ಸೋಶಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ಟೀಮ್ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹಾಗೂ ಸ್ವಯಂಘೋಷಿತ ಫ್ಯಾಕ್ಟ್ ಚೆಕರ್ ಮೊಹಮದ್ ಜುಬೇರ್ ನಡುವಿನ ವಾದ ವಿವಾದ ತಾರಕಕ್ಕೆ ಏರಿದೆ. ಈ ನಡುವೆ ಜುಬೇರ್ ಅವರ ಬೆಂಬಲಕ್ಕೆ ಕಾಂಗ್ರೆಸ್, ಎಡಪಂಥೀಯರು ಹಾಗೂ ಇಸ್ಲಾಮಿಸ್ಟ್‌ಗಳು ಆಗಮಿಸಿದ್ದಾರೆ.
ಬೆಂಗಳೂರು (ಸೆ.11): ತನ್ನ ಆಡುವ ದಿನಗಳಲ್ಲಿ ಟೀಮ್ ಇಂಡಿಯಾ ವೇಗಿ ವೆಂಕಟೇಶ್ ಪ್ರಸಾದ್ ತಮ್ಮ ಮಾರಕ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗಗೆ ಅಟ್ಟುತ್ತಿದ್ದರು. ಅದರಲ್ಲೂ 1999 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಅಮೀರ್ ಸೊಹೈಲ್‌ರನ್ನು ಔಟ್ ಮಾಡಿದ್ದ ಕ್ಷಣವನ್ನು ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ನಿವೃತ್ತಿಯ ಬಳಿಕ ಕ್ರಿಕೆಟ್ ವಿಶ್ಲೇಷಕರಾಗಿ, ಕೋಚ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಪ್ರಸಾದ್ ಇತ್ತೀಚೆಗೆ ಸೋಶಿಯಲ್ ಮೀಡಿಯಾಗೂ ಕಾಲಿಟ್ಟಿದ್ದರು. ಈ ನಡುವೆ ತಮ್ಮ ಟ್ವೀಟ್‌ಅನ್ನು ಹಿಡಿದುಕೊಂಡು ಕೆಣಕಿದ ಆಲ್ಟ್ ನ್ಯೂಸ್‌ನ ಸ್ವಯಂಘೋಷಿತ ಫ್ಯಾಕ್ಟ್ ಚೆಕರ್ ಮೊಹಮದ್ ಜುಬೇರ್‌ಗೆ ತಮ್ಮ ಸ್ಟೈಲ್‌ನಲ್ಲಿಯೇ ಅವರು ಕೊಟ್ಟಿರುವ ಉತ್ತರ ಬಹಳ ವೈರಲ್ ಆಗಿದೆ. ಫ್ಯಾಕ್ಟ್ ಚೆಕರ್ ಎನ್ನುವ ಹೆಸರಿನಲ್ಲಿ ದ್ವೇಷ ಹಂಚುವ ನಿಮ್ಮಂಥ ವ್ಯಕ್ತಿಗಳು, ಯಾವ ರೀತಿ ಎಂದರೆ ಟೆರರಿಸ್ಟ್‌ಗಳು ಶಾಂತಿಯ ಮಾತನಾಡಿದಂತೆ ಎಂದು ಟೀಕಿಸಿದ್ದಾರೆ. ಇದರ ಬೆನ್ನಲ್ಲಿಯೇ ಮೊಹಮದ್ ಜುಬೇರ್ ಅವರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷದ ನಾಯಕರುಗಳು, ಇಸ್ಲಾಮಿಸ್ಟ್‌ಗಳು ಹಾಗೂ ಎಡಪಂಥೀಯರು ನಿಂತಿದ್ದಾರೆ.
