ವೈಭವ ತಾಂಡವ, ಟಿ20 ಇತಿಹಾಸ ಬರೆದ 14 ವರ್ಷದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ ಶತಕ!

Published : Apr 28, 2025, 10:38 PM ISTUpdated : Apr 28, 2025, 10:49 PM IST
ವೈಭವ ತಾಂಡವ, ಟಿ20 ಇತಿಹಾಸ ಬರೆದ 14 ವರ್ಷದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ ಶತಕ!

ಸಾರಾಂಶ

೧೪ ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಕೇವಲ ೩೫ ಎಸೆತಗಳಲ್ಲಿ ಶತಕ ಪೂರೈಸಿದ ಅವರು, ೩೮ ಎಸೆತಗಳಲ್ಲಿ ೪ ಬೌಂಡರಿ ಮತ್ತು ೧೧ ಸಿಕ್ಸರ್‌ಗಳೊಂದಿಗೆ ೧೦೧ ರನ್ ಗಳಿಸಿದರು. ದ್ರಾವಿಡ್ ಕೂಡ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಟಿ೨೦ ಇತಿಹಾಸದಲ್ಲೂ ಇದು ಅಪರೂಪದ ಸಾಧನೆ.

ಜೈಪುರ (ಏ.28): ಐಪಿಎಲ್‌ನಲ್ಲಿ ಹೊಸ ಸ್ಟಾರ್‌ ಉದಯವಾಗಿದೆ. ಯಾರೂ ನಿರೀಕ್ಷೆಯೇ ಮಾಡದಂಥ ಇನ್ನಿಂಗ್ಸ್‌ ಅಡಿದ 14 ವರ್ಷದ ರಾಜಸ್ಥಾನ ರಾಯಲ್ಸ್‌ ತಂಡದ ಆಟಗಾರ ವೈಭವ್‌ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದಿದ್ದಾರೆ.
ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಇವರಾಗಿದ್ದಾರೆ. ಕೇವಲ 14 ವರ್ಷ 32 ದಿನದಲ್ಲಿ ಅವರು ಶತಕ ಬಾರಿಸಿದ್ದಾರೆ. 2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯನಲ್ಲಿ ಕ್ರಿಸ್‌ಗೇಲ್‌ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದು ಐಪಿಎಲ್‌ನ ಅತಿವೇಗದ ಶತಕ ಎನಿಸಿದೆ. ವೈಭವ್‌ ಸೂರ್ಯವಂಶಿ ಸಿಕ್ಸರ್‌ನೊಂದಿಗೆ ಶತಕದ ಗಡಿ ಮುಟ್ಟಿದಾಗ ಸ್ವತಃ ರಾಹುಲ್‌ ದ್ರಾವಿಡ್‌ ವೀಲ್‌ಚೇರ್‌ನಿಂದ ಎದ್ದು ಸಂಭ್ರಮಿಸಿದ್ದಾರೆ.

ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಮಾತ್ರವಲ್ಲ, ಟಿ20 ಇತಿಹಾಸದಲ್ಲಿಯೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಇವರಾಗಿದ್ದಾರೆ. ಕೇವಲ 38 ಎಸೆತ ಆಟವಾಡಿದ ವೈಭವ್‌ ಸೂರ್ಯವಂಶಿ, 4 ಬೌಂಡರಿ ಹಾಗೂ 11 ಅಮೋಘ ಸಿಕ್ಸರ್‌ ಸಿಡಿಸಿ 101 ರನ್ ಬಾರಿಸಿದ್ದಾಗ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಔಟಾದರು.

ಯಾರೀತ ವೈಭವ್‌ ಸೂರ್ಯವಂಶಿ (Who is Vaibhav Suryavanshi:  ವೈಭವ್ ಸೂರ್ಯವಂಶಿ ಕೇವಲ 13 ನೇ ವಯಸ್ಸಿನಲ್ಲಿ ಐಪಿಎಲ್ ಒಪ್ಪಂದ ಪಡೆದುಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಚೆನ್ನೈನಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದಲ್ಲಿ ಆಸ್ಟ್ರೇಲಿಯಾ U19 ವಿರುದ್ಧ ಭಾರತ U19 ಪರ ಶತಕ ಗಳಿಸಿದ ಎರಡು ತಿಂಗಳಲ್ಲಿ ಅವರು ಐಪಿಎಲ್ 2025ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಹಿ ಹಾಕಿದರು.

