ಮಿಥಾಲಿ ರಾಜ್ ಜೀವನಾಧಾರಿತ 'ಶಬ್ಬಾಶ್ ಮಿಥೂ' ಸಿನೆಮಾದ ಟ್ರೇಲರ್ ರಿಲೀಸ್‌..!

Published : Jun 20, 2022, 02:03 PM ISTUpdated : Jun 20, 2022, 05:16 PM IST
ಮಿಥಾಲಿ ರಾಜ್ ಜೀವನಾಧಾರಿತ 'ಶಬ್ಬಾಶ್ ಮಿಥೂ' ಸಿನೆಮಾದ ಟ್ರೇಲರ್ ರಿಲೀಸ್‌..!

ಸಾರಾಂಶ

ಶಬ್ಬಾಶ್ ಮಿಥೂ ಚಿತ್ರದ ಟ್ರೇಲರ್ ರಿಲೀಸ್‌ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ಶಬ್ಬಾಶ್ ಮಿಥೂ ಮಿಥಾಲಿ ರಾಜ್ ಪಾತ್ರದಲ್ಲಿ ಮಿಂಚಿರುವ ತಾಪ್ಸಿ ಪನ್ನು

ಬೆಂಗಳೂರು(ಜೂ.20): ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಹಾಗೂ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನಾಧಾರಿತ ಚಿತ್ರ 'ಶಬ್ಬಾಶ್ ಮಿಥೂ' (Shabaash Mithu) ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸೋಮವಾರ(ಜೂ.20)ವಾದ ಇಂದು 'ಶಬ್ಬಾಶ್ ಮಿಥು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಿಥಾಲಿ ರಾಜ್ ಪಾತ್ರವನ್ನು ತಾಪ್ಸಿ ಪನ್ನು ನಿರ್ವಹಿಸಿದ್ದು ಮುಂಬರುವ ಜುಲೈ 15ರಂದು 'ಶಬ್ಬಾಶ್ ಮಿಥು' ಚಿತ್ರವು ತೆರೆಗೆ ಅಪ್ಪಳಿಸಲಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj), ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮದೇ ಜೀವನಾಧಾರಿತ ಚಿತ್ರದ ಟ್ರೇಲರ್ ಪೋಸ್ಟ್ ಮಾಡಿದ್ದು, ಕೆಲವೇ ಗಂಟೆಗಳೊಳಗಾಗಿ 40,000 ಕ್ಕೂ ಅಧಿಕ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ಸುಮಾರು 2:44 ನಿಮಿಷಗಳ ಕಾಲ ಇರುವ ಟ್ರೇಲರ್‌ನಲ್ಲಿ ಮಿಥಾಲಿಯವರ ಕೆಲ ಇಂಟ್ರೆಸ್ಟಿಂಗ್ ಮಾಹಿತಿಯನ್ನು ರಿವೀಲ್ ಮಾಡುವ ಯತ್ನ ನಡೆಸಲಾಗಿದೆ. ಇನ್ನು ಭಾರತದ ಮತ್ತೋರ್ವ ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿಯವರ (Jhulan Goswami) ಜೀವನಾಧಾರಿತ ಚಿತ್ರ 'ಚಕ್ಡಾ ಎಕ್ಸ್‌ಪ್ರೆಸ್' ಸಿನೆಮಾ ಕೂಡಾ ಇದೇ ವರ್ಷ ತೆರೆಗೆ ಅಪ್ಪಳಿಸುವ ನಿರೀಕ್ಷೆಯಿದ್ದು, ಜೂಲನ್ ಗೋಸ್ವಾಮಿಯವರ ಪಾತ್ರದಲ್ಲಿ ವಿರಾಟ್ ಕೊಹ್ಲಿ (Virat Kohli) ಪತ್ನಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.

ಮಿಥಾಲಿ ರಾಜ್ ತಮ್ಮ ಜೀವನಾಧಾರಿತ ಚಿತ್ರದ ಟ್ರೇಲರ್ ಜತೆಗೆ ''ಒಂದು ಕ್ರೀಡೆ, ಒಂದು ದೇಶ, ಒಂದು ಮಹತ್ವಾಕಾಂಕ್ಷೆ.. ನನ್ನ ಕನಸು..! ತಂಡಕ್ಕೆ ಕೃತಜ್ಞತೆಗಳು ಹಾಗೂ ನನ್ನ ಕಥೆಯನ್ನು ನಿಮ್ಮೆಲ್ಲರ ಜತೆ ಹಂಚಿಕೊಳ್ಳಲು ಉತ್ಸಕಳಾಗಿದ್ದೇನೆ'' ಎಂದು ಬರೆದುಕೊಂಡಿದ್ದಾರೆ.

39 ವರ್ಷದ ಮಿಥಾಲಿ ರಾಜ್‌ ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶ ಕಂಡಂತಹ ಅತ್ಯಂತ ದಿಗ್ಗಜ ಕ್ರೀಡಾಪಟುಗಳಲ್ಲಿ ಮಿಥಾಲಿ ರಾಜ್ ಕೂಡಾ ಒಬ್ಬರೆನಿಸಿದ್ದಾರೆ. ಬಲಗೈ ಬ್ಯಾಟರ್ ಮಿಥಾಲಿ ರಾಜ್, ಭಾರತ ತಂಡದ ಪರ 232 ಏಕದಿನ ಪಂದ್ಯಗಳನ್ನಾಡಿ 50.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,805 ರನ್ ಬಾರಿಸಿದ್ದಾರೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ 64 ಅರ್ಧಶತಕ ಹಾಗೂ 7 ಶತಕಗಳನ್ನು ಸಿಡಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 8 ವಿಕೆಟ್ ಕಬಳಿಸುವಲ್ಲಿಯೂ ಮಿಥಾಲಿ ರಾಜ್ ಯಶಸ್ವಿಯಾಗಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ವಿಚಾರಕ್ಕೆ ಬರುವುದಾದರೇ, ಮಿಥಾಲಿ ರಾಜ್ ಭಾರತ ಪರ 89 ಟಿ20 ಹಾಗೂ 12 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟಾರೆ 2,364 ರನ್ ಬಾರಿಸಿದ್ದಾರೆ.

ಮಳೆಯಿಂದ Ind vs SA ಟಿ20 ಪಂದ್ಯ ರದ್ದು, ಬಿಸಿಸಿಐ ವಿರುದ್ದ ಅಸಮಾಧಾನ ಹೊರಹಾಕಿದ ಫ್ಯಾನ್ಸ್‌..!

ಅನುಭವಿ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಹೆಸರಿನಲ್ಲಿ ಅಪಾರ ದಾಖಲೆಗಳಿವೆ. 2000ದಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ ದಕ್ಷಿಣ ಆಫ್ರಿಕಾ ಎದುರು ಅರ್ಧಶತಕ ಸಿಡಿಸುವ ಮೂಲಕ, ವಿಶ್ವಕಪ್ ಟೂರ್ನಿಯಲ್ಲಿ ಅತಿಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಇನ್ನು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಹಿರಿಯ ಆಟಗಾರ್ತಿ ಎನ್ನುವ ದಾಖಲೆ ಕೂಡಾ ಮಿಥಾಲಿ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಮಿಥಾಲಿ ರಾಜ್ ಇದೀಗ ಎರಡನೇ ಇನಿಂಗ್ಸ್ ಆರಂಭಿಸಲು ಎದುರು ನೋಡುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