
ಚೆನ್ನೈ(ಅ.08): ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಎಂ.ಎಸ್.ಧೋನಿ, ಮೊಹಮ್ಮದ್ ಅಜರುದ್ದೀನ್ ಬಯೋಪಿಕ್ ಈಗಾಗಲೇ ತೆರೆ ಮೇಲೆ ಭಾರಿ ಮೋಡಿ ಮೋಡಿದೆ. ಇದೀಗ ಶ್ರೀಲಂಕಾ ದಿಗ್ಗದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಬಯೋಪಿಕ್ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗುತ್ತಿದೆ. ಮುರಳೀಧರನ್ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಚಿತ್ರ ತಂಡ ಅಧೀಕೃತ ಘೋಷಣೆ ಮಾಡಿದೆ
ಸಿನಿಮಾದಲ್ಲಿ ನಟಿಸಲು ಓಕೆ, ಆದ್ರೆ ಒಂದು ಕಂಡೀಷನ್: ವಿರಾಟ್ ಕೊಹ್ಲಿ.
ತಮಿಳಿನಲ್ಲಿ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿರ್ಮಾಣ ಮಾಡಲಾಗುತ್ತಿದೆ. ಎಂ.ಎಸ್. ಶ್ರೀಪತಿ ನಿರ್ದೇಶನದ ಸ್ಪಿನ್ ಮಾಂತ್ರಿಕ ಜೀವನಾಧಾರಿತ ಚಿತ್ರವನ್ನು ಮೂವಿ ಟ್ರೈನ್ ಮೋಶನ್ ಪಿಕ್ಚರ್ಸ್ ಹಾಗೂ ದಾರ್ ಮೋಶನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.
ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ ಯುವರಾಜ್ ಸಿಂಗ್ ಬಯೋಪಿಕ್ ಸಿನಿಮಾ..!.
ಚಿತ್ರದ ಅಧೀಕೃತ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮುರಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ, ಶೀಘ್ರದಲ್ಲಿ ಎಂದು ಪೋಸ್ಟ್‌ರನಲ್ಲಿ ಹೇಳಿದೆ. ಇಷ್ಟೇ ಅಲ್ಲ ಮುತ್ತಯ್ಯ ಮುರಳೀದರನ್ ಬೌಲಿಂಗ್ ಶೈಲಿಯ ಪೆನ್ಸಿಲ್ ಆರ್ಟ್ ಪೋಸ್ಟರ್‌ನಲ್ಲಿ ಬಳಸಲಾಗಿದೆ.
ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಮಾಡಿದ ಹರಸಾಹಸ, ಬಡತನ, ಬದುಕಿನ ಕಠಿಣ ಹಾದಿ, ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಿಗ್ಗಜನಾಗಿ ಮೆರೆದ ಮುರಳೀಯ ಸಾಹಸಗಾಥೆ ಒಳಗೊಂಡಿರಲಿದೆ. ಇನ್ನು ಮುರಳೀಧರನ್ ವೈವಾಹಿಕ ಜೀವನವೂ ಈ ಬಯೋಪಿಕ್‌ನಲ್ಲಿರಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ ಏಕದಿನ ಕ್ರಿಕೆಟ್‌ನಲ್ಲಿ 534 ವಿಕೆಟ್ ಕಬಳಿಸೋ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಈ ದಾಖಲೆ ಬ್ರೇಕ್ ಮಾಡುವುದು ಅಸಾಧ್ಯವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.