
ಸ್ಟ್ರೈಕ್ ರೇಟ್, ಇಂಟೆಂಟ್ (ಆಕ್ರಮಣಕಾರಿ ಶೈಲಿ) ಅಂತ ಮಾತಾಡೋರು ಕೇಳಿ, ಕಿಂಗ್ ಇವತ್ತು ಫುಲ್ ಮೂಡ್‌ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನೂರಕ್ಕೆ ನೂರರಷ್ಟು ನಿಜವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಸಿಕ್ಸರ್ ಬಾರಿಸುವುದಿಲ್ಲ, ಆಧುನಿಕ ಕ್ರಿಕೆಟ್‌ಗೆ ಅವರ ಟೆಂಪ್ಲೇಟ್ ಹಳೆಯದಾಗಿದೆ ಎಂದು ದೂರುತ್ತಿದ್ದ ವಿಮರ್ಶಕರಿಗೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದಲೇ ಕಟು ಉತ್ತರ ನೀಡಿದ್ದಾರೆ. 296 ರನ್‌ಗಳ ಗುರಿಯನ್ನು ಭಾರತ ಕೇವಲ 41.4 ಓವರ್‌ಗಳಲ್ಲಿ ತಲುಪಲು ಕೊಹ್ಲಿಯ ಈ ಅಬ್ಬರವೇ ಕಾರಣ. ಹಾಗಾದರೆ ಈಗ ಎದುರಿರುವ ಸಾಧನೆಗೆ ಅಡ್ಡಿಯಾಗಿರುವ ಸಮಸ್ಯೆಯಾದರೂ ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಕೇವಲ 88 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಬೃಹತ್ ಸಿಕ್ಸರ್‌ಗಳ ನೆರವಿನಿಂದ ಅಜೇಯ ೧೩೯ ರನ್ ಸಿಡಿಸಿದ ಕೊಹ್ಲಿಯ ಸ್ಟ್ರೈಕ್ ರೇಟ್ ಬರೋಬ್ಬರಿ ೧೫೮ ಸನಿಹವಿತ್ತು! ತಮ್ಮ ಅರ್ಧಶತಕವನ್ನು ಸಿಕ್ಸರ್ ಮೂಲಕ ಪೂರೈಸಿದ ವಿರಾಟ್, ನೂರರ ಗಡಿಯನ್ನೂ ಕ್ರೀಸ್‌ನಿಂದ ಮುನ್ನುಗ್ಗಿ ಬಂದು ಸಿಕ್ಸರ್ ಮೂಲಕವೇ ದಾಟಿದರು. ಅಂತಿಮವಾಗಿ ಪಂದ್ಯವನ್ನು ಸಹ ಸಿಕ್ಸರ್ ಬಾರಿಸಿಯೇ ಮುಗಿಸಿದರು. ಒಂದು ಇನಿಂಗ್ಸ್‌ನಲ್ಲಿ 9 ಸಿಕ್ಸರ್ ಬಾರಿಸಿದ್ದು ಕೊಹ್ಲಿಯ ಒಡಿಐ ವೃತ್ತಿಜೀವನದ ಅತ್ಯುನ್ನತ ದಾಖಲೆಯಾಗಿದೆ. ಅಪಾಯಕಾರಿ ಶೈಲಿಯಲ್ಲೂ ನಿಯಂತ್ರಣ ಕಾಯ್ದುಕೊಂಡು ಶೋಭಮನ್ ಗಿಲ್ ಜೊತೆ (108 ಎಸೆತಗಳಲ್ಲಿ 151 ರನ್) ಗಟ್ಟಿ ಸಹಭಾಗಿತ್ವ ನೀಡಿದ್ದು ಅವರ ಪಕ್ವತೆಗೆ ಸಾಕ್ಷಿ.