ನಾನು ಡಿಲೀಟ್ ಮಾಡಿದ ಟ್ವೀಟ್‌ನ ಬಗ್ಗೆ ಸತತವಾಗಿ ದ್ವೇಷವನ್ನೇ ಕಾರುವ ಈ ವ್ಯಕ್ತಿ ಮಾತನಾಡುತ್ತಾನೆ.ಸ ತನ್ನ ಅಜೆಂಡಾದ ಕಾರಣದಿಂದಾಗಿ ದೇಶದಲ್ಲಿ ಸಾವಿರಾರು ವ್ಯಕ್ತಿಗಳ ಜೀವವನ್ನು ಅಪಾಯಕ್ಕೆ ದೂಡಿದ ವ್ಯಕ್ತಿ ಮಾತನಾಡಿದದ್ದಾರೆ. ನೀವು ಫ್ಯಾಕ್ಟ್‌ಚೆಕರ್‌ನ ವೇಷ ಧರಿಸುವುದು ಭಯೋತ್ಪಾದಕರು ಶಾಂತಿಯ ಬಗ್ಗೆ ಮಾತನಾಡುವಂತಿದೆ' ಎಂದು ಬರೆದಿರುವ ವೆಂಕಟೇಶ್ ಪ್ರಸಾದ್ ಅದರೊಂದಿಗೆ ಮೊಹಮದ್ ಜುಬೇರ್ ಡಿಲೀಟ್ ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಕೂಡ ಶೇರ್ ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯಲ್ಲಿ ಬಿಜೆಪಿ ನಾಯಕಿ ನೂಪುರ್ ಶರ್ಮ ಅವರ ಅಪೂರ್ಣ ಟೀಕೆಯನ್ನು ಕಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇಡೀ ದೇಶದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡಿದ್ದ ಮೊಹಮದ್ ಜುಬೇರ್, ಇತ್ತೀಚೆಗೆ ಬಿಸಿಸಿಐ ಹಾಗೂ ಎಸಿಸಿಯನ್ನು ಟೀಕೆ ಮಾಡಿ ವೆಂಕಟೇಶ್ ಪ್ರಸಾದ್ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್‌ಅನ್ನು ಹಂಚಿಕೊಂಡಿದ್ದರು. ತಾವು ಮಾಡಿರುವ ಟ್ವೀಟ್‌ಗೆ ಬೇರೆ ಅರ್ಥ ಕಲ್ಪಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಜುಬೇರ್‌ಗೆ ವೆಂಕಟೇಶ್ ಪ್ರಸಾದ್ ಅಮೀರ್ ಸೋಹೈಲ್‌ಗೆ ನೀಡಿದಂಥ ಟ್ರೀಟ್ ಮೆಂಟ್ಅನ್ನು ನೀಡಿದ್ದಾರೆ.
ಸಾಮಾನ್ಯವಾಗಿ ತಮ್ಮ ಮೇಲೆ ಬರುವ ಟೀಕೆಗಳಿಗೆ ಅಲ್ಲಿಂದಲ್ಲಿಗೆ ಪ್ರತಿಕ್ರಿಯೆ ನೀಡುವ ವೆಂಕಟೇಶ್ ಪ್ರಸಾದ್, ಜುಬೇರ್‌ನನ್ನು ಸತತವಾಗಿ ದ್ವೇಷವನ್ನೇ ಕಾರುವ ವ್ಯಕ್ತಿ ಎಂದು ಟೀಕಿಸಿದ್ದಾರೆ. 'ನನಗೆ ಬದಲು ಹಣ ಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಈತ ವೆಬ್‌ಸೈಟ್‌ಗೆ ದೇಣಿಗೆಯನ್ನೂ ಪಡೆಯುತ್ತಾರೆ. ಜನರನ್ನು ಮರುಳು ಮಾಡುವ ಮೂಲಕ ಬದುಕಲು ಈತನಿಗೆ ಒಂಚೂರು ನಾಚಿಕೆ ಅನಿಸೋದಿಲ್ಲ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಟ್ವೀಟ್ ಮಾಡಲು ಹಣ ಪಡೆದಿದ್ದಾಗಿ ಒಪ್ಪಿಕೊಂಡ ಜುಬೇರ್: ಸುಪ್ರೀಂಗೆ ಉ.ಪ್ರ. ಪೊಲೀಸ್ ಮಾಹಿತಿ
