ನನ್ ಕೈಯಿಂದ ಆಗಲ್ಲಪ್ಪಾ..ಒಂದೇ ವರ್ಷದಲ್ಲಿ ಕೊಹ್ಲಿ ಫಾಲೋ ಮಾಡೋದು ಕೈಬಿಟ್ಟ ಸಂಜು ಸ್ಯಾಮ್ಸನ್

Published : Jul 28, 2026, 05:11 PM IST
Sanju Samson Makes Honest Confession

ಸಾರಾಂಶ

ವಿರಾಟ್ ಕೊಹ್ಲಿಯಿಂದ ಸಲಹೆ ಪಡೆದ ಸಂಜು ಸ್ಯಾಮ್ಸನ್ ಫಾಲೋ ಮಾಡಲು ಆರಂಭಿಸಿದ್ದರು.ಆದರೆ ಒಂದೇ ವರ್ಷಕ್ಕೆ ನನ್ನ ಕೈಯಿಂದ ಆಗಲ್ಲ ಎಂದು ಫಾಲೋ ಮಾಡೇದನ್ನೇ ಬಿಟ್ಟಿದ್ದಾರೆ. ರೋಚಕ ಮಾಹಿತಿ ಬಿಟ್ಟಿಟ್ಟ ಸ್ಯಾಮ್ಸನ್.

ಮುಂಬೈ (ಜು.28) ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಲು ತಂಡದಿಂದ ಹೊರಬಂದ ಸಂಜು ಸ್ಯಾಮ್ಸನ್ ಮತ್ತೆ ಕಡೆಗಣಿಸಲಾಗಿದೆ. ಇದರ ನಡುವೆ ಸಂಜು ಸ್ಯಾಮ್ಸನ್ ತಮ್ಮ ಕರಿಯರ್‌ನಲ್ಲಿ ಎದುರಿಸಿದ ಹಿನ್ನಡೆಗಳು, ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಯ ಸಲಹೆ ಪಾಲಿಸಲು ಸಾಧ್ಯವಾಗದೇ ಪರದಾಡಿದ ರೋಚಕ ಘಟನೆಯನ್ನು ಹೇಳಿಕೊಂಡಿದ್ದಾರೆ. ಒಂದು ವರ್ಷ ಹೇಗೋ ಸಹಿಸಿಕೊಂಡೆ, ಮತ್ತೆ ಆಗಲಿಲ್ಲ. ಹಾಗಾಗಿ ಕೊಹ್ಲಿ ಫಾಲೋ ಮಾಡೋದೇ ಬಿಟ್ಟೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಏನಿದು ಸಂಜು ಸ್ಯಾಮ್ಸನ್ ಹೇಳಿದ ರೋಚಕ ಘಟನೆ

ಕ್ರಿಕೆಟ್ ಫಿಟ್ನೆಸ್ ಕುರಿತು ಮಾತನಾಡಿದ ಸಂಜು ಸ್ಯಾಮ್ಸನ್ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಜಿಯೋ ಸ್ಟಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, ಟೀಂ ಇಂಡಿಯಾದಲ್ಲಿ ಫಿಟ್ನೆಸ್ ಕುರಿತು ಮಾತನಾಡುವಾಗ ವಿರಾಟ್ ಕೊಹ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೊಹ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ನಾನು ಪಕ್ಕದಲ್ಲಿ ವರ್ಕೌಟ್ ಮಾಡುತ್ತಿದ್ದೆ. ಕೊಹ್ಲಿ ಉತ್ಸಾಹ, ಡಿಡಿಕೇಶನ್, ಎನರ್ಜಿ ಇತರ ಯಾರಿಗೂ ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಕಠಿಣ ವರ್ಕೌಟ್ ಮೂಲಕ ಉತ್ತಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಕೊಹ್ಲಿಯಿಂದ ಪ್ರೇರಣೆ ಪಡೆದು ನಾನು ಫಿಟ್ನೆಸ್ ಹಾಗೂ ಆಹಾರ ಡಯೆಟ್ ಕುರಿತು ಸಲಹೆ ಪಡೆದೆ ಎಂದು ಸಂಜು ಹೇಳಿದ್ದಾರೆ.

ಕೊಹ್ಲಿ ಅತ್ಯಂತ ಕಠಿಣ ಫುಡ್ ಡಯೆಟ್ ಫಾಲೋ ಮಾಡುತ್ತಾರೆ. ಜೊತೆಗೆ ವರ್ಕೌಟ್. ಹೀಗಾಗಿ ಈ ಎರಡು ಕೊಹ್ಲಿ ರೀತಿ ಪಾಲಿಸಲು ಸೂಚನೆ ಕೇಳಿದ್ದೆ. ಕೊಹ್ಲಿ ತಮ್ಮ ಡಯೆಟ್ ಪ್ಲಾನ್, ವರ್ಕೌಟ್ ಪ್ಲಾನ್‌ಗಳನ್ನು ತಳಿಸಿದರು. ಕೊಹ್ಲಿಯ ಪ್ಲಾನ್ ರೀತಿ ಕಷ್ಟಪಟ್ಟು ಒಂದು ವರ್ಷ ಫಾಲೋ ಮಾಡಿದೆ. ಬಳಿಕ ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ವರ್ಷ ಬಳಿಕ ಕೊಹ್ಲಿ ಡಯಟ್ , ವರ್ಕೌಟ್ ಪ್ಲಾನ್ ಕೈಬಿಟ್ಟೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಕ್ರಿಕೆಟ್ ಕರಿಯರ್‌ನಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಟೂರ್ನಿ ವೇಳೆ ಸ್ವಲ್ಪ ದಿನ ವ್ಯಾಯಾಮ ಮಾಡಿ ಉಳಿದ ದಿನ ಅರಾಮಗಿರಲು ಸಾಧ್ಯವಿಲ್ಲ. ಕೊಹ್ಲಿ ಪ್ರತಿ ದಿನ ತಮ್ಮ ಡಯೆಟ್‌‌ನಲ್ಲಿ ಲೋಪವಾಗದಂತೆ ನೋಡಿಕೊಳ್ಳುತ್ತಾರೆ. ಕಠಿಣ ಅಭ್ಯಾಸ ಮಾಡುತ್ತಾರೆ, ಸ್ಟ್ರಿಕ್ಟ್ ಡಯೆಟ್ ಫಾಲೋ ಮಾಡುತ್ತಾರೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ: ಮುಗಿಯಿತಾ ಈ ಮೂವರು ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು?
ಕಣ್ಣೀರಿಟ್ಟ ಪಾಕಿಸ್ತಾನ, ಶೂನ್ಯ ರನ್ 5 ವಿಕೆಟ್ ಕಬಳಿಸಿದ ವಿಂಡೀಸ್ ಬೌಲರ್, ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