Vijay Hazare Trophy Final ಮಹಾರಾಷ್ಟ್ರ ಎದುರು ಟಾಸ್ ಗೆದ್ದ ಸೌರಾಷ್ಟ್ರ ಬೌಲಿಂಗ್ ಆಯ್ಕೆ

By Naveen KodaseFirst Published Dec 2, 2022, 9:18 AM IST
Highlights

ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಪ್ರಶಸ್ತಿಗಾಗಿಂದು ಸೌರಾಷ್ಟ್ರ-ಮಹಾರಾಷ್ಟ್ರ ಫೈಟ್
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾದ ಹೈವೋಲ್ಟೇಜ್ ಪಂದ್ಯ
ಟಾಸ್ ಗೆದ್ದ ಸೌರಾಷ್ಟ್ರ ತಂಡವು ಬೌಲಿಂಗ್ ಆಯ್ಕೆ

ಅಹಮದಾಬಾದ್‌(ಡಿ.02): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಶುಕ್ರವಾರ ಮಹಾರಾಷ್ಟ್ರ ಹಾಗೂ ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಸೌರಾಷ್ಟ್ರ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಮಹಾರಾಷ್ಟ್ರ ಮೊದಲ ಟ್ರೋಫಿಯ ತವಕದಲ್ಲಿದ್ದರೆ, 3ನೇ ಬಾರಿಗೆ ಫೈನಲ್‌ನಲ್ಲಿ ಅಡುತ್ತಿರುವ ಸೌರಾಷ್ಟ್ರ 2007-08ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

ಸೌರಾಷ್ಟ್ರದ ಬಲಿಷ್ಠ ಬೌಲಿಂಗ್‌ ಪಡೆ ಹಾಗೂ ಮಹಾರಾಷ್ಟ್ರದ ಸ್ಫೋಟಕ ಬ್ಯಾಟರ್‌ಗಳ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಋುತುರಾಜ್‌ ಗಾಯಕ್ವಾಡ್‌ ಕೇವಲ 4 ಪಂದ್ಯಗಳಲ್ಲಿ 552 ರನ್‌ ಕಲೆಹಾಕಿದ್ದಾರೆ. ಅಂಕಿತ್‌ ಬಾವ್ನೆ 8 ಪಂದ್ಯಗಳಲ್ಲಿ 571 ರನ್‌ ಗಳಿಸಿದ್ದಾರೆ. ಇನ್ನು ಸೌರಾಷ್ಟ್ರ ನಾಯಕ ಜಯ್‌ದೇವ್‌ ಉನಾದ್ಕತ್‌ 18 ವಿಕೆಟ್‌ ಕಬಳಿಸಿದ್ದು, ಪ್ರೇರಕ್‌ ಮಂಕಡ್‌, ಧಮೇಂದ್ರ ಜಡೇಜಾ, ಚಿರಾಗ್‌ ಜಾನಿ ಕೂಡ ಉತ್ತಮ ಲಯದಲ್ಲಿದ್ದಾರೆ. ತಂಡದ ಬ್ಯಾಟಿಂಗ್‌ ಪಡೆ ಸಮರ್ಥ್ ವ್ಯಾಸ್‌, ಅರ್ಪಿತ್‌ ವಾಸಾವ್ಡಾ, ಜಯ್‌ ಗೋಹಿಲ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ.

ತಂಡಗಳು ಹೀಗಿವೆ ನೋಡಿ

ಸೌರಾಷ್ಟ್ರ:  ಹಾರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಶೆಲ್ಡನ್ ಜಾಕ್ಸನ್, ಜೇ ಗೋಹಿಲ್, ಸಮರ್ಥ್‌ ವ್ಯಾಸ್, ಪ್ರೇರಕ್ ಮಂಕಡ್, ಅರ್ಪಿತ್ ವಸುವಾಡ, ಚಿರಾಗ್ ಜಾನಿ, ಧರ್ಮೇಂದ್ರ ಸಿಂಗ್ ಜಡೇಜಾ, ಜಯದೇವ್ ಉನಾದ್ಕತ್(ನಾಯಕ), ಕುಶಾಂಗ್ ಪಟೇಲ್, ಪಾರ್ಥ್ ಭುತ್.