ಈ ಪಂದ್ಯದಲ್ಲಿ ವಿರಾಟ್ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಪೂರೈಸಿದ ಕೊಹ್ಲಿ, ಸಚಿನ್ ಟೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ ಧೂಳೀಪಟ ಮಾಡಿದ್ದಾರೆ. ಸಚಿನ್ 377 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರೆ, ವಿರಾಟ್ ಕೇವಲ 303 ಇನಿಂಗ್ಸ್‌ಗಳಲ್ಲಿ (74 ಇನಿಂಗ್ಸ್ ಮುಂಚಿತವಾಗಿ) ಈ ಸಾಧನೆ ಮಾಡಿ ವಿಶ್ವದಾಖಲೆ ಬರೆದಿದ್ದಾರೆ. ಇಯಾನ್ ಬಿಷಪ್ ಮತ್ತು ಇರ್ಫಾನ್ ಪಠಾಣ್ ಅವರಂತಹ ದಿಗ್ಗಜರು ವಿರಾಟ್ ಅವರ ಹಸಿವು ಮತ್ತು 60ರ ಸರಾಸರಿಯ ಸತತ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ಟೆಂಡೂಲ್ಕರ್ ಹೆಸರಿನಲ್ಲಿರುವ ೧೦೦ ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯಲು ವಿರಾಟ್‌ಗೆ ಈಗ ಕೇವಲ 14 ಶತಕಗಳಷ್ಟೇ ಬಾಕಿ ಇವೆ (ಪ್ರಸ್ತುತ 86 ಶತಕ). ಆಸ್ಟ್ರೇಲಿಯಾ ಸರಣಿಯ ಶೂನ್ಯ ಸರಣಿಯಿಂದ ಚೇತರಿಸಿಕೊಂಡು ಸರಣಿಯಾದ್ಯಂತ ಶತಕ-ಅರ್ಧಶತಕಗಳ ಸುರಿಮಳೆ ಗೈದಿರುವ ಕೊಹ್ಲಿ, ತಮ್ಮ ಬ್ಯಾಟಿಂಗ್ ಶೈಲಿಯನ್ನು ಸಂಪೂರ್ಣ 'ವರ್ಷನ್ 2.0' ಗೆ ಬದಲಾಯಿಸಿಕೊಂಡಿದ್ದಾರೆ. ಮುಂಬರುವ 18-20 ಒಡಿಐ ಪಂದ್ಯಗಳು ಹಾಗೂ ವಿಶ್ವಕಪ್ ಪಂದ್ಯಗಳನ್ನು ಸರಿಯಾಗಿ ಬಳಸಿಕೊಂಡು ಶತಕಗಳ ಶತಕ ಪೂರೈಸುವುದು ವಿರಾಟ್ ಅವರ ಮಾಸ್ಟರ್ ಪ್ಲಾನ್ ಆಗಿದೆ.
ಸಚಿನ್ ಅವರ 100 ಶತಕಗಳ ದಾಖಲೆ ಮುರಿಯಲು ವಿರಾಟ್‌ಗೆ ಈಗ ದೊಡ್ಡ ಸವಾಲಾಗಿರುವುದು 'ವಯಸ್ಸು, ಫಿಟ್‌ನೆಸ್ ಮತ್ತು ಪಂದ್ಯಗಳ ಲಭ್ಯತೆ'.
ಟಿ20 ಯಿಂದ ನಿವೃತ್ತಿ; ವಿರಾಟ್ ಈಗಾಗಲೇ ಟಿ೨೦ ಮಾದರಿಯಿಂದ ದೂರವಾಗಿರುವುದರಿಂದ ಶತಕಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಅವರಿಗೆ ಏಕದಿನ ಹಾಗೂ ಟೆಸ್ಟ್ ಮಾದರಿಗಳು ಮಾತ್ರ ಬಾಕಿ ಇವೆ.
ಸಮಯ ಮತ್ತು ಬ್ಯಾಟಿಂಗ್ ಆರ್ಡರ್; ಏಕದಿನ ಪಂದ್ಯಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮತ್ತು ಟೆಸ್ಟ್‌ನಲ್ಲಿ ರನ್‌ಗಳಿಸುವುದು ಸುಲಭವಲ್ಲದಿರುವುದು ಅವರಿಗೆ ಪ್ರಮುಖ ಸವಾಲಾಗಿದೆ.
ವಿಮರ್ಶಕರ ಒತ್ತಡ ಮತ್ತು ವಯಸ್ಸಿನ ಸವಾಲು; ಮುಂದಿನ 2-3 ವರ್ಷಗಳಲ್ಲಿ ಗಾಯಗಳಿಲ್ಲದೆ ಕಾಯ್ದುಕೊಳ್ಳುವ ಫಿಟ್‌ನೆಸ್ ಹಾಗೂ ಬೋರ್ಡ್ ನೀಡುವ ವಿಶ್ರಾಂತಿ ವೇಳಾಪಟ್ಟಿಗಳು ಇವರ ಹಾದಿಗೆ ಪ್ರಮುಖ ಅಡ್ಡಿಯಾಗಬಹುದು. ಅದರಲ್ಲಿ, ಪ್ರಸ್ತುತ ಇರುವ ಫಾರ್ಮ್ ಮತ್ತು ಆಟದ ಮೇಲಿರುವ ಹಸಿವನ್ನು ನೋಡಿದರೆ ಕೊಹ್ಲಿ ಸಚಿನ್ ದಾಖಲೆ ಮುರಿಯುವುದು ಬಹುತೇಕ ಖಚಿತ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.