
ಮುಂಬೈ(ಆ.14): ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಾಂದ್ ತಮ್ಮ 28ನೇ ವಯಸ್ಸಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಅವರು ಅಮೆರಿಕದಲ್ಲಿ ಟಿ20 ಲೀಗ್ ಆಡಲು ತೆರಳಲಿದ್ದಾರೆ ಎನ್ನಲಾಗಿದೆ. ವಿದೇಶಿ ಲೀಗ್‌ಗಳಲ್ಲಿ ಆಡಬೇಕಿದ್ದರೆ ಭಾರತೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಬೇಕು ಎನ್ನುವ ಬಿಸಿಸಿಐ ನಿಯಮವನ್ನು ಚಾಂದ್ ಪಾಲಿಸಿದ್ದಾರೆ.
2012ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ, ಚಾಂದ್ ನೇತೃತ್ವದಲ್ಲಿ ಚಾಂಪಿಯನ್ ಆಗಿತ್ತು. ಆಸ್ಪ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಚಾಂದ್ ಅಜೇಯ 111 ರನ್ ಸಿಡಿಸಿದ್ದರು. ಆದರೆ ಅಂಡರ್-19 ವಿಭಾಗದಲ್ಲಿ ಸಾಧಿಸಿದ ಯಶಸ್ಸನ್ನು ಆ ಬಳಿಕ ಮುಂದುವರಿಸುವಲ್ಲಿ ಚಾಂದ್ ವಿಫಲರಾಗಿದ್ದರು. ಐಪಿಎಲ್‌ನಲ್ಲಿ ಹಲವು ಅವಕಾಶಗಳು ಸಿಕ್ಕರೂ ಅವುಗಳ ಉಪಯೋಗ ಪಡೆಯಲಿಲ್ಲ.
ಐಸಿಸಿ ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡಗಳನ್ನು ಹೆಸರಿಸಿದ ಹರ್ಷಲ್ ಗಿಬ್ಸ್..!
ದೆಹಲಿ, ಉತ್ತರಾಖಂಡ ಪರ ರಣಜಿ ಟ್ರೋಫಿಯಲ್ಲಿ ಉನ್ಮುತ್ ಆಡಿದ್ದರು. ಒಟ್ಟು 67 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 8 ಶತಕ, 16 ಅರ್ಧಶತಕಗಳೊಂದಿಗೆ 3,379 ರನ್ ಕಲೆಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.