ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಭಾನವಾರದಿಂದ ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಕೆಲ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
ಚೆನ್ನೈ(ಡಿ.14): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತವರಿನಲ್ಲಿ 1000 ರನ್ ಸೇರಿದಂತೆ ಹಲವು ದಾಖಲೆ ನಿರ್ಮಿಸಿದ್ದಾರೆ. ಇದೀಗ ಏಕದಿನ ಸರಣಿಯಲ್ಲೂ ಹಲವು ದಾಖಲೆ ಬರೆಯಲು ಕೊಹ್ಲಿ ಸಜ್ಜಾಗಿದ್ದಾರೆ.
ಇದನ್ನೂ ಓದಿ: ವಿಂಡೀಸ್ ವಿರುದ್ಧದ ಏಕದಿನ: ಚೆನ್ನೈಗೆ ಬಂದಿಳಿದ ಭಾರತ!
undefined
ವೆಸ್ಟ್‌ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಾತರದಿಂದ ಕಾಯುತ್ತಿದ್ದಾರೆ. ವಿಂಡೀಸ್ ವಿರುದ್ಧ ಕಳೆದ 9 ಇನ್ನಿಂಗ್ಸ್‌ಗಳಲ್ಲಿ ‘ರನ್ನಾಸುರ’ ಕೊಹ್ಲಿ 174ರ ಸರಾಸರಿಯಲ್ಲಿ ಬರೋಬ್ಬರಿ 870 ರನ್ ಕಲೆಹಾಕಿದ್ದಾರೆ. 6 ಶತಕ, 1 ಅರ್ಧಶತಕ ಗಳಿಸಿರುವ ವಿರಾಟ್, ಮತ್ತಷ್ಟುದಾಖಲೆಗಳನ್ನು ಬರೆಯುವ ಉತ್ಸಾಹದಲ್ಲಿದ್ದಾರೆ.
ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಹಲವು ದಾಖಲೆ ನಿರ್ಮಾಣ!
ಏಕದಿನದಲ್ಲಿ ವಿರಾಟ್ 43 ಶತಕಗಳನ್ನು ಬಾರಿಸಿದ್ದು, ಸಚಿನ್ ತೆಂಡುಲ್ಕರ್‌ರ 49 ಶತಕಗಳ ದಾಖಲೆ ಸರಿಗಟ್ಟಲು ಇನ್ನು ಕೇವಲ 6 ಶತಕ ಬೇಕಿದೆ. ಸಚಿನ್ ದಾಖಲೆಯ ಸನಿಹಕ್ಕೆ ತಲುಪಲು ಕೊಹ್ಲಿ ಈ ಸರಣಿಯನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ.
ವಿಂಡೀಸ್ ವಿರುದ್ಧ ವೀರಾವೇಶ
(ಕಳೆದ 9 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಸ್ಕೋರ್)
111, 140, 157*, 107, 16, 33*, 72, 120, 114 *