2027ರ ವಿಶ್ವಕಪ್‌ಗೂ ಮುನ್ನ ಭಾರತ ಎಷ್ಟು ಏಕದಿನ ಮ್ಯಾಚ್ ಆಡುತ್ತೆ? 86 ಶತಕ ಬಾರಿಸಿರುವ ಕೊಹ್ಲಿ, ಸಚಿನ್‌ರ 100 ಶತಕ ಮುರಿತಾರಾ?

Published : Sep 28, 2026, 06:25 PM IST
Virat Kohli Sachin Tendulkar

ಸಾರಾಂಶ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 86ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಪಂದ್ಯಗಳ ಲೆಕ್ಕಾಚಾರದೊಂದಿಗೆ, ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರಾ ಎಂಬ ಕುತೂಹಲ ಮೂಡಿದೆ.

ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 86ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ 100 ಸೆಂಚುರಿ ದಾಖಲೆ ಮುರೀತಾರಾ ಅಥವಾ ಇಲ್ಲವೇ? ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಎಷ್ಟು ಒನ್‌ ಡೇ ಮ್ಯಾಚ್ ಆಡಲಿದೆ. ಯಾವೆಲ್ಲಾ ತಂಡಗಳ ಮೇಲೆ ಭಾರತ ಏಕದಿನ ಸರಣಿಯನ್ನು ಆಡಲಿದೆ ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಸಚಿನ್ ದಾಖಲೆ ಸರಿಗಟ್ಟಲು ಕೊಹ್ಲಿಗೆ ಬೇಕಿದೆ 14 ಶತಕ:

ಸದ್ಯ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರವ 100 ಶತಕಗಳ ದಾಖಲೆಯನ್ನು ಸರಿಗಟ್ಟಲು ಇನ್ನು 14 ಶತಕಗಳನ್ನು ಸಿಡಿಸಬೇಕಿದೆ. ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಬಿಸಿಸಿಐ ವೇಳಾಪಟ್ಟಿಯ ವರದಿಯ ಪ್ರಕಾರ ನೋಡುವುದಾದರೇ, ಬಹುಪಕ್ಷೀಯ ಟೂರ್ನಿ ಹೊರತುಪಡಿಸಿಯೇ 2026ರಲ್ಲಿ 14 ಏಕದಿನ ಪಂದ್ಯಗಳನ್ನಾಡಲಿದೆ.

ಸದ್ಯ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರು ತವರಿನಲ್ಲಿ ಇನ್ನೆರಡು ಏಕದಿನ ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ನವೆಂಬರ್ 04ರಿಂದ 15ರವರೆಗೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಐದು ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಇದಾದ ನಂತರ ತವರಿನಲ್ಲಿ ಡಿಸೆಂಬರ್ 13ರಿಂದ ಡಿಸೆಂಬರ್ 19ರ ತನಕ ಶ್ರೀಲಂಕಾ ಎದುರು ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದಾದ ನಂತರ ಜನವರಿ 01ರಿಂದ ಜನವರಿ 09ರ ತನಕ ತವರಿನಲ್ಲಿ ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇನ್ನು 2027ರ ಏಕದಿನ ಸರಣಿಗೂ ಮುನ್ನ ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾಕಪ್ ಟೂರ್ನಿ ಆಯೋಜನೆಗೊಂಡರೆ, ಕನಿಷ್ಠವೆಂದರೂ ನಾಲ್ಕರಿಂದ ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಅಲ್ಲಿಗೆ 2027ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಏನಿಲ್ಲವೆಂದರೂ 18 ಪಂದ್ಯಗಳನ್ನು ಆಡಲಿದೆ. ಇನ್ನು 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು 11 ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ.

ಕೊಹ್ಲಿ 29 ಪಂದ್ಯ ಆಡುವ ಸಾಧ್ಯತೆ:

ಹೀಗಾಗಿ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಟೂರ್ನಿಯೂ ಸೇರಿದಂತೆ 22ರಿಂದ 29 ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ. ಈ ಪೈಕಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆ ಮುರಿಯಲು ಇನ್ನೂ 15 ಶತಕ ಸಿಡಿಸಬೇಕಿದೆ. ಸದ್ಯ ವಿರಾಟ್ ಕೊಹ್ಲಿ 90 ಶತಕಗಳನ್ನು ಅನಾಯಾಸವಾಗಿ ಪೂರೈಸಬಹುದು, ಆದರೆ 100 ಶತಕಗಳ ದಾಖಲೆ ಬ್ರೇಕ್ ಮಾಡುವುದು ಸದ್ಯಕ್ಕಂತೂ ಕಷ್ಟಸಾಧ್ಯ. ಇನ್ನು ಇದೇ ಫಾರ್ಮ್ ಕೊಹ್ಲಿ ಮುಂದುವರೆಸಿದ್ದೇ ಆದರೇ, ಹೊಸ ಇತಿಹಾಸ ನಿರ್ಮಾಣವಾದರೂ ಅಚ್ಚರಿಯಿಲ್ಲ. ಯಾಕೆಂದರೆ ಕೊಹ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಏನಂತೀರಾ?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

9 ಭಾರತೀಯರು ಸೇರಿ 13 ಪ್ಲೇಯರ್ಸ್ ರೀಟೈನ್ ಮಾಡಿಕೊಂಡ ಹಾಲಿ ಚಾಂಪಿಯನ್ ಆರ್‌ಸಿಬಿ..! ಇಲ್ಲಿದೆ ಕಂಪ್ಲೀಟ್ ಲಿಸ್ಟ್‌
Cricket; 3 ಪಂದ್ಯ, 6 ಭರ್ಜರಿ ಶತಕ; ಬೌಲರ್‌ಗಳಿಗೆ ಇದು ಬ್ಲ್ಯಾಕ್ ಸಂಡೇ! ಒಂದೇ ದಿನದಲ್ಲಿ 26 ಸಿಕ್ಸರ್, 73 ಬೌಂಡರಿ!