ಅಂಡರ್‌-19 ವಿಶ್ವಕಪ್‌: ಭಾರತ ಸೆಮಿಫೈನಲ್‌ಗೆ ಪ್ರವೇಶ

By Kannadaprabha News  |  First Published Jan 29, 2020, 8:45 AM IST

ಪ್ರಿಯಂ ಗರ್ಗ್ ನೇತೃತ್ವದ ಟೀಂ ಇಂಡಿಯಾ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಸೆಮೀಸ್‌ಗೆ ಲಗ್ಗೆಯಿಟ್ಟಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಪೊಚೆಸ್ಟ್ರೋಮ್‌(ಜ.29): ಐಸಿಸಿ ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ. ಮಂಗಳವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತ ತಂಡ, 3 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ 74 ರನ್‌ಗಳ ಗೆಲುವು ಸಾಧಿಸಿದೆ. 2008ರ ಬಳಿಕ ಇದೇ ಮೊದಲ ಬಾರಿಗೆ ಆಸ್ಪ್ರೇಲಿಯಾ ಸೆಮೀಸ್‌ ಹಂತಕ್ಕೆ ಪ್ರವೇಶಿಸದೆ ಕ್ವಾರ್ಟರ್‌ನಲ್ಲೇ ನಿರ್ಗಮಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಇಳಿದ ಭಾರತ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 4ನೇ ವಿಕೆಟ್‌ಗೆ ಯಶಸ್ವಿ ಜೊತೆಯಾದ ದ್ರುವ್‌ ಜುರೆಲ್‌ ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಯಶಸ್ವಿ (62) ರನ್‌ಗಳಿಸಿದರು. ಒಂದು ಹಂತದಲ್ಲಿ 144ಕ್ಕೆ 6 ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಅಥರ್ವ ಹಾಗೂ ರವಿ ಬಿಶ್ನಾಯ್‌ ಆಸರೆಯಾದರು. ಅಥರ್ವ ಅಜೇಯ 55 ರನ್‌ಗಳಿಸಿದರೆ, ರವಿ ಬಿಶ್ನಾಯ್‌ (30) ರನ್‌ಗಳಿಸಿದರು.

Latest Videos

undefined

ಅಂಡರ್ 19 ವಿಶ್ವಕಪ್: ಆಸ್ಟ್ರೇಲಿಯಾಗೆ ಸ್ಫರ್ಧಾತ್ಮಕ ಗುರಿ ನೀಡಿದ ಭಾರತ

ಸವಾಲಿನ ಗುರಿ ಬೆನ್ನತ್ತಿದ ಆಸ್ಪ್ರೇಲಿಯಾ, ಭಾರತದ ವೇಗಿ ಕಾರ್ತಿಕ್‌ ತ್ಯಾಗಿ ದಾಳಿಯ ಮುಂದೆ ರನ್‌ಗಳಿಸಲು ಪರದಾಡಿತು. ಕೇವಲ 4 ರನ್‌ಗಳಿಸುವಷ್ಟರಲ್ಲಿ ಆಸೀಸ್‌ನ ಪ್ರಮುಖ 3 ವಿಕೆಟ್‌ ಉರುಳಿದ್ದವು. ಆಸೀಸ್‌ ಪರ ಆರಂಭಿಕ ಸ್ಯಾಮ್‌ ಫ್ಯಾನಿಂಗ್‌ (75), ಸ್ಕಾಟ್‌ (35), ಪ್ಯಾಟ್ರಿಕ್‌ (21) ರನ್‌ಗಳಿಸಿದ್ದು ಹೊರತುಪಡಿಸಿದರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು.

ಸ್ಕೋರ್‌: ಭಾರತ 233/9, (ಯಶಸ್ವಿ 62, ಅಥರ್ವ 55*, ಮುರ್ಪೆ 2-40)

ಆಸ್ಪ್ರೇಲಿಯಾ 159/10, (ಫ್ಯಾನಿಂಗ್‌ 75, ಸ್ಕಾಟ್‌ 35, )

click me!