ಆಸ್ಟ್ರೇಲಿಯಾದಲ್ಲಿ ನಿಲ್ಲದ ಕೊಹ್ಲಿಯ ಪರದಾಟ! ವಿರಾಟ್ ಫೇಲ್ಯೂರ್ ಸೀಕ್ರೇಟ್ ಬಿಚ್ಚಿಟ್ಟ ಆಸೀಸ್ ವೇಗಿ

By Naveen Kodase  |  First Published Jan 5, 2025, 10:57 AM IST

ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಪದೇ ಪದೇ ಆಫ್ ಸ್ಟಂಪ್‌ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಕೊಹ್ಲಿಯನ್ನು ಔಟ್ ಮಾಡಲು ಸರಳ ಯೋಜನೆ ರೂಪಿಸಿದ್ದಾಗಿ ಬೋಲೆಂಡ್ ಹೇಳಿದ್ದಾರೆ.


ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್‌ ಕೊಹ್ಲಿ 9 ಇನ್ನಿಂಗ್ಸ್‌ಗಳಲ್ಲಿ 8ನೇ ಬಾರಿಗೆ ಆಫ್‌ ಸ್ಟಂಪ್‌ನಿಂದ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ವಿಕೆಟ್‌ ಕಳೆದುಕೊಂಡಿದ್ದಾರೆ. ಶನಿವಾರ 5ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ, ಬೋಲೆಂಡ್‌ರ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್‌ ನೀಡಿದರು. ತಮ್ಮ ಶಾಟ್‌ ಆಯ್ಕೆ ಬಗ್ಗೆ ಸಿಟ್ಟು ವ್ಯಕ್ತಪಡಿಸಿದ ಕೊಹ್ಲಿ ಚೀರುತ್ತ, ಬ್ಯಾಟ್‌ನಿಂದ ತಮ್ಮ ಕಾಲಿಗೆ ಹೊಡೆದುಕೊಂಡು ಹೊರನಡೆದರು.

ಕೊಹ್ಲಿ ಪದೇ ಪದೇ ಇದೇ ತಪ್ಪು ಮಾಡುತ್ತಿರುವುದಕ್ಕೆ ಮಾಜಿ ಕ್ರಿಕೆಟಿಗರು, ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.

Virat Kohli - 9 Inns | 190 Runs | 23.75 Avg
Khawaja - 9 Inns | 143 Runs | 17.88 Avg

Why no videos about Khawaja dismissal in the Series? pic.twitter.com/Pmgwh84DfU

— CricketGully (@thecricketgully)

Specially designed bat for Virat Kohli to counter inswingers and outswingers 😅 But, you all know, Virat Kohli will still edge it towards the slips 😶‍🌫️ pic.twitter.com/IUQco3ydTG

— Richard Kettleborough (@RichKettle07)

Tap to resize

Latest Videos

ಕೊಹ್ಲಿಯನ್ನು ಔಟ್‌ ಮಾಡಲು ಸರಳ ಯೋಜನೆ: ಬೋಲೆಂಡ್‌!

ವಿರಾಟ್‌ ಕೊಹ್ಲಿಯನ್ನು ಔಟ್‌ ಮಾಡಲು ನಾವು ಸರಳ ಯೋಜನೆ ರೂಪಿಸಿದ್ದು, ಅದು ಪ್ರತಿ ಬಾರಿಯೂ ಕೈಹಿಡಿಯುತ್ತಿದೆ ಎಂದು ಆಸ್ಟ್ರೇಲಿಯಾದ ವೇಗಿ ಸ್ಕಾಟ್‌ ಬೋಲೆಂಡ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ದಿಗ್ಗಜ ಆಟಗಾರನ ವಿರುದ್ಧ ರೂಪಿಸಿರುವ ರಣತಂತ್ರವನ್ನು ಬಹಿರಂಗಪಡಿಸುವ ಧೈರ್ಯವನ್ನು ಮೆಚ್ಚಬೇಕು ಎಂದು ಹಲವರು ಅಭಿಪ್ರಾಯಿಸಿದ್ದಾರೆ. 

ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಸರಣಿ ಸೋತ ಭಾರತ: WTC ಫೈನಲ್‌ನಿಂದಲೂ ಔಟ್

‘ಕೊಹ್ಲಿ ತಮ್ಮ ಇನ್ನಿಂಗ್ಸ್‌ನ ಆರಂಭದಲ್ಲಿ ಆಫ್‌ ಸ್ಟಂಪ್‌ನಿಂದ ಹೊರ ಹೋಗುವ ಚೆಂಡನ್ನು ಆಡುವುದಿಲ್ಲ. ಆದರೆ ಕ್ರೀಸ್‌ನಲ್ಲಿ ಕೆಲ ಸಮಯ ಕಳೆದ ಬಳಿಕ, ಅವರು ಆಫ್‌ ಸ್ಟಂಪ್‌ನಿಂದ ಆಚೆ ಬೀಳುವ ಎಸೆತಗಳನ್ನು ಹೊಡೆಯಲು ಯತ್ನಿಸುತ್ತಾರೆ. ನಾವು ಅದರ ಲಾಭ ಪಡೆಯುತ್ತಿದ್ದೇವೆ’ ಎಂದು ಬೋಲೆಂಡ್‌ ಹೇಳಿದ್ದಾರೆ.

ಇಂಗ್ಲೆಂಡ್‌ ಏಕದಿನಕ್ಕೆ ಕೊಹ್ಲಿ ರೋಹಿತ್‌, ಬೂಮ್ರಾ ಗೈರು?

ನವದೆಹಲಿ: ಮುಂಬರುವ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯಿಂದ ಭಾರತದ ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಹಾಗೂ ರೋಹಿತ್‌ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರೋಹಿತ್ ಶರ್ಮಾ ತಲೆದಂಡವಾದ್ರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈತನೇ ಟೀಂ ಇಂಡಿಯಾ ಕ್ಯಾಪ್ಟನ್!

ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿ ಜ.7ರಂದು ಕೊನೆಗೊಳ್ಳಲಿದೆ. ಬಳಿಕ ಫೆ.19ರಿಂದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭಗೊಳ್ಳಲಿದೆ. ಆದರೆ ಕಾರ್ಯದೊತ್ತಡ ತಗ್ಗಿಸಿ, ಚಾಂಪಿಯನ್ಸ್‌ ಟ್ರೋಫಿಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಗೊತ್ತಾಗಿದೆ. 

ಚಾಂಪಿಯನ್ಸ್‌ ಟ್ರೋಫಿ ಬಳಿಕ ಐಪಿಎಲ್‌ ಆರಂಭಗೊಳ್ಳಲಿರುವ ಕಾರಣ ಆಟಗಾರರಿಗೆ ವಿಶ್ರಾಂತಿ ಸಿಗುವುದಿಲ್ಲ. ಹೀಗಾಗಿ ಇಂಗ್ಲೆಂಡ್‌ ಸರಣಿಯಲ್ಲಿ ಅವರನ್ನು ಆಡಿಸದೆ, ಯುವ ಕ್ರಿಕೆಟಿಗರಿಗೆ ಮಣೆ ಹಾಕುವ ಸಾಧ್ಯತೆಯಿದೆ.
 

click me!