9 ಭಾರತೀಯರು ಸೇರಿ 13 ಪ್ಲೇಯರ್ಸ್ ರೀಟೈನ್ ಮಾಡಿಕೊಂಡ ಹಾಲಿ ಚಾಂಪಿಯನ್ ಆರ್‌ಸಿಬಿ..! ಇಲ್ಲಿದೆ ಕಂಪ್ಲೀಟ್ ಲಿಸ್ಟ್‌

Published : Sep 28, 2026, 05:46 PM IST
WPL RCB

ಸಾರಾಂಶ

2027ರ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು 13 ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದೆ. ಆದರೆ, ಪ್ರಮುಖ ಸ್ಟಾರ್ ಆಟಗಾರ್ತಿಯರನ್ನು ತಂಡದಿಂದ ರಿಲೀಸ್ ಮಾಡಿ ಅಚ್ಚರಿ ಮೂಡಿಸಿದೆ.

ಬೆಂಗಳೂರು: ಬಹುನಿರೀಕ್ಷಿತ 2027ನೇ ಸಾಲಿನ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮುಂಬರುವ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ. ಐದನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಅಳೆದು-ತೂಗಿ ಆಟಗಾರ್ತಿಯರ ರೀಟೈನ್ ಮಾಡಿಕೊಂಡಿದ್ದು, ಕೆಲವು ಆಟಗಾರ್ತಿಯರನ್ನು ರಿಲೀಸ್ ಮಾಡಿದೆ.

ಹೌದು, ಆಟಗಾರ್ತಿಯರ ರೀಟೈನ್ ಹಾಗೂ ರಿಲೀಸ್ ಮಾಡಲು ಇಂದು ಕೊನೆಯ ದಿನವಾಗಿತ್ತು. ಇದೀಗ ಹಾಲಿ ಚಾಂಪಿಯನ್ ಆರ್‌ಸಿಬಿ ಫ್ರಾಂಚೈಸಿಯು, ಡಿ. ಹೇಮಲತಾ, ಗೌತಮಿ ನಾಯ್ಕ್, ಗ್ರೇಸ್ ಹ್ಯಾರಿಸ್ ಹಾಗೂ ಲಿನ್ಸೆ ಸ್ಮಿತ್ ಅವರಂತಹ ತಾರಾ ಆಟಗಾರ್ತಿಯರನ್ನು ತಂಡದಿಂದ ರಿಲೀಸ್ ಮಾಡಿದೆ. ಆಸೀಸ್ ಮೂಲದ ಗ್ರೇಸ್ ಹ್ಯಾರಿಸ್ ಅವರನ್ನು ರಿಲೀಸ್ ಮಾಡಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಪೆರ್ರಿಯನ್ನು ರೀಟೈನ್ ಮಾಡಿಕೊಂಡ ಆರ್‌ಸಿಬಿ

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಒಂಬತ್ತು ಭಾರತೀಯ ಆಟಗಾರ್ತಿಯರೂ ಸೇರಿದಂತೆ ಒಟ್ಟು 13 ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದೆ. ಈ ಪೈಕಿ ಕಳೆದ ಸೀಸನ್‌ನಲ್ಲಿ ವೈಯುಕ್ತಿಕ ಕಾರಣ ನೀಡಿ ತಂಡದಿಂದ ಹೊರಗುಳಿದಿದ್ದ ಎಲೈಸಿ ಪೆರ್ರಿ ಮುಂಬರುವ ಸೀಸನ್‌ಗೆ ತಾವು ಲಭ್ಯವಿರುವುದಾಗಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಪೆರ್ರಿಯನ್ನು ರೀಟೈನ್ ಮಾಡಿಕೊಳ್ಳುವಲ್ಲಿ ಆರ್‌ಸಿಬಿ ಫ್ರಾಂಚೈಸಿ ಯಶಸ್ವಿಯಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಯಶಸ್ವಿ ನಾಯಕ ಸ್ಮೃತಿ ಮಂಧನಾ, ಶ್ರೇಯಾಂಕ ಪಾಟೀಲ್, ರಿಚಾ ಘೋಷ್, ಪೂಜಾ ವಸ್ತ್ರಾಕರ್, ಅರುಂದತಿ ರೆಡ್ಡಿ ಅವರಂತಹ ಸ್ಟಾರ್‌ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದೆ. ಇನ್ನು ಎಲೈಸಿ ಪೆರ್ರಿ, ಜಾರ್ಜಿಯಾ ವೋಲ್, ಲೌರೆನ್ ಬೆಲ್ ಹಾಗೂ ನಾದಿನಿ ಡಿ ಕ್ಲಾರ್ಕ್‌ ಹೀಗೆ ನಾಲ್ವರು ವಿದೇಶಿ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿದೆ.

ಆರ್‌ಸಿಬಿ ರೀಟೈನ್ ಮಾಡಿಕೊಂಡ ಆಟಗಾರ್ತಿಯರ ಕಂಪ್ಲೀಟ್ ಲಿಸ್ಟ್:

ಸ್ಮೃತಿ ಮಂಧನಾ, ಶ್ರೇಯಾಂಕಾ ಪಾಟೀಲ್, ಸಯಾಲಿ ಸತ್ಗೆರೆ, ರಿಚಾ ಘೋಷ್, ರಾಧಾ ಯಾದವ್, ಪ್ರೇಮಾ ರಾವತ್, ಪ್ರತ್ಯೋಷಾ ಕುಮಾರ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಎಲೈಸಿ ಪೆರ್ರಿ, ಜಾರ್ಜಿಯಾ ವೋಲ್, ಲೌರೆನ್ ಬೆಲ್, ನಾದಿನಿ ಡಿ ಕ್ಲಾರ್ಕ್.

ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರ್ತಿಯರ ವಿವರ:

ಡಿ. ಹೇಮಲತಾ, ಗೌತಮಿ ನಾಯ್ಕ್, ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; 3 ಪಂದ್ಯ, 6 ಭರ್ಜರಿ ಶತಕ; ಬೌಲರ್‌ಗಳಿಗೆ ಇದು ಬ್ಲ್ಯಾಕ್ ಸಂಡೇ! ಒಂದೇ ದಿನದಲ್ಲಿ 26 ಸಿಕ್ಸರ್, 73 ಬೌಂಡರಿ!
ಸಚಿನ್ Vs ಕೊಹ್ಲಿ: 15,000 ರನ್‌ಗಳ ಹಿಂದಿರುವ ಈ 'ರಹಸ್ಯ' ಅಂಕಿ-ಅಂಶ ನಿಮಗೆ ಗೊತ್ತೇ?