
ಲಂಡನ್ (ಆ.17) ಟೀಂ ಇಂಡಿಯಾ ರನ್ ಮಶಿನ್ ಎಂದೇ ಖ್ಯಾತಿಗೊಂಡಿರುವ ವಿರಾಟ್ ಕೊಹ್ಲಿಯನ್ನು ಮತ್ತೆ ಕ್ರಿಕೆಟ್ ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಏಕದಿನ ಮಾದರಿಯಲ್ಲಿ ಮಾತ್ರ ಕೊಹ್ಲಿ ವಿದಾಯ ನೀಡಿಲ್ಲ. ಇನ್ನುಳಿದ ಟಿ20 ಹಾಗೂ ಟೆಸ್ಟ್ ಮಾದರಿಗೆ ಕೊಹ್ಲಿ ವಿದಾಯ ಹೇಳಿದ್ದಾರೆ. ಕ್ರಿಕೆಟ್‌ನಿಂದ ದೂರ ಉಳಿದಿರುವ ಕೊಹ್ಲಿ ಲಂಡನ್‌ನಲ್ಲಿ ನೆಲೆಸಿ ಹಲವು ದಿನಗಳಾಗಿದೆ. ಇದರ ನಡುವೆ ಲಂಡನ್‌ನಲ್ಲಿ ಕೊಹ್ಲಿಯ ಕೆಲ ಫೋಟೋಗಳು ಬಹಿರಂಗವಾಗಿತ್ತು. ಇದೀಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್ ಬೀದಿಯಲ್ಲಿ ಪ್ರತ್ಯಕ್ಷವಾಗಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಕೊಹ್ಲಿ ಹಾಗೂ ಅನುಷ್ಕಾ ಜೋಡಿ ಲಂಡನ್‌ನಲ್ಲೇ ನೆಲೆಸುವುದು ಬಹುತೇಕ ಖಚಿತಗೊಂಡಿದೆ.
ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯನ್ನು ಬೀದಿಯಲ್ಲಿ ಸ್ಥಳೀಯರು ಮಾತನಾಡಿಸಿದ್ದಾರೆ. ಸ್ಥಳೀಯರ ಜೊತೆ ವಿರುಷ್ಕಾ ಜೋಡಿ ಮಾತನಾಡಿ ತೆರಳಿದ್ದಾರೆ. ಕೊಹ್ಲಿ ನೀರಿನ ಬಾಟಲಿ ಹಾಗೂ ಛತ್ರಿ ಹಿಡಿದಿದ್ದರೆ, ಅನುಷ್ಕಾ ಶರ್ಮಾ ವ್ಯಾನಿಟಿ ಬ್ಯಾಗ್ ಹಿಡಿದು ತೆರಳಿದ್ದಾರೆ. ಲಂಡನ್‌ನಲ್ಲಿ ಶಾಪಿಂಗ್ ಮಾಡಿ ತೆರಳುತ್ತಿರುವ ವೇಳೆ ಇಬ್ಬರು ಪ್ರತ್ಯಕ್ಷರಾಗಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇತ್ತ ಏಕದಿನ ಮಾದರಿಯಲ್ಲಿ ಕೊಹ್ಲಿ ಆಡುತ್ತಾರಾ? ಕೊಹ್ಲಿಗೆ ಸ್ಥಾನ ನೀಡುತ್ತಾರಾ ಅನ್ನೋದು ಚರ್ಚೆಯಾಗುತ್ತಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಕೊಹ್ಲಿ ಕಣಕ್ಕಿಳಿಯುತ್ತಾರಾ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ವಿರಾಟ್ ಕೊಹ್ಲಿ ಲಂಡನ್‌ನಲ್ಲೇ ಸೆಟ್ಲ್ ಆಗಲು ಬಯಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿ ವೇಳೆ ಆರ್‌ಸಿಬಿ ತಂಡದ ಪರ ಕಣಕ್ಕಿಳಿಯಲು ಮಾತ್ರ ಭಾರತಕ್ಕೆ ಬರಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕೊಹ್ಲಿ ಇದೀಗ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿ ಸಮಯ ಕಳೆಯುತ್ತಿದ್ದಾರೆ. ಕ್ರಿಕೆಟ್ ಟೂರ್ನಿ, ಪಂದ್ಯಗಳ ಒತ್ತಡದಲ್ಲಿ ಹೆಚ್ಚಿನ ಸಮಯ ಮೈದಾನದಲ್ಲಿ ಕಳೆದಿದ್ದ ಕೊಹ್ಲಿ ಇದೀಗ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೇ ಕಾರಣದಿಂದ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿ ಅಚ್ಚರಿ ನೀಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.