
ಬೆಂಗಳೂರು: 2025ಕ್ಕೆ ಗುಡ್ ಬೈ ಹೇಳಿ 2026ಕ್ಕೆ ಸ್ವಾಗತ ಕೋರಲು ಇಡೀ ಜಗತ್ತು ಸಜ್ಜಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಮಾದರಿಯಲ್ಲಿ ಈ ಇಬ್ಬರು ಆಟಗಾರರು 2025ರಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಇಬ್ಬರು ಕ್ರಿಕೆಟಿಗರು 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಧೂಳೇಬ್ಬಿಸಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲೂ ರೋ-ಕೋ ಜೋಡಿ ಮಿಂಚಿತ್ತು. ಈ ಇಬ್ಬರು ಕ್ರಿಕೆಟಿಗರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮುಂಬರುವ 2026ರಲ್ಲಿ ಈ ಜೋಡಿ ಬರೋಬ್ಬರಿ 18 ಏಕದಿನ ಪಂದ್ಯಗಳನ್ನು ಆಡಲಿದ್ದಾರೆ. 2026ರಲ್ಲಿ ಭಾರತ ಏಕದಿನ ಕ್ರಿಕೆಟ್‌ನ ವೇಳಾಪಟ್ಟಿ ಹೀಗಿದೆ ನೋಡಿ.
ಹೊಸ ವರ್ಷದಲ್ಲಿ ಟೀಂ ಇಂಡಿಯಾ ಜನವರಿ 11ರಿಂದ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್ ಎದುರು ಜನವರಿ 11, 14 ಹಾಗೂ 18ರಂದು ಕ್ರಮವಾಗಿ ವಡೋದರಾ, ರಾಜ್‌ಕೋಟ್ ಹಾಗೂ ಇಂದೋರ್‌ನಲ್ಲಿ ಏಕದಿನ ಸರಣಿಯನ್ನು ಆಡಲಿದೆ.
2. ಭಾರತ-ಆಫ್ಘಾನಿಸ್ತಾನ: 3 ಪಂದ್ಯಗಳ ಏಕದಿನ ಸರಣಿ
ಆಫ್ಘಾನಿಸ್ತಾನ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಉಭಯ ದೇಶಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಟೂರ್ನಿಯ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
3. ಇಂಗ್ಲೆಂಡ್-ಭಾರತ: 3 ಪಂದ್ಯಗಳ ಏಕದಿನ ಸರಣಿ
ಭಾರತ ತಂಡವು ತವರಿನಲ್ಲಿ ಎರಡು ಏಕದಿನ ಸರಣಿ ಆಡಿದ ಬಳಿಕ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈ 14ಕ್ಕೆ ಬರ್ಮಿಂಗ್‌ಹ್ಯಾಮ್, ಜುಲೈ 16ಕ್ಕೆ ಕಾರ್ಡಿಫ್ ಹಾಗೂ ಜುಲೈ 19ರಂದು ಲಂಡನ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
4. ಭಾರತ-ವೆಸ್ಟ್ ಇಂಡೀಸ್: 3 ಪಂದ್ಯಗಳ ಏಕದಿನ ಸರಣಿ
ಕೆಲ ತಿಂಗಳ ಹಿಂದಷ್ಟೇ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ತಂಡವು ಭಾರತ ಪ್ರವಾಸ ಕೈಗೊಂಡಿತ್ತು. ಇದೀಗ 2026ರಲ್ಲಿ ವಿಂಡೀಸ್ ತಂಡವು 3 ಪಂದ್ಯಗಳ ಏಕದಿನ ಸರಣಿಯಾಡಲು ಭಾರತ ಪ್ರವಾಸ ಮಾಡಲಿದೆ. ಈ ಸರಣಿಯು ಮುಂಬರುವ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಸರಣಿಗೆ ದಿನಾಂಕ ಅಧಿಕೃತವಾಗಿಲ್ಲ.
5. ನ್ಯೂಜಿಲೆಂಡ್-ಭಾರತ: 3 ಪಂದ್ಯಗಳ ಏಕದಿನ ಸರಣಿ
ಹೊಸ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಇನ್ನು ಮುಂಬರುವ ಅಕ್ಟೋಬರ್‌ನಲ್ಲಿ ಭಾರತ ತಂಡವು ಕಿವೀಸ್ ಪ್ರವಾಸ ಮಾಡಲಿದ್ದು, ಮೂರು ಪಂದ್ಯಗಳ ಸರಣಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.
6. ಭಾರತ-ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿ
ಇನ್ನು ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಎರಡು ದೇಶಗಳ ಪಾಲಿಗೆ 2027ರ ಏಕದಿನ ವಿಶ್ವಕಪ್ ಟೂರ್ನಿಯ ನಿಟ್ಟಿನಲ್ಲಿ ಪ್ರಮುಖ ತಯಾರಿ ಎನಿಸಲಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಏಕದಿನ ಸರಣಿಗಳ ನಡುವೆ ಸಾಕಷ್ಟು ವಿಶ್ರಾಂತಿ ಸಿಗಲಿದ್ದು, ಎಲ್ಲಾ ಸರಣಿಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಸರಣಿಗಳಲ್ಲಿ ರೋ-ಕೋ ಜೋಡಿ 18 ಏಕದಿನ ಪಂದ್ಯಗಳನ್ನು ಆಡಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.