ಜುಬೇರ್ ಅವರನ್ನು ಟೀಕೆ ಮಾಡಿದ್ದಾಗಿ ಕಾಂಗ್ರೆಸ್‌ನ ಕೆಲ ನಾಯಕರು ವೆಂಕಟೇಶ್ ಪ್ರಸಾದ್ ವಿರುದ್ಧವೇ ಕಿಡಿಕಾರಿದ್ದಾರೆ. ಜುಬೇರ್ ಅವರನ್ನು ದ್ವೇಷಿ ಎಂದು ಕರೆದಿದ್ದಕ್ಕೆ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿವಿ ಮಾತನಾಡಿದ್ದು, ನಮ್ಮ ದಿಗ್ಗಜ ಆಟಗಾರರು ಹೇಗೆ ಪಾತಾಳಕ್ಕೆ ಇಳಿಯುತ್ತಾರೆ ಅನ್ನೋದನ್ನು ಇಲ್ಲಿ ನೋಡಿ ಎಂದು ಟ್ವೀಟ್‌ಅನ್ನು ಹಂಚಿಕೊಂಡಿದ್ದಾರೆ. ಇನ್ನು ಓವರ್‌ಸೀಸ್ ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ಸಂಯೋಜಕರಾಗಿರುವ ವಿಜಯ್ ತೊಟ್ಟತ್ತಿಲ್ ಕೂಡ ಟ್ವೀಟ್ ಮಾಡಿದ್ದು, ನಮ್ಮ ಬಾಲ್ಯದ ಹೀರೋಗಳು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಅನ್ನೋದನ್ನು ನೋಡೋಕೆ ಬೇಸರವಾಗುತ್ತದೆ. ಅಮೀರ್ ಸೊಹೇಲ್ ವಿಕೆಟ್ ಉರುಳಿಸಿದ ಕ್ಷಣ ಈಗಲೂ ನೆನಪಿಸಿದೆ ಮತ್ತು ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ಆದರೆ ತನ್ನ ಮಾಸ್ಟರ್ಸ್ ಅನ್ನು ಮೆಚ್ಚಿಸಲು ಜನರು ತಮ್ಮ ಘನತೆ, ಸ್ವಾಭಿಮಾನ ಮತ್ತು ವಿಶ್ವಾಸಾರ್ಹತೆಯನ್ನು ಮರೆತುಬಿಡುತ್ತಾರೆ! ಒಂದೇ ಕ್ಷಣಕ್ಕೆ ಅವರು ಹೀರೋದಿಂದ ಜೀರೋ ಆಗಿ ಬಿಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಮಾತನಾಡಿದ್ದು, ದಶಕಗಳಿಂದ ನಾನು ನಿಮ್ಮ ಅಭಿಮಾನಿ. ಮತ್ತು ಈ ಭಾಷೆ ನನ್ನ ಹೃದಯವನ್ನು ಭಗ್ನಮಾಡಿದೆ ವೆಂಕಿ ಸರ್ ಎಂದು ಬರೆದಿದ್ದಾರೆ. ತಮ್ಮ ವಿರುದ್ಧವಾಗಿ ಟ್ವೀಟ್ ಮಾಡಿದ ಪ್ರತಿಯೊಬ್ಬರಿಗೂ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿ ಉತ್ತರ ನೀಡಿದ್ದಾರೆ.
'ಹನುಮಾನ್ ಹೋಟೆಲ್' ಟ್ವೀಟ್ ಪ್ರಕರಣ: ಮೊಹಮ್ಮದ್ ಜುಬೇರ್‌ಗೆ ಜಾಮೀನು, ಆದರೆ ಜೈಲಿನಿಂದ ಬಿಡುಗಡೆ ಇಲ್ಲ!
Haha.. Says a serial hate- monger, who has put so many lives in danger for his agenda. You disguising as a fact-checker is like Terrorists talking about peace.
Now post that you need money to survive and ask for donation for your website, no shame in living off by fooling… https://t.co/CjPrtAdC24 pic.twitter.com/ei16dx1wPp