ಬಿಹಾರದ ಸಮಷ್ಟಿಪುರದ ಎಡಗೈ ಬ್ಯಾಟ್ಸ್‌ಮನ್ 2024 ರ ಜನವರಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು, ರಣಜಿ ಟ್ರೋಫಿಯಲ್ಲಿ ಆಡಿದ ಎರಡನೇ ಕಿರಿಯ ಆಟಗಾರ ಎನ್ನುವ ಶ್ರೇಯವೂ ಇವರದಾಗಿದೆ. ಆದರೆ, ರಣಜಿಯಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಆ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ U19 ವಿರುದ್ಧ ಶತಕ ಮತ್ತು UAE ನಲ್ಲಿ ನಡೆದ U19 ಏಷ್ಯಾ ಕಪ್‌ನಲ್ಲಿ ಒಂದೆರಡು ಅರ್ಧಶತಕಗಳ ಮೂಲಕ ಯುವ ಕ್ರಿಕೆಟಿಗ ಭರವಸೆ ಮೂಡಿಸಿದ್ದರು. ನಾಗ್ಪುರದಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಇವರ ಆಟವನ್ನು ರಾಜಸ್ಥಾನ ತಂಡದ ಮ್ಯಾನೇಜ್‌ಮೆಂಟ್‌ಗೆ ಮೆಚ್ಚುಗೆಯಾಗಿತ್ತು. ಬಳಿಕ ಹರಾಜಿನಲ್ಲಿ 1.1 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್‌ ತಂಡ ಖರೀದಿಸಿತ್ತು. ವೈಭವ್‌ನನ್ನು ಸೇರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ಪೈಪೋಟಿ ನೀಡಿತ್ತು.

ಟಿ20 ಶತಕ ಬಾರಿಸಿದ ಕಿರಿಯ ಆಟಗಾರ: ವೈಭವ್‌ ಸೂರ್ಯವಂಶಿ ಐಪಿಎಲ್‌ ಮಾತ್ರವಲ್ಲ ಟಿ20 ಇತಿಹಾಸದಲ್ಲಿಯೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಹಾರಾಷ್ಟ್ರದ ವಿಜಯ್‌ ಜೋಲ್‌ ಹೆಸರಲ್ಲಿತ್ತು. 2013ರಲ್ಲಿ ವಿಜಯ್‌ ಜೋಲ್‌ ಮುಂಬೈ ವಿರುದ್ಧ 18 ವರ್ಷ 118ನೇ ದಿನದಲ್ಲಿ ಶತಕ ಬಾರಿಸಿದ್ದು ದಾಖಲೆಯಾಗಿತ್ತು.

8ನೇ ಕ್ಲಾಸ್‌ ಹುಡುಗನಿಂದ ಐಪಿಎಲ್‌ನಲ್ಲಿ ಫಿಫ್ಟಿ, ಇತಿಹಾಸ ಬರೆದ ವೈಭವ್‌ ಸೂರ್ಯವಂಶಿ!

ಸಿಕ್ಸರ್‌ಗಳಲ್ಲೂ ರೆಕಾರ್ಡ್‌: ವೈಭವ್‌ ಸೂರ್ಯವಂಶಿ ಬಾರಿಸಿದ 11 ಸಿಕ್ಸರ್‌ ಕೂಎ ದಾಖಲೆಯಾಗಿದೆ. ಐಪಿಎಲ್‌ನಲ್ಲಿ ಭಾರತದ ಆಟಗಾರನೊಬ್ಬ ಬಾರಿಸಿದ ಜಂಟಿ ಗರಿಷ್ಠ ಶತಕ ಎನಿಸಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ನ ಮುರಳಿ ವಿಜಯ್‌ ಕೂಡ 11 ಸಿಕ್ಸರ್‌ ಬಾರಿಸಿದ್ದರು.

8ನೇ ತರಗತಿ ಹುಡುಗನ ಐಪಿಎಲ್ ಅಟ ನೋಡಲು ರಾತ್ರಿಯಿಡಿ ಎಚ್ಚರವಿದ್ದೆ: google CEO ಸುಂದರ್ ಪಿಚೈ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!