ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ ಬಹುಮಾನ ಘೋಷಿಸಿದೆ. ಇದೀಗ ಈ ಪೈಕಿ ಹಾರ್ದಿಕ್ ಪಾಂಡ್ಯ ಗೆಲುವಿನ ಮೊತ್ತವನ್ನು ತಾಯಿ ಖಾತೆಗೆ ಹಾಕಿಬಿಡಿ ಎಂಬ ಮೀಮ್ಸ್ ಹರಿದಾಡುತ್ತಿದೆ.
ಬಾರ್ಬಡೋಸ್(ಜು.02) ಟಿ20 ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಭಾರತ ಟ್ರೋಫಿ ಗೆಲ್ಲುತ್ತಿದ್ದಂತೆ ಪಾಂಡ್ಯ ಭಾವುಕರಾಗಿದ್ದರು. ಇತರ ಆಟಗಾರರಿಗೆ ತಮ್ಮ ಪತ್ನಿಯರು ಅಪ್ಪಗೆ ನೀಡಿದ್ದರು, ಕೆಲವರು ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಆದರೆ ಪಾಂಡ್ಯಗೆ ಟೀಮ್‌ಮೇಟ್ಸ್ ಅಪ್ಪುಗೆ ಮಾತ್ರವಾಯಿತು. ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಡಿವೋರ್ಸ್ ಸುದ್ದಿಗಳ ಬೆನ್ನಲ್ಲೇ ಇದೀಗ ಮತ್ತೆ ಹಾರ್ದಿಕ್ ಪಾಂಡ್ಯ ಮೀಮ್ಸ್ ಹರಿದಾಡುತ್ತಿದೆ. ಬಿಸಿಸಿಐ ಘೋಷಿಸಿರುವ ಬಹುಮಾನ ಮೊತ್ತವನ್ನೂ ತಾಯಿ ಖಾತೆಗೆ ಹಾಕಿಬಿಡಿ ಅನ್ನೋ ಮೀಮ್ಸ್ ಭಾರಿ ವೈರಲ್ ಆಗುತ್ತಿದೆ.
ಹಾರ್ದಿಕ್ ಪಾಂಡ್ಯ ಹಾಗೂ ನತಾಶ್ ವಿಚ್ಛೇದನ ಸುದ್ದಿ ಹರಿದಾಡುತ್ತಿದ್ದಂತೆ ಹಳೇ ವಿಡಿಯೋಗಳು ವೈರಲ್ ಆಗಿತ್ತು. ಪಾಂಡ್ಯ ಸಂದರ್ಶನದ ವೇಳೆ ಹೇಳಿದ್ದ, ನನ್ನ ಖಾತೆಯಲ್ಲಿ ನನ್ನ ಹೆಸರಿನಲ್ಲಿ ಆಸ್ತಿಗಳಿಲ್ಲ. ಎಲ್ಲವೂ ತಾಯಿ ಹೆಸರಿನಲ್ಲಿದೆ. ತಾಯಿ ಮುಖ್ಯ. ಇದರಿಂದ ಮುಂದೆ ಏನೇ ಆದರೂ ನಾವು ಯಾರಿಗೂ ಅರ್ಧ ಭಾಗ ಕೊಡಬೇಕಿಲ್ಲ ಎಂದಿದ್ದರು. ನತಾಶ ಜೊತೆಗಿನ ಸಂಬಂಧ ಮುರಿದು ಬಿದ್ದಿದೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆ ಈ ಹಳೆ ವಿಡಿಯೋಗಳು ವೈರಲ್ ಆಗಿತ್ತು. ಪಾಂಡ್ಯ ಗುಜರಾತಿ ಅನ್ನೋದು ಸಾಬೀತಾಯಿತು ಎಂದು ಹಲವರು ಕಮೆಂಟ್ ಮಾಡಿದ್ದರು. ಇದೀಗ ಇದೇ ವಿಚಾರ ಮುಂದಿಟ್ಟುಕೊಂಡು ಹಲವರು ಮೀಮ್ಸ್ ಮಾಡಿದ್ದಾರೆ.
T20 ವರ್ಲ್ಡ್‌ಕಪ್ ಗೆಲುವಿನ ರೂವಾರಿಗಳಾದ ಕೊಹ್ಲಿ, ರೋಹಿತ್, ಬುಮ್ರಾ ಮತ್ತು ಪಾಂಡ್ಯರ ನೆಟ್‌ವರ್ತ್ ಎಷ್ಷು ನೋಡಿ
ಬಿಸಿಸಿಐ ಸೆಕ್ರಟರಿ ಜಯ್ ಶಾ ಬಳಿ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವ ಮೀಮ್ಸ್ ಇದಾಗಿದೆ. ನನ್ನ ಗೆಲುವಿನ ಹಣವನ್ನು ನೇರವಾಗಿ ತಾಯಿ ಖಾತೆಗೆ ಹಾಕಿಬಿಡಿ ಎಂದು ಮನವಿ ಮಾಡುವ ಈ ಮೀಮ್ಸ್ ವೈರಲ್ ಆಗಿದೆ. ಪಾಂಡ್ಯಗೆ ಈ ರೀತಿ ಹೇಳುವ ಅಗತ್ಯವಿಲ್ಲ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಇತ್ತ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಪಾಂಡ್ಯ. ಹೀಗಾಗಿ ಮೀಮ್ಸ್ ಟ್ರೋಲ್ ಮಾಡುವುದು ನಿಲ್ಲಿಸಿ ಎಂದು ಮತ್ತೆ ಕೆಲವರು ಸಲಹೆ ನೀಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ದದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದ್ದರು. ಪ್ರಮುಖವಾಗಿ ಅಂತಿಮ ಓವರ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಕೊನೆಯ ಓವರ್ ಎಲ್ಲರ ಎದೆಬಡಿತ ಹೆಚ್ಚಿಸಿತ್ತು. ಆದರೆ ತಾಳ್ಮೆಯಿಂದ ಬೌಲಿಂಗ್ ಮಾಡಿದ ಪಾಂಡ್ಯ ಗೆಲುವಿನ ಬಳಿಕ ಭಾವುಕರಾಗಿದ್ದರು.
ಟೀಂ ಇಂಡಿಯಾಕ್ಕೆ ಶೀಘ್ರವೇ ಹೊಸ ಕೋಚ್, ಟಿ20 ನಾಯಕ ನೇಮಕ: ಜಯ್ ಶಾ
ಐಸಿಸಿಯಿಂದ ಟೀಂ ಇಂಡಿಯಾ 20 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ. ಇತ್ತ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.