ದಕ್ಷಿಣ ಆಫ್ರಿಕಾದ ಸಿಎಸ್‌ಎ ಟಿ20 ಲೀಗ್‌ಗೆ ಭರದ ಸಿದ್ದತೆ
ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕತ್ವದ ಜೋಹಾನ್ಸ್‌ಬರ್ಗ್ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಸೇರ್ಪಡೆ
2011ರಿಂದ 2021ರ ವರೆಗೂ ಚೆನ್ನೈ ತಂಡದ ಭಾಗವಾಗಿದ್ದ ಫಾಫ್ ಡು ಪ್ಲೆಸಿಸ್
ಕೇಪ್‌ಟೌನ್(ಆ.12): ಜನವರಿಯಲ್ಲಿ ಆರಂಭವಾಗಲಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸಿಎಸ್‌ಎ ಟಿ20 ಲೀಗ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕತ್ವದ ಜೋಹಾನ್ಸ್‌ಬರ್ಗ್ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಸೇರ್ಪಡೆಗೊಂಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಪರ ದೀರ್ಘ ಕಾಲ ಆಡಿದ್ದ ಅವರನ್ನು ತಂಡ ನೇರವಾಗಿ ಆಯ್ಕೆ ಮಾಡಿದೆ. ಐಪಿಎಲ್‌ನಲ್ಲಿ ಕಳೆದ ಆವೃತ್ತಿಯಲ್ಲಿ ಬೆಂಗಳೂರು ಪಡ ಆಡಿರುವ ಡು ಪ್ಲೆಸಿಸ್, 2011ರಿಂದ 2021ರ ವರೆಗೂ ಚೆನ್ನೈ ತಂಡದ ಭಾಗವಾಗಿದ್ದರು. ಇಂಗ್ಲೆಂಡ್‌ನ ಮೊಯೀನ್ ಅಲಿಯನ್ನೂ ತಂಡ ಖರೀದಿಸಿದೆ ಎನ್ನಲಾಗಿದೆ.
ಇನ್ನು, ಮುಂಬೈ ಇಂಡಿಯನ್ಸ್ ಮಾಲಕತ್ವದ ಕೇಪ್‌ಟೌನ್ ತಂಡ ಕಗಿಸೊ ರಬಾಡ, ರಶೀದ್ ಖಾನ್ ಸೇರಿದಂತೆ ಐವರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಪಡೆದ ಮುಂಬೈ ಮೂವರು ವಿದೇಶಿ ಆಟಗಾರರ ಕೋಟಾದಲ್ಲಿ ಆಫ್ಘಾನಿಸ್ತಾನದ ರಶೀದ್ ಖಾನ್, ಇಂಗ್ಲೆಂಡ್‌ನ ಲಿವಿಂಗ್‌ಸ್ಟೋನ್ ಹಾಗೂ ಸ್ಯಾಮ್ ಕರ್ರನ್‌ರನ್ನು ಆಯ್ಕೆ ಮಾಡಿದೆ. ದಕ್ಷಿಣ ಆಫ್ರಿಕಾದಿಂದ ರಬಾಡ ಜೊತೆ ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್‌ರನ್ನೂ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಡೆವಾಲ್ಡ್ ಬ್ರೆವಿಸ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
undefined
ನ್ಯೂಜಿಲೆಂಡ್ ತಂಡದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ: ರಾಸ್ ಟೇಲರ್ ಆರೋಪ
ವೆಲ್ಲಿಂಗ್ಟನ್: ಇತ್ತೀಚೆಗಷ್ಟೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ದಿಗ್ಗಜ ಕ್ರಿಕೆಟಿಗ ರಾಸ್ ಟೇಲರ್, ನ್ಯೂಜಿಲೆಂಡ್ ತಂಡದಲ್ಲಿ ಆಡುವಾಗ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ. ಗುರುವಾರ ಬಿಡುಗಡೆಯಾದ ಪುಸ್ತಕದಲ್ಲಿ ಅವರು, ‘ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್ ಎಂಬುದು ಬಿಳಿಯರ ಆಟ. ಆದರೆ ನಾನು ಕಂದು ಬಣ್ಣ ಹೊಂದಿದ್ದೆ ಎಂದಿರುವ ಅವರು, ಹಲವರು ಬಣ್ಣದ ಕಾರಣಕ್ಕೆ ತಮ್ಮನ್ನು ಮಾವೊರಿ ಅಥವಾ ಭಾರತೀಯ ಮೂಲದವರೆಂದು ಭಾವಿಸಿದ್ದರು. ಯಾಕೆಂದರೆ ಪೆಸಿಫಿಕ್ ದ್ವೀಪವನ್ನು ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವುದು ಅಪರೂಪವಾಗಿತ್ತು ಎಂದಿದ್ದಾರೆ.
ಜಿಂಬಾಬ್ವೆ ಪ್ರವಾಸಕ್ಕೆ ಕೆಲ ದಿನಗಳ ಮೊದಲು ಮಹತ್ವದ ಬದಲಾವಣೆ, ಧವನ್ ಬದಲು ರಾಹುಲ್‌ಗೆ ನಾಯಕತ್ವ!
ಸಹ ಆಟಗಾರರು, ಅಧಿಕಾರಿಗಳಿಂದ ಡ್ರೆಸ್ಸಿಂಗ್ ಕೋಣೆಯಲ್ಲಿ ಅನುಭವಿಸುವ ಜನಾಂಗೀಯಾ ನಿಂದನೆ ತುಂಬಾ ನೋವುಂಟು ಮಾಡುತ್ತದೆ. ಆದರೆ ಅದರ ಬಗ್ಗೆ ಧ್ವನಿ ಎತ್ತಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಬರೆದಿದ್ದಾರೆ.
ಮೊದಲ ಟಿ20: ವಿಂಡೀಸ್ ವಿರುದ್ಧ ಕಿವೀಸ್‌ಗೆ ಗೆಲುವು
ಕಿಂಗ್‌ಸ್ಟನ್: ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 13 ರನ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್ 5 ವಿಕೆಟ್ ಕಳೆದುಕೊಂಡು 185 ರನ್ ಕಲೆ ಹಾಕಿತು.
ನಾಯಕ ವಿಲಿಯಮ್ಸನ್ 47, ಡೆವೋನ್ ಕಾನ್‌ವೇ 43 ರನ್ ಗಳಿಸಿದರೆ, ಜಿಮ್ಮಿ ನೀಶಮ್ 15 ಎಸೆತಗಳಲ್ಲಿ 33 ರನ್ ಸಿಡಿಸಿದರು. ಕಠಿಣ ಗುರಿ ಬೆನ್ನತ್ತಿದ ವಿಂಡೀಸ್ 7 ವಿಕೆಟ್‌ಗೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಶಮ್ರಾ ಬ್ರೂಕ್ಸ್ 42 ರನ್ ಗಳಿಸಿದರು. ಕೊನೆಯಲ್ಲಿ ರೊಮಾರಿಯೊ ಶೆಫರ್ಡ್ (16 ಎಸೆತಗಳಲ್ಲಿ 31), ಒಡೇಯನ್ ಸ್ಮಿತ್ (12 ಎಸೆತಗಳಲ್ಲಿ 27) ಅಬ್ಬರಿಸಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ.