
ಬೆಂಗಳೂರು: ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಧೋನಿ, ಐಪಿಎಲ್ ಆಡುತ್ತಿದೆ. ಧೋನಿಯ 5 ಅದ್ಭುತ ತೀರ್ಮಾನ ನೋಡೋಣ
1. ರೋಹಿತ್ ಶರ್ಮಾ ಓಪನ್ನರ್ ಮಾಡಿದ್ದು:
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಭಾರತ ತಂಡ ಕಂಡ ಯಶಸ್ವಿ ಆರಂಭಿಕ ಬ್ಯಾಟರ್ ಎನಿಸಿಕೊಳ್ಳಲು ಕಾರಣವಾಗಿದ್ದು, ಧೋನಿಯ ಮಾಸ್ಟರ್ ಮೈಂಡ್ ತೀರ್ಮಾನ. ಟೀಂ ಇಂಡಿಯಾದ ಆರಂಭದ ದಿನಗಳಲ್ಲಿ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದ ಬ್ಯಾಟರ್ ಅಗಿ ಗುರುತಿಸಿಕೊಂಡಿದ್ದರು. ಆದರೆ ರೋಹಿತ್‌ಗೆ ಸಿಕ್ಕ ಯಶಸ್ಸು ಅಷ್ಟಕ್ಕಷ್ಟೇ. ಆದರೆ ಕ್ಯಾಪ್ಟನ್ ಆಗಿದ್ದ ಧೋನಿ, ರೋಹಿತ್ ಶರ್ಮಾ ಅವರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿದ ಬಳಿಕ ಅವರ ಅದೃಷ್ಟವೇ ಬದಲಾಗಿ ಹೋಯಿತು. ಇದೀಗ ಹಿಟ್‌ಮ್ಯಾನ್ ಭಾರತ ತಂಡ ಕಂಡ ದಿಗ್ಗಜ ಆರಂಭಿಕ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.
2. ಯುವಕರಿಗಾಗಿ ತಮ್ಮ ಸ್ಥಾನ ತ್ಯಾಗ ಮಾಡಿದ ಧೋನಿ:
ಎಂ ಎಸ್ ಧೋನಿ, ಸೌರವ್ ಗಂಗೂಲಿ ನಾಯಕತ್ವದಡಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಧೋನಿಯನ್ನು ನಂ.3 ಕ್ರಮಾಂಕದಲ್ಲಿ ಕಣಕ್ಕಿಳಿಸಲು ದಾದಾ ತೀರ್ಮಾನಿಸಿದರು. ಮೂರನೇ ಕ್ರಮಾಂಕದಲ್ಲಿ ಧೋನಿ ಪಾಕ್ ಎದುರು 148 ಹಾಗೂ ಲಂಕಾ ಎದುರು 183 ರನ್ ಸಿಡಿಸಿ ಅಬ್ಬರಿಸಿದ್ದರು. ಹೀಗಿದ್ದೂ ಧೋನಿ ಕ್ಯಾಪ್ಟನ್ ಆದ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 6-7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ಇದಕ್ಕೆ ಕಾರಣ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದಾಗಿತ್ತು. ಇನ್ನು ಇದೆಲ್ಲದರ ಹೊರತಾಗಿಯೂ ಧೋನಿ, ಭಾರತ ತಂಡ ಕಂಡ ಗ್ರೇಟೆಸ್ಟ್ ಮ್ಯಾಚ್ ಫಿನಿಶರ್ ಎನಿಸಿಕೊಂಡರು ಎನ್ನುವುದು ಅಚ್ಚರಿ ಎನಿಸಿದರು ಸತ್ಯ.
3. ಹಿರಿಯ ಆಟಗಾರರನ್ನು ಬದಿಗೆ ಸರಿಸಿ ಯುವ ಆಟಗಾರರಿಗೆ ಅವಕಾಶ ನೀಡಿದ್ದು:
ಧೋನಿ ಟೀಂ ಇಂಡಿಯಾ ನಾಯಕರಾಗುತ್ತಿದ್ದಂತೆಯೇ ಯುವ ತಂಡವನ್ನು ಕಟ್ಟುವ ಕಡೆ ಗಮನ ಹರಿಸಿದರು. ಇದರ ಭಾಗವಾಗಿ 2011ರ ವಿಶ್ವಕಪ್ ವಿಜೇತ ತಂಡದಲ್ಲಿ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರಿಗೆ ಮಣೆ ಹಾಕಿರಲಿಲ್ಲ. ಯುವ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಧೋನಿ, ಸಾಕಷ್ಟು ಹಿರಿಯ ಆಟಗಾರರಿಗೆ ಗೇಟ್‌ಪಾಸ್ ನೀಡಿದರು. ಇದು ಕಠಿಣ ತೀರ್ಮಾನವಾಯಿತಾದರೂ, ಜಡೇಜಾ, ಅಶ್ವಿನ್, ಧವನ್ ಅವರಂತಹ ಆಟಗಾರರು ಭಾರತಕ್ಕೆ ಸಿಕ್ಕಿದ್ದು ವರದಾನವಾಯಿತು.
4. ಚಾಂಪಿಯನ್ಸ್ ಟ್ರೋಫಿಗಾಗಿ ಧೋನಿ ಮಾಸ್ಟರ್ ಪ್ಲಾನ್:
2013 ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಧೋನಿ ಯುವ ಆಟಗಾರರ ಪಡೆ ಸಿದ್ದಪಡಿಸಿದರು. ಹೀಗಾಗಿ 2011ರ ಏಕದಿನ ವಿಶ್ವಕಪ್ ತಂಡದಲ್ಲಿದ್ದ ಹಿರಿಯ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಅವರನ್ನು ಬದಿಗೆ ಸರಿಸಿದರು. ಧವನ್-ರೋಹಿತ್ ಆರಂಭಿರನ್ನಾಗಿ ಮಾಡಿದರು. ಇದು ಧೋನಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಅನುಕೂಲವಾಯಿತು.
5. ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ:
ಧೋನಿ ಯಾವಾಗ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ ಯಾರೂ ಜಡ್ಜ್ ಮಾಡೋಕೆ ಆಗಲ್ಲ. 2014ರಲ್ಲಿ ಧೋನಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ದಿಢೀರ್ ಎನ್ನುವಂತೆ ಬಾರ್ಡರ್-ಗವಾಸ್ಕರ್ ಸರಣಿಯ ಮಧ್ಯದಲ್ಲಿಯೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಆ ಸಮಯದಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ತೋರುತ್ತಿರಲಿಲ್ಲ. ಹೀಗಾಗಿ ಧೋನಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದರು. ಬಳಿಕ ವಿರಾಟ್ ಕೊಹ್ಲಿಗೆ ಭಾರತ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಯಿತು. ಕೊಹ್ಲಿ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡವು ಹಳೆ ವೈಭವಕ್ಕೆ ಮರಳುವಲ್ಲಿ ಯಶಸ್ವಿಯಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.