ಮಹರಾಷ್ಟ್ರ: ಋತುರಾಜ್ ಗಾಯಕ್ವಾಡ್(ನಾಯಕ), ಸತ್ಯಜೀತ್ ಬಚ್ಚವ್, ಅಂಕಿತ್ ಭಾವ್ನೆ, ಅಜೀಂ ಕಾಜಿ, ರಾಜವರ್ಧನ್ ಹಂಗಾರ್ಗೆಕರ್, ಶಮ್ಸ್‌ಜಮಾ ಕಾಜಿ, ಸೌರಭ್ ನವಾಲೆ(ವಿಕೆಟ್ ಕೀಪರ್), ಮನೋಜ್ ಇಂಗಾಲೆ, ಮುಕೇಶ್ ಚೌಧರಿ, ಪವನ್ ಶಾ, ಸೌಶಾದ್ ಶೇಖ್.  

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 1

ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಗೆ ಅಶೋಕ್‌, ಜತಿನ್‌

ನವದೆಹಲಿ: ಮಾಜಿ ಕ್ರಿಕೆಟಿಗರಾದ ಅಶೋಕ್‌ ಮಲ್ಹೋತ್ರಾ ಹಾಗೂ ಜತಿನ್‌ ಪರಂಜಪೆ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ)ಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಆಟಗಾರ್ತಿ ಸುಲಕ್ಷಣಾ ನಾಯ್‌್ಕ ಸಮಿತಿಯಲ್ಲಿ ಮುಂದುವರಿಯಲಿದ್ದಾರೆ. ಈ ಸಮಿತಿಯು ಬಿಸಿಸಿಐ ಅಯ್ಕೆ ಸಮಿತಿಯ ಸದಸ್ಯರ ಸ್ಥಾನಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂದರ್ಶನ ನಡೆಸಿ ಆಯ್ಕೆ ನಡೆಸಲಿದೆ.

ಪಾಕ್ ಎದುರು ಮೊದಲ ದಿನವೇ 4 ಶತಕ; ಇಂಗ್ಲೆಂಡ್ ಕ್ರಿಕೆಟ್ ತಂಡ ವಿಶ್ವದಾಖಲೆ..!

ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಮಣೀಂದರ್‌, ದಾಸ್‌ ಅರ್ಜಿ

ನವದೆಹಲಿ: ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾಗಲು ಮಾಜಿ ಕ್ರಿಕೆಟಿಗರಾದ ಮಣೀಂದರ್‌ ಸಿಂಗ್‌, ಶಿವಸುಂದರ್‌ ದಾಸ್‌, ಸಲೀಲ್‌ ಅಂಕೋಲಾ, ಸಮೀರ್‌ ದಿಘೆ, ವಿನೋದ್‌ ಕಾಂಬ್ಳಿ ಸೇರಿ 50ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಮಣೀಂದರ್‌ ಹಾಗೂ ದಾಸ್‌ಗೆ ಮಾತ್ರ 20ಕ್ಕಿಂತ ಹೆಚ್ಚು ಟೆಸ್ಟ್‌ ಆಡಿದ ಅನುಭವವಿದೆ. ಇದೇ ವೇಳೆ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಸಹ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದ್ದು, ಈ ವಿಷಯ ಖಚಿತವಾಗಿಲ್ಲ. ಒಂದು ವೇಳೆ ಅಗರ್ಕರ್‌ ಅರ್ಜಿ ಸಲ್ಲಿಸಿದ್ದರೆ ಅವರ ಅನುಭವವನ್ನು ಪರಿಗಣಿಸಿ ಅವರನ್ನೇ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಿಸುವ ಸಾಧ್ಯತೆ ಇದೆ.

click me!