Ind vs SA ದೇಶ ಮೊದಲು, ರೆಕಾರ್ಡ್‌ ಆಮೇಲೆ: ಕಿಂಗ್‌ ಕೊಹ್ಲಿಯ ನಿಸ್ವಾರ್ಥ ಗುಣಕ್ಕೆ ನೆಟ್ಟಿಗರು ಫಿದಾ

Published : Oct 03, 2022, 04:15 PM IST
Ind vs SA ದೇಶ ಮೊದಲು, ರೆಕಾರ್ಡ್‌ ಆಮೇಲೆ: ಕಿಂಗ್‌ ಕೊಹ್ಲಿಯ ನಿಸ್ವಾರ್ಥ ಗುಣಕ್ಕೆ ನೆಟ್ಟಿಗರು ಫಿದಾ

ಸಾರಾಂಶ

ಫಿಫ್ಟಿ ಬಾರಿಸಲು ಅವಕಾಶವಿದ್ದರೂ, ದಿನೇಶ್ ಕಾರ್ತಿಕ್‌ಗೆ ಅಬ್ಬರಿಸಲು ಅವಕಾಶ ನೀಡಿದ ಕಿಂಗ್ ಕೊಹ್ಲಿ 49 ರನ್ ಬಾರಿಸಿ ಅಜೇಯರಾಗುಳಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಯ ಓವರ್‌ನ ಎಲ್ಲಾ ಎಸೆತಗಳನ್ನು ಎದುರಿಸಿದ ದಿನೇಶ್ ಕಾರ್ತಿಕ್

ಗುವಾಹಟಿ(ಅ.03): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್‌ ಬ್ಯಾಟರ್‌ ಎನಿಸಿಕೊಂಡಿದ್ದು, ಈಗಾಗಲೇ ಹಲವು ದಾಖಲೆಗಳ ಒಡೆಯರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 71 ಶತಕ ಸಿಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಯಾವಾಗಲೂ ತಾವು ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.  

ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ಸಾಧನೆಗಿಂತ ತಂಡದ ಯಶಸ್ಸೇ ಮುಖ್ಯ ಎನ್ನುವುದನ್ನು ಆಗಾಗ ಹೇಳುತ್ತಲೇ ಬಂದಿದ್ಧಾರೆ. ಇದೀಗ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಸುವರ್ಣಾವಕಾಶವಿದ್ದರೂ ಸಹಾ, ತಂಡಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನಿಸ್ವಾರ್ಥ ಭಾವನೆ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ, 19 ಓವರ್ ಅಂತ್ಯದ ವೇಳೆಗೆ 28 ಎಸೆತಗಳಲ್ಲಿ ಅಜೇಯ 49 ರನ್‌ ಸಿಡಿಸಿದ್ದರು. ಕೊನೆಯ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಎಲ್ಲಾ ಆರು ಎಸೆತಗಳನ್ನು ಎದುರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯದರು. ದಿನೇಶ್ ಕಾರ್ತಿಕ್ ಕೊನೆಯ 6 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 16 ರನ್ ಸಿಡಿಸಿದರು.

20ನೇ ಓವರ್‌ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್‌ ರನ್‌ಗಳಿಸಲು ಸಾಧ್ಯವಾಗಲಿಲ್ಲ. ಇನ್ನು ಎರಡನೇ ಎಸೆತದಲ್ಲಿ ಡಿಕೆ ಬೌಂಡರಿ ಬಾರಿಸಿದರು. ರಬಾಡ ಎಸೆತದ ಮೂರನೆ ಎಸೆತದಲ್ಲೂ ಡಿಕೆ ರನ್‌ಗಳಿಸಲು ಯಶಸ್ವಿಯಾಗಲಿಲ್ಲ. ಮರು ಎಸೆತ ವೈಡ್ ಆದರೆ, ಆನಂತರದ ಎರಡೂ ಎಸೆತಗಳಲ್ಲೂ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಲೆಗ್ ಬೈ ಮುಖಾಂತರ ಒಂದು ರನ್ ಗಳಿಸಿದರು. 

ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿ ಸೂರ್ಯಕುಮಾರ್ ಯಾದವ್‌ಗೆ ಸಿಗಬೇಕಿತ್ತು ಎಂದ ಕೆ ಎಲ್ ರಾಹುಲ್

ನಾಲ್ಕನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿದ ಬಳಿಕ, ಐದನೇ ಎಸೆತಕ್ಕೂ ಮುನ್ನ ಸ್ಟ್ರೈಕ್ ನೀಡಲೇ ಎನ್ನುವಂತೆ ವಿರಾಟ್ ಕೊಹ್ಲಿಯನ್ನು ಡಿಕೆ ಕೇಳಿದರು. ಆಗ ಕೊಹ್ಲಿ, ನಿನ್ನ ಆಟವನ್ನು ಆಡಿ ಒಳ್ಳೆಯ ರೀತಿಯಲ್ಲಿ ಫಿನಿಶ್ ಮಾಡಿ ಎನ್ನುವಂತೆ ಸಲಹೆ ನೀಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು 237 ರನ್ ಬಾರಿಸಿತ್ತು. ಇನ್ನು ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಕ್ವಿಂಟನ್ ಡಿ ಕಾಕ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!