲಿ ಈ ಮ್ಯೂಸಿಕ್ ವಿಡಿಯೋ ಹಂಚಿಕೊಂಡಿದ್ದಾರೆ. ಕೊಹ್ಲಿ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ 10ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. 

Team India:ಕ್ರಿಕೆಟಿಗರಿಗೆ ಬೀಫ್, ಪೋರ್ಕ್ ನಿಷೇಧ,ವಿವಾದಕ್ಕೆ ಕಾರಣವಾಯ್ತು BCCI ಹಲಾಲ್ ಮಾಂಸ ಕಡ್ಡಾಯ!

ಮ್ಯೂಸಿಕ್ ವಿಡಿಯೋ ಕುರಿತು ಮಾತನಾಡಿದ ನಿರ್ದೇಶಕಿ, ಚಹಾಲ್ ಪತ್ನಿ ಧನಶ್ರಿ ವರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ದಿಗ್ಗಜ ಕ್ರಿಕೆಟಿಗರಿಗೆ ನಿರ್ದೇಶನ ಮಾಡುವುದೇ ನನ್ನ ಸೌಭಾಗ್ಯ. ಆರ್‌ಸಿಬಿ ಕುಟುಂಬ ಸದಸ್ಯರು ಉತ್ತಮವಾಗಿ ಸಹಕರಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಅಭಿಮಾನಿಗಳು ತಂಡವನ್ನು ಕೈಬಿಟ್ಟಿಲ್ಲ. ಇದೇ ಥೀಮ್ ಆಧಾರವಾಗಿಟ್ಟುಕೊಂಡು ಕೊನೆಯ ಕ್ಷಣದ ವರೆಗೆ ಹೋರಾಟ, ಹಿಂದೆ ಸರಿಯದೇ ಹೋರಾಟ ಅನ್ನೋ ಹಾಡನ್ನು ಕಂಪೋಸ್ ಮಾಡಲಾಗಿದೆ ಎಂದು ಧನಶ್ರಿ ವರ್ಮಾ ಹೇಳಿದ್ದಾರೆ.

 

Never Give Up. Don’t Back Down. Keep Hustling!

It was fun being a part of this music video to celebrate the spirit of the Royal Challengers Bangalore. pic.twitter.com/5geepBel01

— Virat Kohli (@imVkohli)

ಈ ವಿಡಿಯೋದಲ್ಲಿ ಆರ್‌ಸಿಬಿ ತಂಡದ ಹಲವರು ಕಾಣಿಸಿಕೊಂಡಿದ್ದಾರೆ. ಆದರೆ ಮುಂದಿನ ಹರಾಜಿನ ಬಳಿಕ ಇದೇ ಆಟಗಾರರು ಆರ್‌ಸಿಬಿ ತಂಡದಲ್ಲಿ ಇರುತ್ತಾರೆ ಅನ್ನೋದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಇನ್ನು ಎಬಿ ಡಿವಿಲಿಯರ್ಸ್ ಈಗಾಗಲೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಎಬಿಡಿ ಲಭ್ಯರಿಲ್ಲ. 

ಐಪಿಎಲ್ 2022ರ ಟೂರ್ನಿಗೆ ಮುನ್ನ ಅತೀ ದೊಡ್ಡ ಆಟಹಾರರ ಹರಾಜು ನಡೆಯಲಿದೆ. ಮುಂದಿನ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ಐಪಿಎಲ್ ಆಕ್ಷನ್ ನಡೆಯಲಿದೆ. 8 ತಂಡಗಳ ಜೊತೆ ಹೊಸ ಎರಡು ತಂಡಗಳು ಸೇರಿಕೊಳ್ಳುತ್ತಿದೆ. ಹೀಗಾಗಿ ಹರಾಜಿನಲ್ಲಿ ಬಹುತೇಕ ಆಟಗಾರರು ಅದಲು ಬದಲಾಗಲಿದ್ದಾರೆ. 8 ತಂಡಗಳಿಗೆ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಹೊಸ ಎರಡು ತಂಡಕ್ಕೆ ಆರಂಭಿಕ 3 ಖರೀದಿ ಮಾಡಲು ಅವಕಾಶ ನೀಡಲಾಗಿದೆ. 

IPL 2022: RCB ತಂಡದಲ್ಲಿ ಮಹತ್ವದ ಬದಲಾವಣೆ, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ನೇಮಕ!

ಐಪಿಎಲ್ 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಬಹುತೇಕ ಬದಲಾಗಲಿದೆ. ಕಾರಣ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸಿದ್ದಾರೆ. ಇತ್ತ ಎಬಿ ಡಿವಿಲಿಯರ್ಸ್ ವಿದಾಯ ಹೇಳಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡದಲ್ಲಿ ಮಹತ್ತರ ಬದಲಾವಣೆ ಕಾಣಲಿದೆ. ಹೊಸ ಮುಖಗಳು ತಂಡ ಸೇರಿಕೊಳ್ಳಲಿದ್ದಾರೆ.  ಇನ್ನು ಕಳೆದ ಎಲ್ಲಾ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಕೋರ್ ಟೀಮ್ ಉಳಿಸಿಕೊಂಡಿದೆ. ರಿಟೈನ್ ರೈಟ್ ಟು ಮ್ಯಾಚ್ ಸೇರಿದಂತೆ ಹಲವು ಅವಕಾಶಗಳಿಂದ ಆಟಗಾರರನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿ ಕೇವಲ ನಾಲ್ವರು ಆಟಗಾರರನ್ನು ಮಾತ್ರ ರಿಟೈನ್ ಅವಕಾಶವಿರುವದರಿಂದ ಮುಂಬೈ ತಂಡದಲ್ಲೂ ಮಹತ್ತರ ಬದಲಾವಣೆ ಕಾಣಲಿದೆ.

click me!